ನವೆಂಬರ 6ರಂದು ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಜನಜಾಗೃತಿ ಧರ್ಮ ಸಮಾರಂಭ|ದೀಪೋತ್ಸವದ ಅಂಗವಾಗಿ ಭಕ್ತರಿಂದ ಮಠದ ಸ್ವಚ್ಚತಾ ಅಭಿಯಾನ|Malalimatt

ನವೆಂಬರ್ 6 ರ ಭಾನುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಳಲಿ‌ಮಠ ಮಹಾಸಂಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಜನ ಜಾಗೃತಿ ಧರ್ಮ ಸಮಾರಂಭ ನಡೆಯಲಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾ ಸ್ವಾಮಿಜಿಗಳು ತಿಳಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಮಾನವ ಜೀವನದಲ್ಲಿ ಕತ್ತಲೆ ಬೆಳಕಿನಂತೆ ಸುಖ ದುಃಖಗಳು ಶಾಶ್ವತವಲ್ಲ. ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಲು ಆಧ್ಯಾತ್ಮದ ಬೆಳಕು ಮಾನವನಿಗೆ ಅನಿವಾರ್ಯವಾಗುತ್ತದೆ ಎಂದರು. ನವೆಂಬರ್ 06 ಭಾನುವಾರದಂದು ರಂದು ನಡೆಯುವ ಕಾರ್ತೀಕ ದೀಪೋತ್ಸವ ಹಾಗೂ…

Read More

ರಿಪ್ಪನ್‌ಪೇಟೆ : ಒಂಟಿ ಸಲಗನ ದಾಳಿಗೆ ಕಂಗಾಲಾದ ರೈತರು|Wild

ರಿಪ್ಪನ್‌ಪೇಟೆ : ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆಳ್ಳೂರು ಗ್ರಾಮ ಪಂಚಾಯ್ತಿಯ ಹಲವು ಗ್ರಾಮಗಳಲ್ಲಿ ಒಂಟಿ ಸಲಗನ ದಾಳಿಯಿಂದಾಗಿ ಭತ್ತ ಅಡಿಕೆ ತೋಟ ದ್ವಂಸಗೊಂಡಿದ್ದು ರೈತರನ್ನು ಕಂಗಾಲಾಗಿಸಿದೆ.   ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಬ್ಬಿಗಾ ಗುಳಿಗುಳಿಶಂಕರದ ಅವಡೆ ಶಿವಪ್ಪ ಎಂಬುವರ ಭತ್ತದ ಗದ್ದೆ ಹಾಗೂ ಕಳಸೆ ಗಂಗಾಧರಗೌಡ ದೇವೇಂದ್ರಪ್ಪಗೌಡರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಮರಗಳನ್ನು ದ್ವಂಸಗೊಳಿಸಿದ್ದು ರೈತರಲ್ಲಿ ಭಯ ಬೀತರನ್ನಾಗಿದೆ.  ಸಿರಿಗೆರೆ ಮತ್ತು ಮೂಗುಡ್ತಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಗೆ ಬರುವ ಕಳಸೆ ನರ‍್ಲಿಗೆ ಬೆಳ್ಳೊರು ಗುಬ್ಬಿಗಾ,ಗುಳುಗುಳಿ…

Read More

ಕೊನೆಗೂ ಬೋನಿಗೆ ಬಿದ್ದ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಜನತೆ|theleopard

ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಕ್ಯಾತಿನಕೊಪ್ಪ ರಸ್ತೆಯ ಸುತ್ತಮುತ್ತಲಿನ ಜಮೀನುಗಳಲ್ಲಿ ಕಳೆದೊಂದು ತಿಂಗಳಿನಿಂದ ಓಡಾಡುತ್ತಿದ್ದ ಚಿರತೆಯೊಂದು, ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಕೊನೆಗೂ ಬಿದ್ದಿದೆ. ಕ್ಯಾತಿನಕೊಪ್ಪ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದು ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಇತ್ತೀಚೆಗೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮಕೈಗೊಂಡಿತ್ತು. ಸೋಮವಾರ ಮುಂಜಾನೆ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ…

Read More

ಶಿವಮೊಗ್ಗ : ಬಿಹೆಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ – ಆಸ್ಪತ್ರೆಗೆ ದಾಖಲು|Shivamogga

ಹಲವಾರು ಗಲಭೆಯ ಬಳಿಕ ಶಾಂತವಾಗಿರುವ ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಹರಿತವಾದ ವಸ್ತುವಿನಿಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದ ಸಮೀಪದ ರಾಯಲ್ ಆರ್ಕೇಡ್ ಹೋಟೆಲ್ ಬಳಿ ಭಾನುವಾರ ರಾತ್ರಿ ಘಟನೆ ನಡೆದಿತ್ತು. ಸದ್ಯ ಗಾಯಾಳು ಅಶೋಕ್​ ಪ್ರಭು ಎಂಬವರನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸುಮಾರು ನಾಲ್ಕು ಜನರ ಗುಂಪಿನಿಂದ ಈ ದಾಳಿ ನಡೆದಿದೆ. ದುಷ್ಕರ್ಮಿಗಳ ಗುಂಪು ಮೊದಲೇ ರಸ್ತೆಯಲ್ಲಿ ನಿಂತುಕೊಂಡಿತ್ತು. ಈ ವೇಳೆ ಅಶೋಕ್ ಪ್ರಭು…

Read More

ರಿಪ್ಪನ್‌ಪೇಟೆ : ಹಿಂದೂ ಮಹಸಭಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ನಿಧನಕ್ಕೆ ಶ್ರದ್ದಾಂಜಲಿ|Ripponpet

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ರವರ ಅಕಾಲಿಕ ಸಾವು ನಮಗೆಲ್ಲಾ ಅತ್ಯಂತ ನೋವು ತಂದಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು,ಪಟ್ಟಣದ ಹಲವಾರು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ನಿತ್ಯಾನಂದ ಹೆಗಡೆ ರವರ ನಿಧನದ ಸುದ್ದಿ ನಮಗೆಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ವೈ ಜೆ ಕೃಷ್ಣ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರ್ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ…

Read More

ಹೋರಿ ಬೆದರಿಸುವ ಸ್ಪರ್ದೆ : ಜಿಲ್ಲೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮೂವರ ಸಾವು|Shikaripura

 ಹೋರಿ ಬೆದರಿಸುವ ಸ್ಪರ್ದೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣದಲ್ಲಿ ಮೂವರ ಸಾವು. ಶಿಕಾರಿಪುರದ ಗಾಮಾ ಗ್ರಾಮ ಹಾಗೂ ಸೊರಬ ತಾಲ್ಲೂಕಿನ ಜಡೆ ಗ್ರಾಮ ಹಾಗೂ ತರಲಘಟ್ಟ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಇಬ್ಬರು ಬಲಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿ ಗಾಮಾ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪ್ರಶಾಂತ್ (36) ಎಂಬಾತ ಸಾವನ್ನಪ್ಪಿದ್ದಾನೆ. ಘಟನೆ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಹೋರಿ ಬೆದರಿಸುವ ಸಂದರ್ಭದಲ್ಲಿ, ಬೆದರದ ಹೋರಿಯು ಒಂದು ಕಡೆಯ ಗೋಡೆ ಕಡೆಗೆ ತಿರುಗಿ ಹಿಂದಕ್ಕೆ…

Read More

ರಿಪ್ಪನ್‌ಪೇಟೆ : ಪುನೀತ್ ಪುಣ್ಯ ಸ್ಮರಣೆ |ರಾಜರತ್ನ ಮರೆಯಾಗಿ ಕಳೆದೇ ಹೋಯ್ತು ಒಂದು ವರ್ಷ|punith

ಮೊನ್ನೆ ಮೊನ್ನೆ ನಡೆದಿದೆಯೇನೋ.. ಎಂಬ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅಪ್ಪು ಅಗಲಿಕೆಗೆ ಆಗಲೇ ಒಂದು ವರ್ಷ. ಕಳೆದ ವರ್ಷ ಅಕ್ಟೋಬರ್ 29ರಂದು ಇಡೀ ಕರುನಾಡು ಕಣ್ಣೀರಿಟ್ಟಿತ್ತು. ನಿನ್ನೆಯಷ್ಟೇ ಪುನೀತ್ ಕಟ್ಟಕಡೆಯ ಸಿನಿ-ಡಾಕ್ಯುಮೆಂಟರಿ ಅಥವಾ ಡಾಕ್ಯು-ಡ್ರಾಮಾ ಗಂಧದ ಗುಡಿ ರಿಲೀಸ್ ಆಗಿದೆ. ಕರ್ನಾಟಕ ರತ್ನ ಡಾ| ಪುನೀತ್ ರಾಜ್‍ಕುಮಾರ್ ರವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿ…

