Headlines

Ripponpete | ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆಯ ಪಾಠ ಅಗತ್ಯ

ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆಯ ಪಾಠ ಅಗತ್ಯ ರಿಪ್ಪನ್‌ಪೇಟೆ;-ಬುದ್ದಿವಂತನಲ್ಲ ಎಂದು ಮಕ್ಕಳನ್ನು ತೆಗಳದೆ ಅವರ ಕ್ರೀಯಾಶಕ್ತಿಯನ್ನಾದರಿಸಿ ಪ್ರೋತ್ಸಾಹಿಸಿದಲ್ಲಿ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿರುತ್ತಾರೆ.ವಿದ್ಯಾರ್ಥಿ ವ್ಯಾಸಂಗದಲ್ಲಿ ಹಿಂದೆ ಉಳಿದಿದ್ದಾನೆಂದು ಚಿಂತಿಸದೇ ಅವರಿಗೆ ಹೆಚ್ಚು ಪ್ರೋತ್ಸಾಹಿಸಿದಲ್ಲಿ ಹೆಚ್ಚು ಸಾಧನೆ ಮಾಡುವ ಮೂಲಕ ಮೊದಲ ವ್ಯಕ್ತಿಯಾಗುತ್ತಾನೆ ಎಂದು ಕಬಳೆ ಸಂತ ಫ್ರಾನ್ಸಿಸ್ ಕ್ಸೇಮಿಯರ್ ಧರ್ಮ ಕೇಂದ್ರದ ರೆವೆರಂಟ್ ಫಾದರ್ ರೋಮನ್ ಪಿಂಟೋ ಹೇಳಿದರು. ರಿಪ್ಪನ್‌ಪೇಟೆಯ ಗುಡ್‌ಶಫರ್ಡ್ ಹಿರಿಯ ಪ್ರಾಥಮಿಕ ಪಾಠಶಾಲೆಯ “ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮನಷ್ಯನ ದುರಾಸೆಯಿಂದಾಗಿ ನಮ್ಮ…

Read More

ರೈಲ್ವೆ ಪೊಲೀಸರ ಮಿಂಚಿನ ಕಾರ್ಯಾಚರಣೆ – ತಾಮ್ರದ ತಂತಿ ಕಳ್ಳತನವೆಸಗಿದ್ದ ಆರೋಪಿಗಳ ಬಂಧನ|arrested

2 ಲಕ್ಷ ರೂ. ಮೌಲ್ಯದ ರೈಲ್ವೇ ಒಹೆಚ್‍ಇ ತಾಮ್ರದ ತಂತಿ ಕಳ್ಳತನ ; ಆರೋಪಿಗಳ ಬಂಧನ ಸಾಗರ : ಆನಂದಪುರ ಬಳಿ ಸುಮಾರು 2 ಲಕ್ಷ ರೂ. ಮೌಲ್ಯದ ರೈಲ್ವೇ ಒಹೆಚ್‍ಇ ತಾಮ್ರದ ತಂತಿಯನ್ನು ಕಳವು ಮಾಡಿ ಮಾರಾಟ ಮಾಡಿದ್ದ 3 ಮಂದಿ ಆರೋಪಿಗಳು ಮತ್ತು ತಂತಿ ಖರೀದಿಸಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಮೈಸೂರು ರೈಲ್ವೇ ರಕ್ಷಣಾ ವಿಶೇಷ ತಂಡ ಬಂಧಿಸಿದೆ. ಸೆ.13 ರಂದು ರಾತ್ರಿ ರೈಲ್ವೆ ರಕ್ಷಣಾ ಪಡೆಯ ವಿಶೇಷ ತಂಡ, ಮೈಸೂರು ಅಪರಾಧ ವಿಭಾಗದ…

Read More

ಬೋನಿಗೆ ಬಿದ್ದ ಚಿರತೆ – ನಿಟ್ಟುಸಿರು ಬಿಟ್ಟ ಜನತೆ

ಕಳೆದ ಎರಡು ತಿಂಗಳಿಂದ ಕಾಟ ಕೊಡುತ್ತಿದ್ದ ಚಿರತೆ ಶಿವಮೊಗ್ಗ ಗ್ರಾಮಾಂತರದ ಆಲದಹಳ್ಳಿ ಸೋಮಿನಕೊಪ್ಪದಲ್ಲಿ  ಬೋನಿಗೆ ಬಿದ್ದಿದೆ.ನಂತರ ಚಿರತೆಯನ್ನು ಅರಣ್ಯ ಇಲಾಖೆಯವರು ಬೇರೆಡೆ ಸಾಗಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ಬಾಳಿ ತಾಲೂಕಿನ ಪಲವನಹಳ್ಳಿ ಯಲ್ಲಿ ಮಹಿಳೆಯನ್ನು ಬಲಿ ತೆಗೆದುಕೊಂಡ ಚಿರತೆ ಆಲದಹಳ್ಳಿ ಸೋಮಿನಕೊಪ್ಪದಲ್ಲಿ ಬೋನಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಸಾಕಿದ ನಾಯಿಯನ್ನು ಬೋನಿನಲ್ಲಿಟ್ಟು ಚಿರತೆಯನ್ನ ಹಿಡಿಯಲಾಗಿದೆ. ಹೊಲದಲ್ಲಿ ಸೌತೆಕಾಯಿ ಕೀಳಲು ಬಂದ ರೈತರು ಬೋನಿಗೆ ಬಿದ್ದ ಚಿರತೆಯನ್ನು ಮೊದಲು ನೋಡಿದ್ದಾರೆ. ನಂತರ ಸ್ಥಳದಲ್ಲಿ ಜನ ಜಾತ್ರೆಯೇ ನಿರ್ಮಾಣವಾಗಿದೆ. ಕಳೆದ  ಮೂರು…

Read More

ಬಸ್ ನಿಯಂತ್ರಣ ತಪ್ಪಿ ಪಾದಾಚಾರಿಗಳಿಗೆ ಡಿಕ್ಕಿ : ಗಾಯಾಳುಗಳು ಮೆಗ್ಗಾನ್ ಗೆ ದಾಖಲು

ಆಯನೂರು ಮೆಸ್ಕಾಂ ಕಚೇರಿ ಎದುರು ನಡೆದುಕೊಂಡು ಹೋಗುತಿದ್ದ  ವಿದ್ಯಾರ್ಥಿಗಳಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರೂ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಬಸ್ ಆಯನೂರಿನ ಮೆಸ್ಕಾಂ ಕಚೇರಿ ಎದುರು ಚಾಲಕನ ನಿಯಂತ್ರಣ ಕೈತಪ್ಪಿ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಅಲ್ಲಾಭಕ್ಷಿ (17) ಆಯನೂರು ಸಮೀಪದ ಹೊಸೂರು ಗ್ರಾಮದವನೆಂದು ತಿಳಿದುಬಂದಿದೆ. ಸನು (16) ಎಂಬ ಯುವಕನು ಭದ್ರಾವತಿ ದಡಂಘಟ್ಟದ ಯುವಕನೆಂದು ಹಾಗೂ ಹಾರನಹಳ್ಳಿಯ ರಾಹುಲ್ (17) ಎಂಬುವರನ್ನು ಹೆಚ್ಚಿನ…

Read More

Ripponpete | ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ: ಎಸ್ ಎಲ್ ಭೋಜೇಗೌಡ

ಹೊಸನಗರ ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಕಾರ್ಯಗಾರ ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ: ಎಸ್ ಎಲ್ ಭೋಜೇಗೌಡ ರಿಪ್ಪನ್ ಪೇಟೆ : ಸಮಾಜದ ಸೇವೆಯಲ್ಲಿ ಅತ್ಯುನ್ನುತವಾದ ಸೇವೆಯನ್ನು ನೀಡುತ್ತಿರುವವರು ಶಿಕ್ಷಕರುಗಳು. ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ ಎಂದು  ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್ ಎಲ್. ಭೋಜೇಗೌಡ  ಹೇಳಿದರು. ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರುಗಳು ಸಮಾಜದ ಮುಖ್ಯ…

Read More

ಶಿವಮೊಗ್ಗದ ಹಲ್ಲೆ ಪ್ರಕರಣ – ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು|Shivamogga

