ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಪೊಲೀಸರ ಬಂದೂಕು ಮತ್ತು ಲಾಟಿ ಮಾತನಾಡುತ್ತದೆ – ಹರತಾಳು ಹಾಲಪ್ಪ|halappa

ಯಾರೇ ಆಗಲಿ‌ ಕಾನೂನು ಕೈಗೆತ್ತಿಕೊಂಡರೆ ಪೊಲೀಸರ ಬಂದೂಕು ಮತ್ತು ಲಾಟಿ ಮಾತನಾಡುತ್ತದೆ ಎಂದು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದ್ದಾರೆ.




ಸಾಗರದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನೀಡಿದ ಬಜರಂಗ ದಳದ ಮುಖಂಡ ಸುನೀಲ್ ಮೇಲೆ ಹಲ್ಲೆ ಯತ್ನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು 18 ಗಂಟೆಯಲ್ಲಿ ಬಂಧಿಸಿದ್ದಾರೆ. ಘಟನೆ ಖಂಡಿಸಿ ಇಂದು ಸಾಗರ ಬಂದ್ ಕೂಡ ಶಾಂತಿಯುತವಾಗಿ ಯಶಸ್ವಿಯಾಗಿದೆ. ಹಲ್ಲೆಗೆ ಕಾರಣ ಏನೇ ಆಗಿರಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಸಾಗರ ನಗರ ಬಂದ್ ಮಾಡುವ ಮೂಲಕ ಜನರಲ್ಲಿ ಧೈರ್ಯ ಹಾಗೂ ಆರೋಪಿಗಳಲ್ಲಿ ಭಯ ಹುಟ್ಟಿಸಲಾಗಿದೆ.




ಘಟನೆ ಬಗ್ಗೆ ತಿಳಿದ 10 ನಿಮಿಷದಲ್ಲಿ ಸುನೀಲ್ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ ಪೊಲೀಸರ ಬಳಿ ಚರ್ಚಿಸಿಲಾಗಿತ್ತು.ಆ ಸಂಧರ್ಭದಲ್ಲಿ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ಪೊಲೀಸರು ನೀಡಿದ್ದರು ಅದರಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಘಟನೆಯ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಸಂಸದರ ಗಮನಕ್ಕೆ ತರಲಾಗಿತ್ತು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎಂದರು.



Leave a Reply

Your email address will not be published. Required fields are marked *