ಜಿಲ್ಲಾ ಸುದ್ದಿ:
ಕಳೂರು ಸಹಕಾರ ಸಂಘ ಚುನಾವಣೆ – ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಜಿ ನಾಗರಾಜ್ ಗೆ ಸೋಲು , 12 ಸ್ಥಾನ ಗೆದ್ದು ಗೆಲುವಿನ ನಗೆ ಬೀರಿದ ಹಾಲಿ ಅಧ್ಯಕ್ಷ ದುಮ್ಮ ವಿನಯ್ ಗೌಡ
ಕಳೂರು ಸಹಕಾರ ಸಂಘ ಚುನಾವಣೆ – ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಜಿ ನಾಗರಾಜ್ ಗೆ ಸೋಲು , 12 ಸ್ಥಾನ ಗೆದ್ದು ಗೆಲುವಿನ ನಗೆ ಬೀರಿದ ಹಾಲಿ ಅಧ್ಯಕ್ಷ ದುಮ್ಮ ವಿನಯ್ ಗೌಡ ಹೊಸನಗರ : ಇಲ್ಲಿನ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬಿ ಜಿ ನಾಗರಾಜ್ 10 ಮತಗಳ ಅಂತರದಿಂದ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಸಾಲಗಾರ ರಲ್ಲದ…
RIPPONPETE | ಉಪ್ಪಿನಕಾಯಿ ಫ್ಯಾಕ್ಟರಿಯ ಹೊಲಸು ನೀರು ಚರಂಡಿಗೆ – ಸಾರ್ವಜನಿಕರ ಪರದಾಟ
RIPPONPETE | ಉಪ್ಪಿನಕಾಯಿ ಫ್ಯಾಕ್ಟರಿಯ ಹೊಲಸು ನೀರು ಚರಂಡಿಗೆ – ಸಾರ್ವಜನಿಕರ ಪರದಾಟ ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಶಿವಮಂದಿರದ ಸಮೀಪದಲ್ಲಿರು ಖಾಸಗಿ ಉಪ್ಪಿನಕಾಯಿ ಫ್ಯಾಕ್ಟರಿಯಿಂದ ಹೊರಬರುವ ಹೊಲಸು ನೀರು ತೆರೆದ ಚರಂಡಿಯಲ್ಲಿ ಹರಿ ಬಿಡಲಾಗಿದ್ದು ಇದರಿಂದ ದುರ್ವಾಸನೆ ಹೆಚ್ಚಿದ್ದು,ರೋಗರುಜಿನಗಳು ಹೆಚ್ಚುವ ಭೀತಿಯಲ್ಲಿ ಸುತ್ತಲಿನ ನಿವಾಸಿಗಳು ಪರದಾಡುವಂತಾಗಿದೆ. ಹೌದು ಈ ಉಪ್ಪಿನಕಾಯಿ ಫ್ಯಾಕ್ಟರಿ ಯಿಂದ ಹೊರಬರುವ ಹೊಲಸು ನೀರಿನ ದುರ್ವಾಸನೆಯಿಂದ ಸ್ಥಳೀಯ ನಿವಾಸಿಗಳ ಗೋಳು ಹೇಳತೀರದಂತಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ…
ಅರಸಾಳು ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ
ಅರಸಾಳು ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ರಿಪ್ಪನ್‌ಪೇಟೆ: ಸಮೀಪದ ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೀರ್ತಿ ರಾಜ್‌ಗೌಡ,ಉಪಾಧ್ಯಕ್ಷರಾಗಿ ಮಹಮ್ಮದ್ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೂ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅರಸಾಳು ಗ್ರಾಮ ಪಂಚಾಯತ್ ಪಿಡಿಒ ರವಿ ಅವಿರೋಧ ಆಯ್ಕೆ ಘೋಷಿಸಿದರು. ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ,ಜಿಪಂ ಮಾಜಿ ಸದಸ್ಯ…
ಸಿ ಎ ಪರೀಕ್ಷೆ : ಪ್ರಥಮ ಪ್ರಯತ್ನದಲ್ಲೇ ಅರಸಾಳುವಿನ ಮನು ಆಚಾರ್ ಉತ್ತೀರ್ಣ
ಸಿ ಎ ಪರೀಕ್ಷೆ : ಪ್ರಥಮ ಪ್ರಯತ್ನದಲ್ಲೇ ಅರಸಾಳುವಿನ ಮನು ಆಚಾರ್ ಉತ್ತೀರ್ಣ ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ಮನು ಚಾರ್ಟರ್ಡ್ ಅಕೌಂಟೆಂಟ್(CA) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ. ಅರಸಾಳು ನಿವಾಸಿ ಮೂರ್ತಿ ಆಚಾರ್ ಮತ್ತು ಮಮತಾ ದಂಪತಿಗಳ ಪುತ್ರನಾದ ಮನು ಹೈಸ್ಕೂಲ್ ಶಿಕ್ಷಣವನ್ನು ಪಟ್ಟಣದ ರಾಮಕೃಷ್ಣ ವಿದ್ಯಾಲಯದಲ್ಲಿ ಮತ್ತು ನಂದನ ಪದವಿಪೂರ್ವ ಕಾಲೇಜಿನ ಪದವಿಪೂರ್ವ ಶಿಕ್ಷಣವನ್ನು ಪಡೆದು ಬೆಂಗಳೂರಿನಲ್ಲಿ ಪದವಿ ಪಡೆದು ಈಗ ಕೇವಲ ನಾಲ್ಕ ವರ್ಷದಲ್ಲಿ…
