ಶಾರಿಕ್ ಮನೆ ಮೇಲೆ ಈಡಿ ತಂಡ ದಾಳಿ
ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯ ಶಾರಿಕ್ ಅಜ್ಜಿಯ ಮನೆಯ ಮೇಲೆ ಈಡಿ ಅಧಿಕಾರಿಗಳ ತಂಡ ರೈಡ್ ಮಾಡಿದೆ. ಇಂದು ಬೆಳ್ಳಂ ಬೆಳಗ್ಗೆ ದಾಳಿ ನೆಡೆಸಿದ್ದಾರೆ. ದಾಳಿಯ ಬಗ್ಗೆ ಅಧಿಕಾರಿಗಳು ಯಾವುದೇ ರೀತಿ ಮಾಹಿತಿ ನೀಡುತ್ತಿಲ್ಲ. ನಗರದಲ್ಲಿ ಹಲವು ಕಡೆ ಕಡೆ ಶೋಧ ಮಾಡುವ ಸಾಧ್ಯತೆ ಇದ್ದು ಈಗಾಗಲೇ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.
ಕಿಮ್ಮನೆ ಕಚೇರಿ ಮೇಲೆ ದಾಳಿ ಮಾಡಿದ್ರ ಅಧಿಕಾರಿಗಳು ?
ಶಾರಿಕ್ ಅಜ್ಜಿ ಮನೆಯ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಚೇರಿಗೆ ಈಡಿ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಕೇಳುತ್ತಿದ್ದರು.
ಶಾರೀಖ್ನ ಅಜ್ಜನಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿಯನ್ನ ತೆರೆಯಲಾಗಿತ್ತು. ಈ ಸಂಬಂಧ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಈ ಅಗ್ರಿಮೆಂಟ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ರವರ ಸಂಬಂಧಿ ಹೆಸರಲ್ಲಿ ಮಾಡಿಕೊಳ್ಳಲಾಗಿತ್ತು. ಸದ್ಯ ಶಾರೀಖ್ಗೆ ಸೇರಿದ ಹಣಮೂಲ ಮತ್ತು ಆಸ್ತಿ ಮೂಲದ ವಿಚಾರವಾಗಿ ತೀರ್ಥಹಳ್ಳಿಗೆ ಭೇಟಿಕೊಟ್ಟಿರುವ ಇಡಿ ಅಧಿಕಾರಿಗಳು, ಕಾಂಗ್ರೆಸ್ ಕಚೇರಿಯಲ್ಲಿಯು ದಾಖಲಾತಿಯ ಪರಿಶೀಲನೆ ನಡೆಸಿದ್ದಾರೆ.