Headlines

ಶಾಲಾ ವಿದ್ಯಾರ್ಥಿಗಳ ಅಪಘಾತ ಹೆಚ್ಚಳ ಹಿನ್ನೆಲೆ – ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ತಿಳಿಹೇಳಿದ ಶಾಸಕ ಹಾಲಪ್ಪ : ವೀಡಿಯೋ ವೈರಲ್|viral

ಕಳೆದ ಕೆಲವು ದಿನಗಳಿಂದ ಸಾಗರ ತಾಲೂಕಿನಲ್ಲಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಗಳ ಸಾವು-ನೋವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ  ಶಾಸಕ ಹಾಲಪ್ಪ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.




 ಶಾಲಾ ಕಾಲೇಜುಗಳ ಸಭೆ ಸಮಾರಂಭಗಳಲ್ಲಿ ಹಾಗೂ ಕ್ಷೇತ್ರದಾದ್ಯಂತ ಕಾರಿನಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿಗಳು ರಸ್ತೆಯಲ್ಲಿ ಸಂಚರಿಸುವಾಗ ಸುರಕ್ಷತೆಯಿಂದ ಹೇಗೆ ಸಂಚಾರ ಮಾಡಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಾಗರ ಪಟ್ಟಣದಲ್ಲಿ ಹಾಗೂ ಆನಂದಪುರ ಸಮೀಪದಲ್ಲಿ ರಸ್ತೆ ಅಪಘಾತಗಳಲ್ಲಿ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಈ ಪ್ರಕರಣಗಳಲ್ಲಿ ವಾಹನಗಳ ಚಾಲಕರ ಅಜಾಗ್ರಕತೆಯ ಬಗ್ಗೆ ಕೂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. 


 ಬದುಕಿ ಬಾಳಬೇಕಾದ, ಉಜ್ವಲ ಭವಿಷ್ಯದ ಕನಸನ್ನು ಹೊತ್ತ ವಿದ್ಯಾರ್ಥಿಗಳು ಅಕಾಲಿಕವಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದನ್ನು ಕಂಡು ಶಾಸಕರು ನೊಂದಿದ್ದರು.  ಈ ಹಿನ್ನೆಲೆಯಲ್ಲಿ ತಾವೇ ಸ್ವತಃ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ರಸ್ತೆ ಅಪಘಾತ ಆಗದಂತೆ ಸುರಕ್ಷತೆಯನ್ನು ವಹಿಸುವಂತೆ ಖುದ್ದು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ.  

ಕಾರಿನಲ್ಲಿ ಹೋಗುತ್ತಿದ್ದ ಶಾಸಕ ಹರತಾಳು ಹಾಲಪ್ಪ ಪಾದಚಾರಿ ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸಿದರು. ಇತ್ತೀಚೆಗೆ ನೆಡೆಯುತ್ತಿರುವ ಅಪಘಾತ ಪ್ರಕರಣಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಎಷ್ಟು ಜಾಗ್ರತೆ ವಹಿಸಿದರು ಸಾಲದು. ಶಾಸಕ ಹಾಲಪ್ಪ  ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮದ್ಯ ಕಾಲೇಜು ವಿದ್ಯಾರ್ಥಿಗಳು ಗುಂಪು ನೋಡಿದ್ದಾರೆ. 5 -6 ಜನರ ಗುಂಪು ಅಕ್ಕಪಕ್ಕ ನಡೆಯುತ್ತಾ ವಾಹನ ಸಂಚಾರಕ್ಕೆ ಅವಕಾಶ ನೀಡದೆ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಗಮನಿಸಿದ್ದಾರೆ. ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಪಾಠ ಹೇಳಿದ್ದಾರೆ. ಅಪಘಾತ ನಡೆದಾಗ ಚಾಲಕನ ಅಜಾಗರೂಕತೆ ಎಂದು ಹೇಳುವುದರಿಂದ ಪ್ರಯೋಜನವಿಲ್ಲ. ಅಪಘಾತ ನಡೆಯದಂತೆ ಎಚ್ಚರ ವಹಿಸುವುದು ಕೂಡ ಪಾದಚಾರಿಗಳ ಕರ್ತವ್ಯ ರಸ್ತೆಯಲ್ಲಿ ನಡೆಯುವಾಗ ಬಲಬಾಗದಲ್ಲಿ ನಡೆಯಬೇಕು ಎನ್ನುವ ಬದಲಾದ ನಿಯಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.




ರಸ್ತೆಯ ಬಲಭಾಗದಲ್ಲಿ ನಡೆದರೆ ಎದುರಿನಿಂದ ಬರುವ ವಾಹನಗಳು ಕಾಣಿಸುತ್ತದೆ.  ಅದೇ ರಸ್ತೆಯ ಎಡ ಭಾಗದಲ್ಲಿ ನಡೆದರೆ ಹಿಂಬದಿಂದ ಬರುವ ವಾಹನಗಳು ಕಾಣಿಸುವುದಿಲ್ಲ.  ಎಡ ಭಾಗದಲ್ಲಿ ನಡೆಯುವುದರಿಂದ ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಪ್ರತಿಯೊಬ್ಬರ ಜೀವ ಮತ್ತು ಬದುಕು ಮುಖ್ಯ ರಸ್ತೆಯಲ್ಲಿ ಸುರಕ್ಷಿತವಾಗಿ ಸಂಚರಿಸಿ ಎಂದು ತಿಳಿ ಹೇಳಿದರು.




ರಸ್ತೆ ಸುರಕ್ಷತೆ ಬಗ್ಗೆ ಕೇಳಿದ ವಿದ್ಯಾರ್ಥಿಗಳು ಹಾಗೆಯೇ ಪಾಲಿಸುವುದಾಗಿ ಹೇಳಿದ್ದಲ್ಲದೆ ಶಾಸಕರಿಗೆ ಧನ್ಯವಾದಗಳು ತಿಳಿಸಿ ಮುಂದೆ ಸಾಗಿದ್ದಾರೆ.

Leave a Reply

Your email address will not be published. Required fields are marked *