ಹೋರಿ ಬೆದರಿಸುವ ಸ್ಪರ್ದೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣದಲ್ಲಿ ಮೂವರ ಸಾವು.
ಶಿಕಾರಿಪುರದ ಗಾಮಾ ಗ್ರಾಮ ಹಾಗೂ ಸೊರಬ ತಾಲ್ಲೂಕಿನ ಜಡೆ ಗ್ರಾಮ ಹಾಗೂ ತರಲಘಟ್ಟ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಇಬ್ಬರು ಬಲಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿ ಗಾಮಾ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪ್ರಶಾಂತ್ (36) ಎಂಬಾತ ಸಾವನ್ನಪ್ಪಿದ್ದಾನೆ. ಘಟನೆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಹೋರಿ ಬೆದರಿಸುವ ಸಂದರ್ಭದಲ್ಲಿ, ಬೆದರದ ಹೋರಿಯು ಒಂದು ಕಡೆಯ ಗೋಡೆ ಕಡೆಗೆ ತಿರುಗಿ ಹಿಂದಕ್ಕೆ ವಾಪಸ್ ನುಗ್ಗುತ್ತದೆ.
ಈ ವೇಳೆ ಪ್ರಶಾಂತ್ನ ಮೈಮೇಲೆ ಹಾರಿ ಎದೆ ಮೇಲೆ ಕಾಲಿಟ್ಟು ಮುಂದಕ್ಕೆ ಹೋದ ಹೋರಿ. ಈ ಸಂದರ್ಭದಲ್ಲಿ ಪ್ರಶಾಂತ್ ಗಂಭೀರ ಗಾಯ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾದೇ ಪ್ರಶಾಂತ್ ಸಾವಿಗೀಡಾಗಿದ್ದಾರೆ.
ಇದೇ ರೀತಿ ಸೊರಬ ತಾಲ್ಲೂಕು ಜಡೆ ಗ್ರಾಮದಲ್ಲೂ ಕೂಡ ಚಗಟೂರು ನಿವಾಸಿ ಆದಿ (20) ಎ ಓರ್ವ ಹೋರಿಹಬ್ಬಕ್ಕೆ ಬಲಿಯಾಗಿದ್ದಾನೆ.
ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.
ತಾಲೂಕಿನ ಕಲ್ಮನೆ ಗ್ರಾಮದ ವಸಂತ (30) ಹೋರಿ ತಿವಿದು ಮೃತಪಟ್ಟ ವ್ಯಕ್ತಿ. ಈತ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದು ಹೋರಿ ಕುತ್ತಿಗೆಗೆ ತಿವಿದಿದ್ದು ಗಾಯಗೊಂಡ ವಸಂತನನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಸ್ನೇಹಿತರು ಕರೆದೊಯ್ದಿದ್ದರು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.