ಹೊಸನಗರ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ಇಲಾಖೆಯ ನೌಕರರಿಂದ ಧರಣಿ|protest

ಹೊಸನಗರ ಅಂಚೆ ಕಛೇರಿಯ ಮುಂಭಾಗ ಅಂಚೆ ಇಲಾಖೆಯ ಕೆಲವು ನೌಕರರು ತಮ್ಮ ಬೇಡಿಕೆಗಾಗಿ ಧರಣಿ
ಹೊಸನಗರ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆ 169ವರ್ಷ ಸಂಭ್ರಮದಲ್ಲಿದ್ದು ಆದರೆ ನಮ್ಮ ಕೆಲವು ಬೇಡಿಕೆ ಈಡೇರಿಸಲಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಎ.ಐ.ಜಿ.ಓ.ಎಸ್.ಯು ಅಧ್ಯಕ್ಷ ಹೆಚ್.ಜಿ. ವೆಂಕಟೇಶ್‌ರವರ ನೇತೃತ್ವದಲ್ಲಿ ಹೊಸನಗರದ ಅಂಚೆ ಕಚೇರಿಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.

ಈ ಧರಣಿಯಲ್ಲಿ ಮಾತನಾಡಿದ ವೇಂಕಟೇಶ್‌ರವರು ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮುನಿದು 2016ನೇ ವರ್ಷದಲ್ಲಿ ಕಮಲೇಶ್ ಚಂದ್ರ ಕಮಿಟಿ ಆಯೋಗ ನೇಮಕ ಮಾಡಿ ಗ್ರಾಮೀಣ ಅಂಚೆ ನೌಕರರ ಸ್ಥಿತಿ-ಗತಿ ಬಗ್ಗೆ ವರದಿ ಕೇಳಿತ್ತು ಈ ವರದಿ ಸಲ್ಲಿಸಿ 7ವರ್ಷಗಳ ಕಾಲ ಕಳೆದರೂ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸದೇ ಕೇಂದ್ರ ಸರ್ಕಾರ ಮತ್ತು ಅಂಚೆ ಇಲಾಖೆ ಆಡಳಿತ ವ್ಯವಸ್ಥೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ನಮ್ಮ ಬೇಡಿಕೆಗಳಾದ 8ಗಂಟೆ ಕಾಲ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸುವುದು, ಸೇವಾ ಹಿರಿತನದ ಆದಾರದ ಮೇಲೆ 12-24-36 ಸೇವೆ ಸಲ್ಲಿಸಿದ ಗ್ರಾಮೇಣ ಅಂಚೆ ನೌಕರರಿಗೆ ವಿಶೇಷ ಇನ್‌ಕ್ರೀಮೆಂಟ್ ನೀಡುವುದು ಗ್ರೋಪ್ ಇನ್ಸ್ರಿರೇನ್ಸ್ ರೂಪಾಯಿ 5ಲಕ್ಷಕ್ಕೆ ಏರಿಸುವುದು. ಜಿಡಿಎಸ್ ಗ್ರಾಚ್ಯುಟಿ ಹಣ ರೂಪಾಯಿ 5ಲಕ್ಷಕ್ಕೆ ಹೆಚ್ಚಿಸುವುದು 180ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಜಿ.ಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಇತ್ಯಾಧಿ ಬೇಡಿಕೆಗಳಿದ್ದು ತಕ್ಷಣ ಕೇಂದ್ರ ಸರ್ಕಾರ ಸ್ವಂದಿಸಬೇಕೆಂದರು.

ಈ ಧರಣಿಯಲ್ಲಿ ಕಾಯಾಧ್ಯಕ್ಷರಾದ ಉಮೇಶ್, ಸಚಿನ್ ಹೆಚ್.ವಿ, ಲಕ್ಷಿನಾರಾಯಣ, ಮೇಘರಾಜ್,  ರ‍್ಯಾವೆ ಈಶ್ವರ, ಸೌಜನ್ಯ, ವಿನುತಾ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
 

Leave a Reply

Your email address will not be published. Required fields are marked *