ಹೊಂಬುಜಾ ಶ್ರೀಗಳ ಸಮಾಜಮುಖಿ ಚಿಂತನೆಯಿಂದ ಶ್ರೀಕ್ಷೇತ್ರ ಅಭಿವೃದ್ಧಿಯ ಪಥದತ್ತ ಸಾಗಿದೆ – ಧರ್ಮಸ್ಥಳ ಸುರೇಂದ್ರ ಕುಮಾರ್|hombuja

ರಿಪ್ಪನ್‌ಪೇಟೆ : ಕೇವಲ12 ವರ್ಷದಲ್ಲಿ ಹೊಂಬುಜ ಜೈನಮಠ ಅಪಾರವಾಗಿ ಆಭಿವೃದ್ದಿಯಾಗಿರುವ ಹಿಂದೆ ಹೊಂಬುಜಾ ಶ್ರೀಗಳವರ ಸಮಾಜ ಮುಖಿ ಚಂತನೆ ಮತ್ತು ಧರ್ಮದ ಪರಿಪಾಲನೆ ಪ್ರಶಂಸನೀಯ ಎಂದು ಭಾರತೀಯ ಜೈನಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳದ ಸುರೇಂದ್ರ ಕುಮಾರ್ ಹೇಳಿದರು.

ಸಮೀಪದ ಹೊಂಬುಜ ಅತಿಶಯ ಮಹಾಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಹೊಂಬುಜಾ ಕ್ಷೇತ್ರ ಅತ್ಯಂತ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಯತ್ತ ಸಾಗಿರುವುದಕ್ಕೆ ಹೊಂಬುಜಾ ಶ್ರೀಗಳ ಸಮಾಜಮುಖಿ ಚಿಂತನೆಯೇ ಮೂಲ ಕಾರಣವಾಗಿದ್ದು ಅವರ ಶ್ರಮದಿಂದ ಹೊಬುಜಾ ಕ್ಷೇತ್ರ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ಹಾಗೇಯೆ ನೂತನ ಯಾತ್ರಿ ನಿವಾಸ , ಬೋಜನಾ ಗೃಹ ,ಸಾಗರದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹೀಗೆ ಹತ್ತು ಹಲವಾರು ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಶ್ರೀಗಳ ನೇತ್ರತ್ವದಲ್ಲಿ ಶ್ರೀ ಕ್ಷೇತ್ರ ಉನ್ನತ ಮಟ್ಟಕ್ಕೆ ಏರುತ್ತದೆ ಎಂದು ಹೇಳಿ ಶ್ರೀಕ್ಷೇತ್ರದ ಅಮ್ಮನವರ ಕೃಪಾ ಕಟಾಕ್ಷವೇ ಇಲ್ಲಿನ ಈ ಪ್ರಗತಿಗೆ ಶ್ರೀರಕ್ಷೆ ಎಂದರು.
ರಾಷ್ಟ ಸಂತ ೧೦೮ ಗುಣಧರನಂದಿ ಮುನಿಮಹಾರಾಜರು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಜೈನ ಧರ್ಮದ ಮೂಲ ಮಂತ್ರ ಅಹಿಂಸಾ ತತ್ವ, ಅದೇ ಸಿದ್ದಾಂತದಿಂದ  ಭಾರತ ದೇಶ ಸ್ವಾತಂತ್ರ್ಯ ಪಡೆದು ಪ್ರಸ್ತುತ ಅದ್ಬುತ ದೇಶವಾಗಿದೆ.ಮೊಘಲರ ಕಾಲದಲ್ಲಿ ಜೈನ ಧರ್ಮ ಅವನತಿಯತ್ತ ಸಾಗುವಂತಾಗಿತು. ನಂತರದಲ್ಲಿ ಭಟ್ಟಾರಕರು ಜೈನ ಧರ್ಮವನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜಗತ್ತಿನಾದ್ಯಂತ ಜೈನ ಧರ್ಮೀಯರ ಅವಶೇಷಗಳ ಇಂದಿಗೂ ಪತ್ತೆಯಾಗುತ್ತಿರುವುದು ಜೈನ ಧರ್ಮದ ಪರಂಪರೆಯನ್ನು ತಿಳಿಸುತ್ತದೆ.

ಜಗತ್ತಿನಾಂದ್ಯತ ಜೈನ ಧರ್ಮದ ಇತಿಹಾಸವಿದೆ  ವೇದಗಳ ಕಾಲದಲ್ಲಿಯೂ ಜೈನ ಧರ್ಮಕ್ಕೆ ಹೆಚ್ಚು ಪ್ರಾತಿನಿಧ್ಯ ಇತ್ತು ಎಂದು ಉಲ್ಲೇಖಿಸಿದ ಶ್ರೀಗಳು ಧರ್ಮಸ್ಥಳದ ಧರ್ಮಾಧಿಕಾರಿಗಳ ಆಹಾರ ದಾನ ಆಭಯದಾನ.ಶಾಸ್ತ್ರದಾನ ಹಾಗೂ ಔಷಧಿದಾನ ಇಂತಹ ನಾಲ್ಕು ದಾನಗಳ ಮೂಲಕ ಜಗತ್ತಿನಲ್ಲೆಡೆ ಜೈನ ಪರಂಪರೆಯನ್ನು ಬೆಳಗಿಸಿದ ಕೀರ್ತಿ ಜೈನ ಧರ್ಮದಾಗಿದ್ದು ಈ ನಿಟ್ಟಿನಲ್ಲಿ ಕಲಿಯುಗದ ಚಕ್ರವರ್ತಿ ಎಂದು ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ವರ್ಣಿಸಿದರು. ಪ್ರಸ್ತುತ ಕಾಲದಲ್ಲಿ ಜೈನ ಧರ್ಮದ ಸಿದ್ದಾಂತ ಕಠಿಣವಾಗಿದ್ದರೂ ಅದನ್ನು ಪರಿಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಾತ್ಸಲ್ಯ ಮೂರ್ತಿ ಮುನಿಶ್ರೀ 108 ಪುಣ್ಯಸಾಗರ ಮಹರಾಜರು, ಕೊಲ್ಲಾಪುರದ ಶ್ರೀ ಕ್ಷೇತ್ರ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮಿಜಿ ಮತ್ತು ಡಾ.ದೇವೆಂದ್ರ ಕೀರ್ತಿ ಭಟ್ಟಾರಕ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಈ ಸಂಧರ್ಭದಲ್ಲಿ ಭಾರತೀಯ ಜೈನ್ ಮಿಲನ್ ಉಪಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್, ಯುವರಾಜ್ ಭಂಡಾರಿ ,ಕೆ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *