ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜಾ ಕ್ಷೇತ್ರದಲ್ಲಿ ಅತಿಶಯ ಮಹಾಕ್ಷೇತ್ರದಲ್ಲಿ ಜನವರಿ 22 ರಿಂದ 27 ರವರೆಗೆ ನೂತನ ಮಾನಸ್ತಂಭೋಪರಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ಹೊಂಬುಜ ಜೈನ ದಿಗಂಬರ ಮಠದ ಜಗದ್ಗುರು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ಮಠದ ಆಡಳಿತಾಧಿಕಾರಿ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನವರಿ 22 ಭಾನುವಾರ :
ಭಾನುವಾರ ಮಧ್ಯಾಹ್ನ 2 ಗಂಟೆಗೆ ಜಿನದತ್ತರಾಯ ಸಭಾ ಮಂಟಪದ ಅರ್ಹದ್ದಾಸ ವೇದಿಕೆಯಲ್ಲಿ ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಪರಮಶಿಷ್ಯರಾದ ನವಗ್ರಹ ತೀಥ ಪ್ರಣೇತ ಪೂಜ್ಯ ರಾಷ್ಟ್ರ ಸಂತ ಅಚಾರ್ಯ 108 ಶ್ರೀ ಗುಣಧರನಂದಿ ಮುನಿಮಹಾರಾಜರು ಮತ್ತು ಸಂತಶಿರೋಮಣು ಅಚಾರ್ಯ ಶ್ರೀ 108 ಪುಣ್ಯ ಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ ಮೂಡುಬಿದರೆ ಜೈನಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಜಿ ಮತ್ತು ಸೋಂದಾ ಮಠದ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಜಿ ಹಾಗೂ ಆನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿಯವರ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಐ.ಎಂ.ಅರುಣ್, ಉ.ನ್ಯಾ.ನಿ.ನ್ಯಾ.ಅಜಿತಗುಂಜಾಳ, ಐಎಎಸ್ ಅಧಿಕಾರಿ ಮನೋಜ್‌ಜೈನ್, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಕಮಿಷನರ್ ಜಿನೇಂದ್ರ ಖನಗಾವಿ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜನವರಿ 23 ಸೋಮವಾರ ;
ಸೋಮವಾರ ಜಿನಕಂಚಿ ಶ್ರೀಕ್ಷೇತ್ರದ ಸ್ವಸ್ತಿ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿ, ಕೊಲ್ಲಾಪುರದ ಸ್ವಸ್ತಿ ಲಕ್ಷ್ಮಿಸೇನ ಭಟ್ಟಾರಕರು ಹಾಗೂ ಲಕ್ಕವಳ್ಳಿ ವೈಷಭಸೇನ ಭಟ್ಟಾರಕರು ಉಪಸ್ಥಿತಿಯಲ್ಲಿ ಭಾರತೀಯ ಜೈನಮಿಲನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳ ಸುರೇಂದ್ರಕುಮಾರ್ ಮತ್ತು ಉಪಾಧ್ಯಕ್ಷರಾದ ಅನಿತಾ ಸುರೇಂದ್ರಕುಮಾರ್,ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ, ಮಹಾರಾಷ್ಟ್ರ ಮಾಜಿ ಸಂಸದ ರಾಜು ಶೆಟ್ಟಿ ಶಿರೂಳ ಭಾಗವಹಿಸುವರು.
ಜನವರಿ 24 ಮಂಗಳವಾರ ;
ಮಂಗಳವಾರ ಮಧ್ಯಾಹ್ನ ಕಾರ್ಕಳದ ಸ್ವಸ್ತಿ ಲಲಿತಕೀರ್ತಿ ಭಟ್ಟಾರಕರು ಮತ್ತು ನಾಂದಣಿ ಸ್ವಸ್ತಿ ಜಿನಸೇನ ಭಟ್ಟಾರಕರ ಗೌರವ ಉಪಸ್ಥಿತಿಯಲ್ಲಿ ಮಾಜಿ ಸಚಿವ ಶಾಸಕ ಕೆ.ಎಸ್.ಈಶ್ವರಪ್ಪ, ಮಹಾರಾಷ್ಟ್ರ ಮಾಜಿ ಸಚಿವ ಶಾಸಕ ರಾಜೇಂದ್ರ ಪಾಟೀಲ, ಮಾಜಿ ಶಾಸಕ ಪ್ರಕಾಶ ಅವಾಡೆ, ಡಿ.ಎಸ್.ಅರುಣ್ ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜನವರಿ 25 ಬುಧವಾರ ;
ಬುಧವಾರ ಕನಕಗಿರಿಯ ಸ್ವಸ್ತಿ ಭವನಕೀರ್ತಿ ಭಟ್ಟಾರಕರು, ಸಿಂಹನಗದ್ದೆ ಲಕ್ಷ್ಮಿಸೇನ ಭಟ್ಟಾರಕರು, ಆರತಿಪುರ ಸಿದ್ದಾಂತಕೀರ್ತಿ ಭಟ್ಟಾರಕರು, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಗೌರವ ಉಪಸ್ಥಿತಿಯಲ್ಲಿ ಮುಖ್ಯಅತಿಥಿಗಳಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಖ್ಯಾತ ವಿದ್ವಾಂಸ ಪ್ರೋ.ನಾಡೋಜ ಹಂಪ ನಾಗರಾಜಯ್ಯ, ಸಂಸದ ಬಿ.ವೈ.ರಾಘವೇಂದ್ರ, ನಳಿನ್‌ಕುಮಾರ್ ಕಟೀಲು, ಸಚಿವರಾದ ವಿ.ಸುನೀಲ್ ಕುಮಾರ್, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಎಸ್.ರುದ್ರೇಗೌಡರು ಇನ್ನಿತರರು ಭಾಗವಹಿಸುವರು.
ಜನವರಿ 26 ಗುರುವಾರ ;
ಗುರುವಾರ ಮಧ್ಯಾಹ್ನ 2 ಗಂಟೆಗೆ ಶ್ರವಣಬೆಳಗೊಳದ ಜಗದ್ಗುರು ಕರ್ಮಯೋಗಿ ಸ್ವಸ್ತಿ ಚಾರುಕೀರ್ತಿ ಭಟ್ಟಾರಕರು, ಅರಿಹಂತಗಿರಿ ಧವಳಕೀರ್ತಿ ಭಟ್ಟಾರಕರು, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕರು, ವರೂರು ಧರ್ಮಸೇನ ಭಟ್ಟಾರಕರ ಗೌರವ ಉಪಸ್ಥಿತಿಯಲ್ಲಿ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಶಾಸಕರಾದ ಇಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜನವರಿ 27 ಶುಕ್ರವಾರ ;
ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹೊಂಬುಜ ಜೈನಮಠದ ಜಗದ್ಗುರು ಸ್ವಸ್ತಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಗೌರವ ಉಪಸ್ಥಿತಿಯಲ್ಲಿ ಬೆಂಗಳೂರು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಪದ್ಮರಾಜ ಎಸ್ ದೇಸಾಯಿ ಬೆಳ್ತಂಗಡಿ ರತ್ನತ್ರಯ ಜೈನ ತೀರ್ಥ ಕ್ಷೇತ್ರ ಸಮಿತಿ ಅಧ್ಯಕ್ಷ ಜಯವರ್ಮರಾಜ ಬಲ್ಲಾಳ, ಧರ್ಮಸ್ಥಳದ ಡಿ.ಹರ್ಷೇಂದ್ರಕುಮಾರ್ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಠದ ಆಡಳಿತಾಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
>