ಶಿವಮೊಗ್ಗ : ರಾಷ್ಟ್ರೀಯ ಕಾರ್ಯಕಾರಿಣಿ ಉತ್ತಮವಾಗಿ ನಡೆಯಿತು ದೇಶದ ಹಾಗೂ ರಾಜ್ಯಗಳ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆಯಾಗಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳನ್ನು ಜೊತೆಗೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬುಧವಾರ ಹೇಳಿಕೆ ನೀಡಿದ್ದಾರೆ.
ಚುನಾವಣೆ ಗೆಲ್ಲಲು ಬೇಕಾದ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮೋದಿಯವರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾರ್ಗದರ್ಶನ ಮಾಡಿದರು. ಬಹಳ ಉತ್ಸಾಹದಿಂದ ವಾಪಸ್ ಬಂದಿದ್ದೇವೆ. ಪಕ್ಷವನ್ನು ಬಲಪಡಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ನಾವು ಬರಲೇಬೇಕು.ಮೋದಿ, ಅಮಿತ್ ಶಾ, ನಡ್ಡಾ ಅವರು ಹೆಚ್ಚು ಸಮಯ ರಾಜ್ಯಕ್ಕೆ ಕೊಡುತ್ತಾರೆ. ಅದರ ಬಳಕೆ ಮಾಡಿಕೊಂಡು, 140 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಕಾರ್ಯಪ್ರವೃತ್ತರಾಗುತ್ತೇವೆ. ಶಾಸಕರು, ಕಾರ್ಯಕರ್ತರು ಹೆಚ್ಚು ಕೆಲಸ ಮಾಡಬೇಕು.ಎಲ್ಲರಲ್ಲೂ ವಿಶ್ವಾಸ ಮೂಡಿಸಬೇಕು ಎಂದರು.
ಈಗಾಗಲೇ ನಾವು ಕೇಂದ್ರದ ನಾಯಕರ ಜೊತೆ ಚೆನ್ನಾಗಿ ಇದ್ದೇವೆ. ನಮ್ಮ ಬಗ್ಗೆ ಗೌರವ, ವಿಶ್ವಾಸ ಇದೆ. ಬರುವ ದಿನ ಇನ್ನಷ್ಟು ಸಂಪರ್ಕ ಮಾಡಲು ಪ್ರಧಾನಿ ಅಪೇಕ್ಷೆಯಂತೆ ಕೆಲಸ ಮಾಡುತ್ತೇವೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ಫೆ.27 ಕ್ಕೆ ಉದ್ಘಾಟನೆ ನಿಶ್ಚಿತ- ಬಿಎಸ್ ವೈ
ಫೆ 27 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗುವುದು ನಿಶ್ಚಿತ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು.
ಅವರು ವಿಮಾನ ನಿಲ್ದಾಣಕ್ಜೆ ಭೇಟಿಯಾಗಿ ಮಾಧ್ಯಮಗಳಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.ಸಣ್ಣಪುಟ್ಟ ಕೆಲಸ ಬಾಕಿ ಉಳಿದುಕೊಂಡಿದೆ. ಅವುಗಳನ್ನ ಪೂರ್ಣವಾಗಲಿದೆ ಎಂದರು.
449.28 ಕೋಟಿ ರೂ. ವೆಚ್ಚದಲ್ಲಿ ಏರ್ ಪೋರ್ಟ್ ನಿರ್ಮಾಣ, ನೈಟ್ ನಿರ್ಮಾಣವಾದರೆ ಬೆಂಗಳೂರು ಬಿಟ್ಟರೆ ಶಿವಮೊಗ್ಗ ದೇಶದಲ್ಲಿಯೇ ಅತಿ ದೊಡ್ಡ ನಿಲ್ದಾಣವಾಗಿದೆ. ಫೆ.27 ರಂದು ಪ್ರಧಾನಿಯಿಂದ ಉದ್ಘಾಟನೆ ಎಂದು ತಿಳಿಸಿದರು.
ಭೂಮಿ ಕೊಟ್ಟ ರೈತರಿಗೆ ಅಭಿನಂದನೆ ಸಲ್ಲಿಸಿದ ಬಿಎಸ್ ವೈತುಂಬ ದಿನದ ಕನಸು ನನಸುಅಗಿದೆ ಎಂದರು.