ಮನಮೋಹನ್ ಸಿಂಗ್ ನಿಧನ – ಹೊಸನಗರ ಹಾಗೂ ರಿಪ್ಪನ್‌ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂತಾಪ ಸಭೆ
ಕಾಂಗ್ರೆಸ್ ಕಛೇರಿಯಾದ ಗಾಂಧಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ರಾತ್ರಿ ನಿಧನರಾದ ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ರವರಿಗೆ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂಧರ್ಭದಲ್ಲಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ 14ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮನಮೋಹನ್ ಸಿಂಗ್‌ರವರನ್ನು ಚಿಂತಕರು ಮತ್ತು ವಿದ್ವಾಂಸರಾಗಿ ಕರೆಯಲಾಗುತ್ತಿದ್ದು ನಿಗರ್ವಿಗಳಾದ ಇವರು ತಮ್ಮ ಶೈಕ್ಷಣಿಕ ಮತ್ತು ಕರ್ತವ್ಯ ಎರಡರಲ್ಲೂ ಶ್ರದ್ಧೆ ಹಾಗೂ ವಿನೀತಭಾವನೆಯಿಂದ ಗೌರವಕ್ಕೆ ಪಾತ್ರರಾಗಿದ್ದರು.ಇವರು ಪ್ರಧಾನಮಂತ್ರಿಯಾಗಿ 10 ವರ್ಷಗಳ ಕಾಲ…
ಟ್ರ್ಯಾಕ್ಟರ್ ಸರ್ವೀಸ್ ನಲ್ಲಿ ಲೋಪ – ರೈತರಿಂದ ಷೋ ರೂಂ ಗೆ ಮುತ್ತಿಗೆ | ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಲು ಮುಂದಾದ ರೈತ
ಟ್ರ್ಯಾಕ್ಟರ್ ಸರ್ವೀಸ್ ನಲ್ಲಿ ಲೋಪ – ರೈತರಿಂದ ಷೋ ರೂಂ ಗೆ ಮುತ್ತಿಗೆ | ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಲು ಮುಂದಾದ ರೈತ ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಜಾನ್ ಡೀರ್ ಟ್ರ್ಯಾಕ್ಟರ್ ಷೋ ರೂಂ ನಲ್ಲಿ ಸರ್ವಿಸ್ ನಲ್ಲಿ ಲೋಪವೆಸಗಿದ್ದು ಈ ಬಗ್ಗೆ ವಿಚಾರಿಸಿದರೆ ಷೋರೂಂ ಮಾಲೀಕ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿ ರೈತರು ಹಾಗೂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಟ್ರ್ಯಾಕ್ಟರ್ ಚಾಲಕ ವಾಹನಕ್ಕೆ ಹಾಗೂ ತನ್ನ…
ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ
ರಿಪ್ಪನ್‌ಪೇಟೆ : ಜಗತ್ತಿಗೆ ಶಾಂತಿ ಸಂದೇಶವನ್ನು ನೀಡುವುದರ ಮೂಲಕ ಶಾಂತಿದೂತರಾದ ಯೇಸು ಕ್ರೈಸ್ತರ ಆದರ್ಶ ಜೀವನಶೈಲಿ ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಗುಡ್ ಶಫರ್ಡ್ ಚರ್ಚ್‌ನ ಧರ್ಮ ಗುರು ಫಾದರ್ ಬಿನೋಯ್ ತಿಳಿಸಿದರು. ಪಟ್ಟಣದಲ್ಲಿನ ಗುಡ್ ಶಫರ್ಡ್ ಚರ್ಚ್ ಧರ್ಮಸಭೆಯಲ್ಲಿ ಮಾತನಾಡಿದ ಫಾದರ್ ಪ್ರತಿಯೊಬ್ಬರ ಹೃದಯದಲ್ಲಿ ಯೇಸು ಜನಿಸಬೇಕು. ಇರುವವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಅಪರೂಪ ಕಾರ್ಯದ ಮೂಲಕ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು. ಎಲ್ಲರ ನಡುವೆ ಐಕ್ಯತೆ, ಸಮಾನತೆ ಮೂಡಲಿ ವಿಶ್ವದಲ್ಲಿ ಶಾಂತಿ ನೆಲೆಸಲಿ….
