ರಿಪ್ಪನ್‌ಪೇಟೆ : ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಅಂಗವಾಗಿ ಜಾಥಾ|road safety

ರಿಪ್ಪನ್‌ಪೇಟೆ : ಪಟ್ಟಣದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪಟ್ಟಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಜಾಥಾ ನಡೆಸಿದರು.




ಪಟ್ಟಣದ ವಿನಾಯಕ ವೃತ್ತ ಮತ್ತು ನಾಲ್ಕು ಮುಖ್ಯ ರಸ್ತೆಗಳಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದರು.

ಸಪ್ತಾಹಕ್ಕೆ ಚಾಲನೆ ನೀಡಿದ ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ್ ಕೆ ಮಾತನಾಡಿ, ವಾಹನ ಚಲಿಸುವಾಗ ಮದ್ಯಪಾನ ಮಾಡಕೂಡದು. ಮೊಬೈಲ್‌ನಲ್ಲಿ ಮಾತನಾಡಬಾರದು. ನಿಯಮಿತ ವೇಗದಲ್ಲೆ ವಾಹನಗಳನ್ನು ಓಡಿಸಬೇಕು, ವಾಹನ ಸವಾರರು ಅಗತ್ಯ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಪಾದಚಾರಿಗಳು ರಸ್ತೆಯಲ್ಲಿ ಚಲಿಸುವಾಗ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.


ರಸ್ತೆ ಸುರಕ್ಷತೆಯನ್ನು ಕೇವಲ ಒಂದು ವಾರದ ಮಟ್ಟಿಗೆ ಸೀಮಿತಗೊಳಿಸದೆ ನಿರಂತರವಾಗಿ ನಡೆಸಬೇಕಿದೆ. ಆವಾಗ ಮಾತ್ರ ಇದರ ಪ್ರತಿಫಲ ಸಿಗಲಿದೆ. ಅಪಘಾತ ನಡೆದಾಗ ವೀಡಿಯೋ ಚಿತ್ರೀಕರಣ ಮಾಡುವ ಬದಲು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಬೇಕು. ಒಂದು ಜೀವವನ್ನು ಉಳಿಸಿದರೆ ಒಂದಿಡೀ ಕುಟುಂಬವನ್ನು ಉಳಿಸಿದಂತೆ. ಯಾಕೆಂದರೆ ಒಂದು ಜೀವವನ್ನು ನಂಬಿ ಅದೆಷ್ಟೋ ಕುಟುಂಬಗಳು ಜೀವನ ಸಾಗಿಸುತ್ತದೆ. ಆ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕಿದೆ ಎಂದರು.




ಅಧಿಕೃತ ವರದಿಯೊಂದರ ಪ್ರಕಾರ ಇಂದು ಜಗತ್ತಿನಲ್ಲಿ ವರ್ಷಕ್ಕೆ 1.2 ಮಿಲಿಯನ್ ಜನರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಅಲ್ಲದೆ 20ರಿಂದ 30 ಮಿಲಿಯನ್‌ನಷ್ಟು ಅಪಘಾತದಲ್ಲಿ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಎ ಎಸ್ ಐ ಮಂಜಪ್ಪ ಸಿಬ್ಬಂದಿಗಳಾದ ಬಸವರಾಜ್ ,ಯೋಗೇಂದ್ರ,ಶಿವಕುಮಾರ್ ನಾಯ್ಕ್ ,ಉಮೇಶ್ ಮತ್ತು ಮಧುಸೂಧನ್ ಇದ್ದರು.



Leave a Reply

Your email address will not be published. Required fields are marked *