ರಿಪ್ಪನ್ ಪೇಟೆ : ಪಟ್ಟಣದ ಕ್ಷತ್ರೀಯ ಮರಾಠ ಯುವ ವೇದಿಕೆಯ ಬಹುವರ್ಷಗಳ ಬೇಡಿಕೆಯನ್ನು ಹರತಾಳು ಹಾಲಪ್ಪ ರವರ ವಿಶೇಷ ಪ್ರಯತ್ನದಿಂದ ಈಡೇರಿದ್ದು ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಾಗರ -ಹೊಸನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪ ನವರ ವಿಶೇಷ ಪ್ರಯತ್ನದಿಂದ ಹೊಸನಗರ ತಾಲೂಕಿನ ರಿಪ್ಪನಪೇಟೆಯ “ಕ್ಷತ್ರಿಯ ಮರಾಠ ಯುವ ವೇದಿಕೆ” ಯ ಬಹು ವರ್ಷಗಳ ಬೇಡಿಕೆಯಾಗಿದ್ದ, ಬಡ ಮಕ್ಕಳ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣ ಉದ್ದೇಶಕ್ಕೆ ಕೆರೆಹಳ್ಳಿ ಗ್ರಾಮದ ಸ.ನಂ 37 ರಲ್ಲಿ, 2 ಎಕರೆ ಜಾಗ ಮಂಜೂರಾತಿಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ.
ಈ ಹಿನ್ನಲೆಯಲ್ಲಿ ರಿಪ್ಪನಪೇಟೆ “ಕ್ಷತ್ರಿಯ ಮರಾಠ ಯುವ ವೇದಿಕೆ” ನಿಯೋಗವು, ಇಂದು ಶಾಸಕರನ್ನು ಸಾಗರದ ಸ್ವ ಗೃಹದಲ್ಲಿ ಬೇಟಿಯಾಗಿ, ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಕೆ. ರಾವ್. ಸದಸ್ಯರಾದ ಕೆರೆಹಳ್ಳಿ ಸುಂದರೇಶ್. ಎನ್. ಚಂದ್ರೇಶ್ ಸೇರಿದಂತೆ ಮರಾಠ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು,ಹಾಗೂ ಇನ್ನಿತರರು ಉಪಸ್ಥಿತರಿದ್ದರು.