ನಾಳೆ(27-12-2024) ರಿಪ್ಪನ್‌ಪೇಟೆಯಲ್ಲಿ ನಾರಸಿಂಹ ನೃತ್ಯ ರೂಪಕ –
ನಾಳೆ(27-12-2024) ರಿಪ್ಪನ್‌ಪೇಟೆಯಲ್ಲಿ ನಾರಸಿಂಹ ನೃತ್ಯ ರೂಪಕ – ರಿಪ್ಪನ್‌ಪೇಟೆ : ಭರತನಾಟ್ಯವನ್ನು ಕೇಂದ್ರವಾಗಿಟ್ಟುಕೊಂಡು ಶಾಸ್ತ್ರೀಯ ನೃತ್ಯದ ಎಲ್ಲ ಪ್ರಾಕಾರಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ನೃತ್ಯ ರೂಪಕ ಕಾರ್ಯಕ್ರಮವನ್ನು ನಾಳೆ ಶುಕ್ರವಾರ (27-13-2024) ರಂದು ಪಟ್ಟಣದಲ್ಲಿ ಆಯೋಜಿಸಲಾಗಿದೆ. ಪಟ್ಟಣದ ಜಯಶ್ರೀ ಮತ್ತು ಶ್ರೀನಿವಾಸ್ ಆಚಾರ್ ದಂಪತಿಗಳು ದುರ್ಗಾಂಬಿಕ ಸಾಮಿಲ್ ಆವರಣದಲ್ಲಿ ಹಮ್ಮಿಕೊಂಡಿರುವ ಪಂಚಮಾ ನವ ಚಂಡಿಕಾ ಹೋಮ ಧಾರ್ಮಿಕ ಕಾರ್ಯದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಮಧ್ಯಾಹ್ನ 12-30ಕ್ಕೆ ಪಂಚಮಾ ನವ…
ರಕ್ತದಾನಿ ಹಾಲೇಶಪ್ಪಗೆ ಸಂಘ ಸಂಸ್ಥೆಗಳಿಂದ ಸನ್ಮಾನ
ರಕ್ತದಾನಿ ಹಾಲೇಶಪ್ಪಗೆ ಸಂಘ ಸಂಸ್ಥೆಗಳಿಂದ ಸನ್ಮಾನ ಶಿವಮೊಗ್ಗ: ವೃತ್ತಿಯ ಜತೆಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಕ್ತದಾನಿ, ಪರಿಸರ ಪ್ರೇಮಿ, ಸಮಾಜ ಸೇವಕ, ಭದ್ರಾವತಿ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ ಅವರಿಗೆ ಶಿವಮೊಗ್ಗ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ ಸ್ಪಂದನ ಹೆಲ್ತ್ ಫೌಂಡೇಷನ್, ಸಂಜೀವಿನಿ ರಕ್ತನಿಧಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸ್ಪಂದನ ಹೆಲ್ತ್ ಫೌಂಡೇಷನ್ ಅಧ್ಯಕ್ಷ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಉಪಾಧ್ಯಕ್ಷ ತಾರಾನಾಥ್ ಮಾತನಾಡಿ, ಹಾಲೇಶಪ್ಪ ಅವರು ಈಗಾಗಲೇ ೪೪ ಬಾರಿ ರಕ್ತದಾನ ಮಾಡಿ…
ಖಾತೆ ಮಾಡಿಕೊಡಲು ಲಂಚ ಪಡೆಯುತಿದ್ದ ಪಿಡಿಓ ಲೋಕಾಯುಕ್ತ ವಶಕ್ಕೆ..
ಖಾತೆ ಮಾಡಿಕೊಡಲು ಲಂಚ ಪಡೆಯುತಿದ್ದ ಪಿಡಿಓ ಲೋಕಾಯುಕ್ತ ವಶಕ್ಕೆ.. ಖಾತೆ ಮಾಡಿಕೊಡಲು ರೂ. 5000/-ಗಳ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು, ಇಂಡುವಳ್ಳಿ ಗ್ರಾ.ಪಂ.ನ ಪ್ರಭಾರ ಪಿಡಿಓ ಈಶ್ವರಪ್ಪರವನ್ನು ಟ್ರ‍್ಯಾಪ್ ಮಾಡಿ ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್ ರವರು ಪ್ರಕರಣದ ತನಿಖೆಯನ್ನು ಕೈಗೊಂಡಿರುತ್ತಾರೆ. ಮಹಮ್ಮದ್ ಗೌಸ್ ರವರ ತಂದೆ ಭಾಷಾ ಸಾಬ್‌ರವರು ಇಂಡುವಳ್ಳಿ ಗ್ರಾಮದಲ್ಲಿ ಜಮೀನನ್ನು…