Read More

ಮೇಗರವಳ್ಳಿ : ಪಾದಚಾರಿಗೆ ಡಿಕ್ಕಿ ಹೊಡೆದ ಇನ್ನೊವಾ ಕಾರು – ವ್ಯಕ್ತಿ ಸಾವು|Thirthahalli

ತೀರ್ಥಹಳ್ಳಿ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮೇಗರವಳ್ಳಿ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ ಭೀಕರ ಅಪಘಾತದಲ್ಲಿ ವೃದ್ದನೊಬ್ಬ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ನೆಡೆದಿದೆ. ಮೇಗರವಳ್ಳಿ ಗ್ರಾಮದ ಪುರೋಹಿತರಾದ ಕೆ ಜಿ ಗಣೇಶ್ ರಾವ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಮೇಗರವಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ವೃದ್ದರಾದ ಕೆ ಜಿ ಗಣೇಶ್ ರಾವ್ ರಸ್ತೆ ದಾಟುತ್ತಿದ್ದಾಗ ಇನೋವಾ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ತಕ್ಷಣ ಸ್ಥಳೀಯರು ಗಾಯಾಳುವಿಗೆ ಮೇಗರವಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ …

Read More

ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ದತೆ : ಕಾರ್ಯಕ್ರಮದ ಅಹ್ವಾನ ಪತ್ರಿಕೆ ಬಿಡುಗಡೆ|Ripponpet

ರಿಪ್ಪನ್‌ಪೇಟೆ ;-ಇಲ್ಲಿನ ಕಸ್ತೂರಿ ಕನ್ನಡ ಸಂಘದ ನವಂಬರ್ 1 ರಂದು 67 ನೇ ಕನ್ನಡ ರಾಜ್ಯೋತ್ಸವ ಮತ್ತು ದಿ.ಪುನಿತ್‌ರಾಜ್ “ಪುಣ್ಯ ಸ್ಮರಣೆ’’ ಕಾರ್ಯಕ್ರಮದ ಅಹ್ವಾನ ಪತ್ರಿಕೆಯ ಬಿಡುಗಡೆಯನ್ನು ಹಿರಿಯ ಸಾಹಿತಿ ಹ.ಅ..ಪಾಟೀಲ್ ಬಿಡುಗಡೆಗೊಳಿಸಿದರು. ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಕಸ್ತೂರಿ ಕನ್ನಡ ಸಂಘದ ಅಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಸೀಮಿತಗೊಳ್ಳದೆ ನಿತ್ಯೋತ್ಸವವಾಗಲಿ ಎಂದು ಅಶಿಸಿದರು. ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಅನಂದ ಅಧ್ಯಕ್ಷತೆ ವಹಿಸಿ ಮಾತನಾಡಿ ಭೂಪಾಳಂ ಚಂದ್ರಶೇಖರಯ್ಯ…

Read More

ಚಲಿಸುತಿದ್ದ ರೈಲಿಗೆ ಸಿಲುಕಿ ರಬ್ಬರ್ ಟ್ಯಾಪಿಂಗ್ ಮಾಡುವ ಯುವಕ ಸಾವು|Railway

ರಿಪ್ಪನ್‌ಪೇಟೆ : ಇಲ್ಲಿಗೆ ಸಮೀಪದ ಅರಸಾಳು ಗ್ರಾಮದಲ್ಲಿ ಚಲಿಸುತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಇಂದು ಬೆಳಗಿನಜಾವ ನಡೆದಿದೆ. ಅರಸಾಳು ಗ್ರಾಮದ ಕೆರೆ ಏರಿ‌ಮೇಲಿನ ತಿರುವಿನಲ್ಲಿ ಈ ಘಟನೆ ನಡೆದಿದ್ದು ಮೃತಪಟ್ಟ ವ್ಯಕ್ತಿಯನ್ನು ಸಾಗರದ ತ್ಯಾಗರ್ತಿ ಮೂಲದ ಸಂತೋಷ್ (22) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಶಿವಮೊಗ್ಗದ ರೈಲ್ವೆ ಪೊಲೀಸರು ಆಗಮಿಸಿ ಸ್ಥಳ ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅರಸಾಳುವಿನ ರಬ್ಬರ್ ತೋಟದಲ್ಲಿ ಕೆಲಸಕ್ಕಾಗಿ ಎರಡು ದಿನಕೊಮ್ಮೆ ಈತ ಇಲ್ಲಿಗೆ ಬರುತ್ತಿದ್ದನು. ಇಂದು ಬೆಳಗ್ಗೆ…

Read More