Headlines

ಹೊಸನಗರ – ಎಂ ಗುಡ್ಡೆಕೊಪ್ಪದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ|theft

ಹೊಸನಗರ – ಎಂ ಗುಡ್ಡೆಕೊಪ್ಪದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ

ಹೊಸನಗರ: ಹೊಸನಗರ ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮದ ಮುರುಳಿದರಭಟ್‌ರವರ ತೋಟದ ಮನೆ ರಾತ್ರಿ ಮುಂಭಾಗದ ಬಾಗಿಲಿನ ಬೀಗ ಮುರಿದು ಗೋಡ್ರೇಜ್ ಬಾಗಿಲು ಮುರಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮಂಗಳವಾರ ರಾತ್ರಿ ಮುರುಳಿಧರ್ ಭಟ್‌ರವರು ಹೊಸನಗರದ ಮನೆಗೆ ರಾತ್ರಿ 7ಗಂಟೆಯ ನಂತರ ಬಂದಿದ್ದಾರೆ ಬರುವ ಸಂದರ್ಭದಲ್ಲಿ ಮನೆಯ ಮುಂಬಾಗಿನ ಬಾಗಿಲಿಗೆ ಬೀಗ ಹಾಗೂ ಗೋಡ್ರೇಜ್ ಬೀಗ ಹಾಕಿಕೊಂಡು ಬಂದಿದ್ದು ಅವರ ಕೆಲಸದವರು ಬುಧವಾರ ಬೆಳಿಗ್ಗೆ ಕೆಲಸಕ್ಕೆ ಬಂದ ಸಂದರ್ಭದಲ್ಲಿ ಬೀಗ ಮುರಿದಿರುವ ಗೊತ್ತಾಗಿದ್ದು ಮನೆಯ ಮಾಲೀಕ ಮುರುಳಿಧರ್ ಭಟ್‌ರವರು ಹೊಸನಗರ ಠಾಣೆಗೆ ಬೀಗ ಮುರಿದಿರುವ ಬಗ್ಗೆ ದೂರು ನೀಡಿದ್ದಾರೆ.

ಮನೆಯ ಬೀಗ ಮುರಿದಿರುವ ಬಗ್ಗೆ ದೂರು ಬರುತ್ತಿದ್ದಂತೆ ಹೊಸನಗರದ ಸರ್ಕಲ್ ಇನ್ಸ್ಪೇಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ಎ.ಎಸ್.ಐ ಶಿವಪುತ್ರರವರು  ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ ತಕ್ಷಣ ಬೆರಳಚ್ಚು ತಜ್ಞರನ್ನು ಹಾಗೂ ಶ್ವಾನದಳದವರನ್ನು ಕರೆಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *