ರಿಪ್ಪನ್ ಪೇಟೆ:- ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ರಾಕೇಶ ಸಿ. ರವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ ರಾಕೇಶ್ ಸಿ ರವರು ಮಂಡಿಸಿದ “ಮೋಟಿವೇಶನಲ್ ಪಾಲಿಸಿಜ್ & ಪ್ರಾಕ್ಟಿಸಿಸ್ ಇನ್ ಎಂಎನ್ ಸಿಸ್ – ಎ ಕೇಸ್ ಸ್ಟಡಿ ಆಫ್ ಸೆಲೆಕ್ಟೆಡ್ ಎಂಎನ್ ಸಿಸ್ ಇನ್ ಕರ್ನಾಟಕ” ಎಂಬ ವಿಷಯದ ಮೇಲಿನ ಮಹಾ ಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.
ರಾಕೇಶ್ ಸಿ ರವರಿಗೆ ಡಾ. ಶೈಲಜಾ ಎಸ್. ಅರಳೆಲಿಮಠ ವಾಣಿಜ್ಯಶಾಸ್ತ್ರ ವಿಭಾಗ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇವರು ಮಾರ್ಗದರ್ಶಕರಾಗಿದ್ದರು.
ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಡಾ ರಾಕೇಶ್ ಸಿ ರವರಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಚಂದ್ರಶೇಖರ್ ಮತ್ತು ಸಹೋದ್ಯೋಗಿಗಳು, ಹಿತೈಷಿಗಳು,ಹಾಗೂ ಕುಟುಂಬಸ್ಥರು ಅಭಿನಂದಿಸಿರುತ್ತಾರೆ.