Headlines

ರಿಪ್ಪನ್‌ಪೇಟೆ : ಒಂಟಿ ಸಲಗನ ದಾಳಿಗೆ ಕಂಗಾಲಾದ ರೈತರು|Wild

ರಿಪ್ಪನ್‌ಪೇಟೆ : ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆಳ್ಳೂರು ಗ್ರಾಮ ಪಂಚಾಯ್ತಿಯ ಹಲವು ಗ್ರಾಮಗಳಲ್ಲಿ
ಒಂಟಿ ಸಲಗನ ದಾಳಿಯಿಂದಾಗಿ ಭತ್ತ ಅಡಿಕೆ ತೋಟ ದ್ವಂಸಗೊಂಡಿದ್ದು ರೈತರನ್ನು ಕಂಗಾಲಾಗಿಸಿದೆ. 





 ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಬ್ಬಿಗಾ ಗುಳಿಗುಳಿಶಂಕರದ ಅವಡೆ ಶಿವಪ್ಪ ಎಂಬುವರ
ಭತ್ತದ ಗದ್ದೆ ಹಾಗೂ ಕಳಸೆ ಗಂಗಾಧರಗೌಡ ದೇವೇಂದ್ರಪ್ಪಗೌಡರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ
ಮರಗಳನ್ನು ದ್ವಂಸಗೊಳಿಸಿದ್ದು ರೈತರಲ್ಲಿ ಭಯ ಬೀತರನ್ನಾಗಿದೆ. 

ಸಿರಿಗೆರೆ ಮತ್ತು ಮೂಗುಡ್ತಿ
ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಗೆ ಬರುವ ಕಳಸೆ ನರ‍್ಲಿಗೆ ಬೆಳ್ಳೊರು ಗುಬ್ಬಿಗಾ,ಗುಳುಗುಳಿ
ಶಂಕರ.ಅವಡೆ ವ್ಯಾಪ್ತಿಯಲ್ಲಿನ ರೈತರ ಹೊಲ ಗದ್ದೆಗಳಿಗೆ ನುಗ್ಗಿ ಬೆಳೆ ನಾಶಗೊಳಿಸುತ್ತಿದ್ದು ಅರಣ್ಯ
ಇಲಾಖೆಯವರು ತಕ್ಷಣ ಒಂಟಿ ಸಲಗವನ್ನು ಓಡಿಸಲು ಮುಂದಾಗ ಬೇಕು ಎಂದು ರೈತರು ಮನವಿ ಮಾಡಿದ್ದಾರೆ.



 
ಕಳೆದ ಕೆಲವು ತಿಂಗಳ ಹಿಂದೆ ಆನೆಗಳು ತಳಲೆ,ವಡಾಹೊಸಹಳ್ಳಿ ಭಾಗದಲ್ಲಿ ಕಾಣಿಸಿಕೊಂಡು ಹಲವು ಎಕರೆ ತೋಟಗಳನ್ನು ನಾಶಪಡಿಸಿತ್ತು.ನಂತರ ಅರಣ್ಯ ಇಲಾಖೆಯವರು ಸಕ್ರೆಬೈಲ್ ನಿಂದ ಸಾಕಾನೆಗಳನ್ನು ತರಿಸಿ ಕಾಡಾನೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದರು.

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಆನೆಗಳನ್ನು ಓಡಿಸುವುದರ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕಾಗಿದೆ.



Leave a Reply

Your email address will not be published. Required fields are marked *