Headlines

ಕೌಟುಂಬಿಕ ಕಲಹ : ಪತಿಯಿಂದ ಪತ್ನಿಯ ಮೇಲೆ ಆಸಿಡ್ ದಾಳಿ|acid

ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಸಿಟ್ಟಿನಿಂದ ಹೆಂಡತಿಯ ಮೈಮೇಲೆ ಆಸಿಡ್ ಎರಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.




ಭದ್ರಾವತಿಯ ಗ್ರಾಮವೊಂದರ ನಿವಾಸಿಯಾದ ಸಂತ್ರಸ್ತೆಯು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ಧಾರೆ. ಬಿಡುವಾದಾಗ ತನ್ನ ಮಕ್ಕಳನ್ನು ನೋಡಲು ತನ್ನ ತಾಯಿ ಮನೆಗೆ ಬರುತ್ತಿದ್ದರು. ಇನ್ನೂ ಪತ್ನಿಯ ಜೊತೆಗೆ ಜಗಳ ತೆಗೆದು ದೂರವೇ ಇದ್ದ ಪತಿಯು ಆಗಾಗ ಪತ್ನಿಯ ತಾಯಿ ಮನೆಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ.

ಈ ನಡುವೆ ಕಳೆದ ಸಂಕ್ರಾಂತಿಯ ಸಂದರ್ಭದಲ್ಲಿ ಪತ್ನಿಯ ತಾಯಿ ಮನೆಗೆ ಬಂದ ಗಂಡ, ಅದೇ ವೇಳೇ ಊರಿಗೆ ಬಂದಿದ್ದ ಹೆಂಡಿತಿಯ ಜೊತೆಗೆ ಜಗಳ ತೆಗೆದಿದ್ಧಾನೆ. ಕೆಲಸ ಬಿಟ್ಟು ಬಾ ಜೊತೆಗೆ ಎಂದು ಕರೆದ ಪತಿರಾಯ, ಇದೇ ವಿಚಾರಕ್ಕೆ ಜಗಳವಾಡಿದ್ಧಾನೆ. ಅಲ್ಲದೆ ಕೆಲಹೊತ್ತು ಬಿಟ್ಟು ಮನೆಯಿಂದ ಹೊರಹೋಗಿ, ಕ್ಯಾನ್​ವೊಂದರಲ್ಲಿ ಆಸಿಡ್ ತಂದು ಪತ್ನಿಯ ಮೇಲೆ ಎರಚಿದ್ಧಾನೆ. 




ಆಸಿಡ್​ ಎರಚಿದ ಬೆನ್ನಲ್ಲೆ ಸಂತ್ರಸ್ತೆ ನೆಲದ ಮೇಲೆ ಬಿದ್ದು ಒದ್ದಾಡಿದ್ಧಾಳೆ. ತಕ್ಷಣವೇ, ಸಂತ್ರಸ್ತೆಯ ತಾಯಿ ಹಾಗು ಸ್ಥಳೀಯರು ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ. 

ಜಗಳ ಹೆಚ್ಚಾದ ಪರಿಣಾಮ ಒಂದು ವರ್ಷದ ಹಿಂದೆ ತುಮಕೂರಿಗೆ ಹೋದ ರವಿ ಮಗನೊಂದಿಗೆ ಅಲ್ಲೇ ಇದ್ದನು. ಇದರಿಂದ ಜೀವನೋಪಾಯಕ್ಕಾಗಿ ಮಹಿಳೆ ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಇಬ್ಬರು ಹೆಣ್ಣುಮಕ್ಕಳನ್ನ  ಶಾಂತಿನಗರದಲ್ಲಿ ನೆಲೆಸಿರುವ ತಾಯಿ ಮನೆಯಲ್ಲಿ ಬಿಟ್ಟಿದ್ದರು.




ಬೆಂಗಳೂರಿನಿಂದ ಬಂದು ಆಗಾಗ್ಗೆ ಮಕ್ಕಳನ್ನ ತಾಯಿಯನ್ನ ನೋಡಿಕೊಳ್ಳುತ್ತಿದ್ದರು. ಮೊನ್ನೆ ಮಗನೊಂದಿಗೆ ಭದ್ರಾವತಿಗೆ ಬಂದಿದ್ದ ರವಿ ಪತ್ನಿಯ ಮನೆಗೆ ಬಂದಿದ್ದನು. ಆ ವೇಳೆಯೂ ಪತ್ನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾನೆ. ನಿನ್ನೆ ಮಹಿಳೆಯ ತಾಯಿ ಮತ್ತು ಮಕ್ಕಳು ಹೊರಗೆ ಹೋದಾಗ ರವಿ ಮದ್ಯ ಸೇವಿಸಿ ಪತ್ನಿಯ ಮನೆಗೆ ಬಂದಿದ್ದಾನೆ. ಗಾರ್ಮೆಂಟ್ಸ್ ಕೆಲಸ ಬೇಡ ನನ್ನೊಂದಿಗೆ ಬಾ ಎಂದು ಕರೆದಿದ್ದಾನೆ. ಗಾರ್ಮೆಂಟ್ಸ್ ಕೆಲಸ ಬಿಟ್ಟು ಮಣ್ಣು ತಿನ್ನಲಾ ಎಂದು ಪತ್ನಿ ಮರು ಪ್ರಶ್ನಿಸಿದ್ದಾಳೆ.




ನಾನು ಕರೆದರೆ ಬರುವುದಿಲ್ಲ ಎಂದು ರೊಚ್ಚಿಗೆದ್ದ ರವಿ ಹೊರಗಡೆಯಿಂದ ಬಿಳಿ ಕ್ಯಾನ್ ತಂದು ಅದರಲ್ಲಿದ್ದ ಬಿಳಿ ದ್ರವ್ಯವನ್ಬ ಪತ್ನಿಯ ಮೈಮೇಲೆ ಎರಚಿದ್ದಾನೆ. ಸುಟ್ಟ ಅನುಭವ ಉಂಟಾಗಿ ಮನೆಯಲ್ಲೇ ಪತ್ನಿ ಬಿದ್ದು ಒದ್ದಾಡಿದ್ದಾಳೆ. ಆ ವೇಳೆ ತಾಯಿ ಮತ್ತು ಮಕ್ಕಳು ಹೊರಗಡೆ ಹೋದವರು ಬಂದಿದ್ದಾರೆ. ತಕ್ಷಣವೇ ಮೆಗ್ಗಾನ್ ಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.