ಹೊಸನಗರ ತಾಲೂಕಿನ 1167 ಹಳ್ಳಿಗಳ ಕುಡಿಯುವ ನೀರಿನ ಯೋಜನೆಗೆ 422 ಕೋಟಿ ರೂ : ಹರತಾಳು ಹಾಲಪ್ಪ | ರಿಪ್ಪನ್‌ಪೇಟೆ ದ್ವಿಪಥ ರಸ್ತೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ|Halappa

ರಿಪ್ಪನ್‌ಪೇಟೆ : ಹೊಸನಗರ ತಾಲ್ಲೂಕಿನ ಕಸಬಾ ಮತ್ತು ಕೆರೆಹಳ್ಳಿ ಹೋಬಳಿಯ 1167 ಹಳ್ಳಿಗಳ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ 422 ಕೋಟಿ ರೂ ಪ್ರಸ್ತಾವನೆಗೆ ಸರ್ಕಾರದಿಂದ ಅಡಳಿತಾತ್ಮಕ ಅನುಮೋದನೆ ದೊರಕಿದೆ ಎಂದು ಸಾಗರ ಹೊಸನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹೇಳಿದರು.




ರಿಪ್ಪನ್‌ಪೇಟೆಯ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ ಹೊಸನಗರ ತಾಲ್ಲೂಕಿನ ಪಟ್ಟಣ ಪಂಚಾಯ್ತಿ ಮತ್ತು 30 ಗ್ರಾಮ ಪಂಚಾಯ್ತಿಗಳಿಗೆ 50.25.15.10 ಮತ್ತು 5 ಸಾವಿರ ಲೀಟರ್ ಸಾಮರ್ಥ್ಯದ ಒಟ್ಟು 180 ಓವರ್ ಹೆಡ್‌ಟ್ಯಾಂಕ್ ನಿರ್ಮಾಣದೊಂದಿಗೆ 780 ಕಿ.ಮೀ ದೂರ 1167 ಗ್ರಾಮಗಳಿಗೆ ಚಕ್ರವರಾಹಿ ಶರಾವತಿ ನದಿಯಿಂದ ಶುದ್ದ ಕುಡಿಯುವ ನೀರು ಸರಬರಾಜು ಮಾಡವ ಈ ಯೋಜನೆಯಾಗಿದ್ದು ನಾಗೋಡಿಯಿಂದ ಸೂಡೂರು ವ್ಯಾಪ್ತಿಯ ಮಜರೆ ಕಂದಾಯ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುವುದೆಂದು ವಿವರಿಸಿ 2053 ಇಸವಿಯವರಗಿನ ಮುಂದಾಲೋಚನೆಯ ಈ ಯೋಜನೆಯಾಗಿದೆ ಎಂದು ವಿವರಿಸಿದರು.


ಈ ಮಹತ್ತರ ಯೋಜನೆಗೆ ಸಹಕರಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರರವರನ್ನು ಮತ್ತು ಸಚಿವ ಸಂಪುಟದವರನ್ನು ಅಭಿನಂದಿಸಿದರು.




ಈಗಾಗಲೇ ಸಾಗರ ತಾಲ್ಲೂಕಿನ ಎರಡು ಹೋಬಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಶೇಕಡಾ 90 ಮುಗಿದಿದ್ದು ಉಳಿದ ಶೇಕಡಾ 10 ಪೂರ್ಣ ಪ್ರಗತಿಯಲ್ಲಿದೆ ನಾವು ಮಾಡುವ ಕೆಲಸ ಸಾಧನೆಯಾಗಬೇಕೇಂಬ ವಿಶ್ವಾಸದೊಂದಿಗೆ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದೆ 

ದ್ವಿಪಥ ರಸ್ತೆಗೆ ಸದ್ಯದಲ್ಲೇ ಚಾಲನೆ :

ಕೆಲವೇ ದಿನಗಳಲ್ಲಿ ಸಾಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ 1 ರ ವಿನಾಯಕ ವೃತ್ತದಿಂದ ತಲಾ ಒಂದೊಂದು ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿ ಅರಂಭಿಸಲಾಗುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.




ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ,ಜಿ.ಪಂ.ಮಾಜಿ ಸದಸ್ಯೆ.ಎ.ಟಿ.ನಾಗರತ್ನ,ಪಕ್ಷದ ಮುಖಂಡರಾದಆರ್.ಟಿ.ಗೋಪಾಲ,ಎಂ.ಸುರೇಶ್‌ಸಿಂಗ್,ಸುಧೀಂದ್ರ ಪೂಜಾರಿ,ಆನಂದ್ ಮೆಣಸೆ,ಪಿ ರಮೇಶ್, ಸುಂದರೇಶ್,ಮಹಾಲಕ್ಷಿ, ಎನ್.ಸತೀಶ್,ವಿನೋಧ,ವನಮಾಲ,ಯೋಗೇಂದ್ರಗೌಡ,ಕೆ.ಬಿ.ಹೂವಪ್ಪ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *