ಅಮ್ಮನಘಟ್ಟ ಕಪ್ಪು ಬಾವುಟ ಪ್ರದರ್ಶನ ಪ್ರಕರಣ – ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ವಿರುದ್ದ ಪ್ರತಿಭಟನೆಯೇ ಹೊರತು ಶಾಸಕರ ವಿರುದ್ದವಲ್ಲ – ಚಿದಂಬರಂ ಸ್ಪಷ್ಟನೆ|black

ರಿಪ್ಪನ್‌ಪೇಟೆ : ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಶಿಲಾಮಯ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ್ದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ವಿರುದ್ದವೇ ಹೊರತು ಶಾಸಕರ ವಿರುದ್ದವಲ್ಲ ಎಂದು ಮಾರುತಿಪುರ ಗ್ರಾಪಂ ಅಧ್ಯಕ್ಷ ಎಚ್ ಬಿ ಚಿದಂಬರ ಸ್ಪಷ್ಟನೆ ನೀಡಿದ್ದಾರೆ.




ಈ ಘಟನೆ ಬಗ್ಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ಚಿದಂಬರಂ ಬಳಿ ದೂರವಾಣಿ ಮೂಲಕ ಸ್ಪಷ್ಟನೆ ಕೇಳಿದಾಗ ಮಾತನಾಡಿದ ಅವರು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿರುವುದು ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ವಿರುದ್ದವೇ ಹೊರತು ಶಾಸಕ ಹರತಾಳು ಹಾಲಪ್ಪ,ಗೃಹ ಸಚಿವ ಆರಗ ಜ್ಞಾನೇಂದ್ರ ,ಸಂಸದ ಬಿ ವೈ ರಾಘವೇಂದ್ರ ವಿರುದ್ದವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.




ನಿನ್ನೆಯ ಘಟನೆ ಬಗ್ಗೆ ಹಲವಾರು ಸುದ್ದಿ ಮಾದ್ಯಮಗಳು ಮಾರುತಿಪುರ  ಗ್ರಾಪಂ ಅಧ್ಯಕ್ಷ ಚಿದಂಬರ ಗೃಹ ಸಚಿವ ಹಾಗೂ ಸಂಸದರ ಮುಂಭಾಗದಲ್ಲಿ ಶಾಸಕ ಹರತಾಳು ಹಾಲಪ್ಪ ರವರಿಗೆ ಕಪ್ಪು ಬಾವುಟ ಪ್ರದರ್ಶಿದ್ದಾರೆ ಎಂದು ಸುದ್ದಿ ಮಾಡಿತ್ತು ಈ ಬಗ್ಗೆ ಉತ್ತರಿಸಿದ ಚಿದಂಬರಂ ಶಾಸಕ ಹರತಾಳು ಹಾಲಪ್ಪ ರವರ ಮೇಲೆ ನಮಗೆ ಅಪಾರವಾದ ಗೌರವವಿದೆ ನಾವು ಕೇವಲ ಏಕಪಕ್ಷೀಯವಾಗಿ ಅಧಿಕಾರ ನಡೆಸುತ್ತಿರುವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವಿರುದ್ದವಷ್ಟೇ ಕಪ್ಪು ಬಾವುಟ ಪ್ರದರ್ಶಿಸಿದ್ದು ಎಂದು ಹೇಳಿದರು.

ಘಟನೆಯ ಹಿನ್ನಲೆ


ಸೋಮವಾರ ನಡೆದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಶಿಲಾಮಯ ಕಾಮಗಾರಿ ಶಂಕುಸ್ಥಾಪನೆ ಕಾರ‍್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೆಸರನ್ನು ಸೇರಿಸಿಲ್ಲ. ದೇವಸ್ಥಾನಕ್ಕೆ ನಡೆದುಕೊಳ್ಳುವ ಕೆಲ ಸಮುದಾಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ.ಚಿದಂಬರ ವೇದಿಕೆ ಮುಂಭಾಗ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.


ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಲಾಗಿತ್ತು.



Leave a Reply

Your email address will not be published. Required fields are marked *