ರಿಪ್ಪನ್‌ಪೇಟೆ: ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಡಾ.ಪುನಿತ್ ರಾಜ್‍ಕುಮಾರ್ ಅಭಿಮಾನಿ ಬಳಗ ಮಂಗಳವಾರ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವದ ಅದ್ಧೂರಿ ಕನ್ನಡ ನುಡಿ ಸಂಭ್ರಮಕ್ಕೆ ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು .
ಹಿರಿಯ ಸಾಹಿತಿ ಹನುಮಂತ ಅನಂತ ಪಾಟೀಲ್
ಅವರು ತಾಯಿ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರಾ ಮೆರವಣಿಗೆಗೆ ಚಾಲನೆ ನೀಡಿದರು.
ಈ ಮೆರವಣಿಗೆಯಲ್ಲಿ ಹೆಗ್ಗೂಡಿನ ಮಹಿಳೆಯರ ಡೊಳ್ಳು ಕುಣಿತ, ಚಿಕ್ಕಮಗಳೂರಿನ ಮಹಿಳೆಯರ ವೀರಗಾಸೆ ನೃತ್ಯ, ಸಾಗರ ತಾಲ್ಲೂಕಿನ ಮಹಿಳೆಯರ ಚಂಡೆ ನೃತ್ಯದೊಂದಿಗೆ ವಿವಿಧ ಶಾಲಾ ಕಾಲೇಜುಗಳ ವಾದ್ಯ ಘೋಷ್ ಮೆರವಣಿಗೆಗೆ ಸಾಥ್ ನೀಡಿದವು .
ತೆರೆದ ವಾಹನದಲ್ಲಿ ಅನಾವರಣಗೊಂಡ ಭಾರೀ ಗಾತ್ರದ ತಾಯಿ ಭುವನೇಶ್ವರಿ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರ ಹಾಗೂ ರಾಷ್ಟ್ರ ಶಕ, ಪುರುಷರ ವಿವಿಧ ವೇಷ ಭೂಷಣಗಳ ಧಿರಿಸು ತೊಟ್ಟು ಸಂಭ್ರಮಿಸಿದ ಪುಟಾಣಿಗಳ ಸಾಲು , ಸಹಸ್ರಾರು ಸಂಖ್ಯೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳ ಪಥಸಂಚಲನದ ಅಕರ್ಷಣೆಯ ಮೆರವಣಿಗೆ ದಾರಿಹೋಕರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.
ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಆನಂದ್, ಮಾಜಿ ಅಧ್ಯಕ್ಷ ಆರ್.ಎ.ಚಾಬುಸಾಬ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್,ಆರ್ ಎನ್‌ಮಂಜುನಾಥ್,ಆರ್ ರಾಘವೇಂದ್ರ, ಗ್ರಾಮ ಪಂಚಾಯ್ತಿ ಆಡಳಿತ ವರ್ಗ ಹಾಗೂ ಸದಸ್ಯರು , ನಾಡ ಕಚೇರಿ ಉಪ ತಹಸಿಲ್ದಾರ್ ಹುಚ್ಚರಾಯಪ್ಪ , ಪಿಎಸ್ ಐ ಶಿವಾನಂದ ಕೋಳಿ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಆಟೊ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು , ವಿವಿಧ ಸಂಘ ಸಂಸ್ಥೆಗಳ ಮತ್ತು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜ್ ಶಿಕ್ಷಣ ಸಂಸ್ಥೆಯ ಪ್ರಮುಖರು ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