Headlines

ರಿಪ್ಪನ್ ಪೇಟೆಯ ಮಹಿಳೆಯೊಬ್ಬರ ಮೊಬೈಲ್ ಗೆ ಅಶ್ಲೀಲ ಚಿತ್ರ ರವಾನೆ : ಅಪರಿಚಿತ ವ್ಯಕ್ತಿಗಳ ಪತ್ತೆಗೆ ಭರ್ಜರಿ ಬಲೆ ಬೀಸಿರುವ ಖಾಕಿ ಟೀಮ್

ರಿಪ್ಪನ್‌ಪೇಟೆಯ ಮಹಿಳೆಯೋರ್ವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಅಪರಿಚಿತರ ವಿರುದ್ಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. 

ಗವಟೂರು ಗ್ರಾಮದ ನಿವಾಸಿಯಾಗಿರುವ ಮಹಿಳೆಯೊಬ್ಬರ ಮೊಬೈಲ್ ಗೆ ಮೇ.10 ರಂದು ಅಶ್ಲೀಲ ವಿಡಿಯೋಗಳನ್ನ ಎರಡು ಅಪರಿಚಿತ ನಂಬರ್ ನಿಂದ ರವಾನಿಸಿ ಮೇಲಿಂದ ಮೇಲೆ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಅರ್ಜಿಯನ್ನೂ ಮೇ 10 ರಂದು ಮಹಿಳೆ ನೀಡಿದ್ದರು. 

ಇದನ್ನು ತನಿಖೆ ನಡೆಸಿದ ಪೊಲೀಸರು ಎರಡು ಅಪರಿಚಿತ ಮೊಬೈಲ್ ನಂಬರ್ ಗಳ ಮಾಲೀಕರ ವಿಳಾಸ ಪತ್ತೆ ಹಚ್ಚಿದ್ದಾರೆ. ಈ ಎರಡು ಅಪರಿಚಿತ ನಂಬರ್ ಗಳು ಉತ್ತರ ಕನ್ನಡದ ನಿವಾಸಿಗಳ ಹೆಸರಿನಲ್ಲಿದ್ದು, ಆದರೆ ಎರಡು ನಂಬರನ್ನು ಆ ವಿಳಾಸದಲ್ಲಿರುವ ವ್ಯಕ್ತಿಗಳು ಉಪಯೋಗಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಹೆಚ್ಚಿನ ತನಿಖೆಗೆ ಅನುಮತಿ ಕೋರಿ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 

ರಿಪ್ಪನ್‌ಪೇಟೆ ಪೊಲೀಸ್ ತಂಡ ಈಗಾಗಲೇ ಉತ್ತರ ಕನ್ನಡದಲ್ಲಿ ಮೊಕ್ಕಂ ಹೂಡಿ ಆರೋಪಿಯ ಪತ್ತೆಗೆ ಬಲೆ ಬೀಸಿದೆ.

Leave a Reply

Your email address will not be published. Required fields are marked *