ಶಿವಮೊಗ್ಗ : ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಉಳಿದವರ ವಿಚಾರಣೆ ಮುಂದುವರೆದಿದೆ. ಪ್ರಕಾಶ್ ಎಂಬುವವನ ಮೇಲೆ ಹಲ್ಲೆ ಮತ್ತು ಸೀಗೆಹಟ್ಟಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಮಾರ್ಕೆಟ್ ಫೌಜನ್(22), ಅಜರ್ ಯಾನೆ ಅಜ್ಜು(24) ಹಾಗೂ ಫರಾಜ್ (21) ಎಂಬುವರನ್ನ  ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮೂವರು ಪ್ರಕಾಶ್ ಹಲ್ಲೆಗೆ…

Read More

Thirthahalli | ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದು ಸ್ವಾಗತಾರ್ಹ- ಆರಗ ಜ್ಞಾನೇಂದ್ರ

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದು ಸ್ವಾಗತರ್ಹ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಜಗದೀಶ್ ಶೆಟ್ಟರ್ ಎಂಬುವವರು ಕಾಂಗ್ರೆಸ್ ಸಂಸ್ಕೃತಿಯನ್ನು  ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಗುರುವಾರ ಪಟ್ಟಣದಲ್ಲಿ ಮಾತನಾಡಿ ಜಗದೀಶ್ ಶೆಟ್ಟರ್ ಹುಟ್ಟಿನಿಂದ ಬಿಜೆಪಿ ಹಾಗೂ ಆರ್ ಎಸ್ ಎಸ್ ನಲ್ಲಿ ಬೆಳೆದು ಬಂದವರು, ಎಲ್ಲಾ ಸ್ಥಾನಮಾನಗಳು ಗೌರವಗಳು ಅವರಿಗೆ…

Read More

Ripponpete | ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು – ತಪ್ಪಿದ ಭಾರಿ ಅನಾಹುತ

Ripponpete | ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು – ತಪ್ಪಿದ ಭಾರಿ ಅನಾಹುತ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿ ಉರುಳಿ ಬಿದ್ದಿರುವ ಘಟನೆ ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ತಾವರೆಕೆರೆ ಸಮೀಪದಲ್ಲಿ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರ ಕಡೆಗೆ ತೆರಳುತಿದ್ದ ಮಾರುತಿ ಸ್ವಿಫ್ಟ್ ಕಾರು ತಾವರೆಕೆರೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಕೆಳಗೆ ಇಳಿದ ಪರಿಣಾಮ ಲೈಟ್ ಕಂಬಕ್ಕೆ ಡಿಕ್ಕಿಯಾಗಿ, ಮೋಟಾರ್ ಪಂಪ್ ಹೌಸ್ ಗೆ ಡಿಕ್ಕಿಯಾಗಿ…

Read More

ರಿಪ್ಪನ್ ಪೇಟೆ: ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಡಾ. ಆರ್ ಎ ಅಬೂಬಕರ್ ನಿಧನ:

ರಿಪ್ಪನ್ ಪೇಟೆ: ಇಲ್ಲಿನ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ ಪಕ್ಷದ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಡಾ. ಆರ್ ಎ ಅಬೂಬಕರ್ (61) ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗುರುವಾರ ರಾತ್ರಿ ತೀವ್ರ ತರವಾದ ಎದೆನೋವು ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.ಶುಕ್ರವಾರ ಮಧ್ಯಾಹ್ನ 12ಕ್ಕೆ ರಿಪ್ಪನ್ ಪೇಟೆಯ ಖಬರ್ಸ್ಥಾನ್ ನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ….

Read More

Ripponpete | ವಡಗೆರೆ ಶಾಲೆ ಬಳಿ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು

ವಡಗೆರೆ ಶಾಲೆ ಬಳಿ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ವಡಗೆರೆ ಶಾಲೆಯ ಮುಂಭಾಗದಲ್ಲಿ  ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಆವಿನಹಳ್ಳಿ ಸಮೀಪದ ಗುರುವಂತೆ ಗ್ರಾಮದ ನವೀನ್ ಕುಮಾರ್ ಜಿ ಕೆ ಎಂದು ಆತನ ಡ್ರೈವಿಂಗ್ ಲೈಸೆನ್ಸ್ ಆಧಾರದ ಮೇಲೆ ಗುರುತಿಸಲಾಗಿದೆ. ಆನಂದಪುರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಬೈಕ್ ನಡು ರಸ್ತೆಯಲ್ಲಿ ಅಪಘಾತವಾಗಿ ಯುವಕನ ತಲೆ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ….

Read More