ನಂತರ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣ ನಾಯಕರ ಅಭಿಲಾಷೆಗಳಂತೆ ನೆರವೇರುತ್ತಿದೆ. ಬ್ರಿಗೇಡ್ ಎಫ್ ಪೂರ್ವಿ ಮಠ ನೇತೃತ್ವದಲ್ಲಿ ಅಪಾಯಿಂಟ್ ಮೆಂಟ್ ಆಗ್ತಾಇದೆ. ನಾಳೆ ಡಿಜಿಸಿಎ ಮತ್ತು ನಾಗರೀಕ ವಿಮಾನ ಯಾನ ಪ್ರಾಧಿಕಾರದಿಂದ ಅನಧಿಕೃತ ಭೇಟಿ ನೀಡಿದ್ದಾರೆ. ಒಂದು ನೂನ್ಯತೆ ಕಂಡರು ಉದ್ಘಾಟನೆ ಕಾರ್ಯಕ್ರಮ ಮುಂದೆ ಹೋಗಲಿದೆ. ಹಾಗಾಗಿ ಅನಧಿಕೃತ ಭೇಟಿ ನೀಡಿ ಅನೇಕ ಸಲಹೆನೀಡಿದ್ದಾರೆ ಎಂದರು
ಯಾವಾಗ ಉದ್ಘಾಟನೆಗೆ ಮನವಿ ಮಸಡಿಕೊಳ್ಳಲಿದ್ದೇವೆ ಆಗ ಪ್ರಧಾನಿ ಭೇಟಿ ಆಗುತ್ತಾರೆ. ಬೆಳಿಗ್ಗೆ ಇನ್ ಫ್ರಾಸ್ಟ್ರಕ್ಚರ್ ಅಧಿಕಾರಿಗಳು ಬಂದು ಹೋಗಿದ್ಸಾರೆ. ಉದ್ಘಾಟನೆ ದಿನಗಳಂದೆ ವಿಮಾನ ಹಾರಾಟವಾಗಲಿದೆ. ಈಗಾಗಾಲೇ ಸ್ಟಾರ್ ಏರ್ ಲೈನ್ಸ್ ಸೇರಿದಂತೆ ನಾಲ್ಕೈದು ವಿಮಾನ ಯಾನ ಸಂಸ್ಥೆಗಳು ಮುಂದೆ ಬಂದಿದ್ದಾರೆ. ಸಧ್ಯಕ್ಕೆ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನ ಹಾರಲಿದೆ. ಪ್ರಧಾನಿ ಅವರ ವಿಮಾನ ನಿಲ್ದಾಣ ಲ್ಯಾಂಡ್ ಆಗುವ ಮೂಲ ಉದ್ಘಾಟನೆ ಆಗಲಿದೆ ಎಂದರು.
ಸ್ವಾತಂತ್ರ್ಯ ನಂತರ ರಾಣೇಬೆನ್ಬೂರು ಕೋಚಿಂಗ್ ಡಿಪೋ , 7500 ಕೋಟಿ ವೆಚ್ಚದ ರಾಷ್ಡ್ರೀಯ ಹೆದ್ದಾರಿಯ ನಿರ್ಮಾಣದಲ್ಲಿ 3000 ಸಾವಿರ ಕೋಟಿ ಎನ್ ಹೆಚ್ ಕಾಮಗಾರಿ ಬಾಕಿ ಇದ್ದು ಅದನ್ನೂ ಸಹ ಅಂದು ಶಂಕುಸ್ಥಾಪನೆ ಆಗಲಿದೆ. ,ಮೂರು ಆರ್ ಒಬಿ ಗಳನ್ನ ಮತ್ತು. ಸ್ಮಾರ್ಟ್ ಸಿಟಿ ಕಾಮಗಾರಿಯನ್ನ ಲೋಕಾರ್ಪಣೆ ಆಗಲಿದೆ. ಇವುಗಳನ್ನ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆಎಂದರು.
ಹೌಸ್ ಕೀಪಿಂಗ್ ಗೆ ಮಾತ್ರ ಅವಕಾಶ
ಕೆಲಸಕ್ಕೆ ಸ್ಥಳೀಯರನ್ನ ತೆಗೆದುಕೊಳ್ಳಬೇಕೆಂಬ ಸಾಮಾಜಿಕ ಜಾಲತಾಣದ ಅಭಿಯಾನಕ್ಕೆ ಉತ್ತರಿಸಿದ ಪಿಡಬ್ಲೂಡಿ ಎಕ್ಸಿಕ್ಯುಟಿವ್ ಇಂಜಿನಿಯರ್ ಸಂಪತ್ ಕುಮಾರ್ ಮಾತನಾಡಿ ಇಂತಹ ಅಭಿಯಾನದಲ್ಲಿ ಸತ್ಯವಿಲ್ಲ. ಕಾರಣ ಸರ್ಕಾರದಿಂದಲೇ ಅಧಿಕಾರಿ ಸಿಬ್ಬಂದಿಗಳು ಇಲ್ಲಿಗೆ ಬರಲಿದ್ದಾರೆ. ಅಪಾಯಿಙಟ್ ಮೆಂಟ್ ಗೆ ಅವಕಾಶ ಇಲ್ಲ. ಆದರೆ ಸ್ವಚ್ಛತೇ ಕಾರ್ಯಕ್ಕೆ ಮಾತ್ರ ಸಿಬ್ವಂದಿಗಳನ್ನ ತೆಗೆದುಕೊಳ್ಳಲಾಗುವುದುಎಂದರು.