ಬಿದರಹಳ್ಳಿ ಶಾಲೆಗೆ ಜಿಲ್ಲಾ ಮಟ್ಟದ ಸ್ವಚ್ಚತಾ ಶಾಲಾ ಪ್ರಶಸ್ತಿ :

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಬಾರಿಯ ಶಿವಮೊಗ್ಗ ಜಿಲ್ಲಾ ಮಟ್ಟದ “ಸ್ವಚ್ಚತಾ ವಿದ್ಯಾಲಯ” ಪ್ರಶಸ್ತಿ ಲಭಿಸಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರು ತಮ್ಮ ಕಛೇರಿಯಲ್ಲಿ ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದೇವೆಂದ್ರಪ್ಪರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಬಿದರಹಳ್ಳಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಪದ್ಮರಾಜ್, ಶಾಲೆಯ ಶಿಕ್ಷಕರಾದ ಮಧುಕುಮಾರ್,ದಿನೇಶ್ ರವರು ಉಪಸ್ಥಿತರಿದ್ದರು. ಬಿದರಹಳ್ಳಿ ಶಾಲೆಯ ಹಿನ್ನೋಟ :…

Read More

ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಶಿವಮೊಗ್ಗದಲ್ಲಿ 18 ಕಡೆ ದಾಳಿ ನಡೆಸಿದ NIA

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡ ಮತ್ತೆ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಎನ್​ಐಎ ತಂಡ ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳನ್ನೊಳಗೊಂಡ ತಂಡ ಇಂದು ಬೆಳಗ್ಗೆ ಐದು ಗಂಟೆಯಿಂದ ತನಿಖೆ ಆರಂಭಿಸಿದ್ದು, ಜಿಲ್ಲೆಯ 18 ಕಡೆಗಳಲ್ಲಿ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ. ಮುಂಜಾನೆಯಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ…

Read More

ಜುಲೈ 4 ರ ಸೋಮವಾರ ಕಾಂಗ್ರೆಸ್ ಪಕ್ಷದ ವತಿಯಿಂದ ರಿಪ್ಪನ್‌ಪೇಟೆಯಲ್ಲಿ ಪಾದಯಾತ್ರೆ ಮತ್ತು ಬೃಹತ್ ಪ್ರತಿಭಟನೆ :

ರಿಪ್ಪನ್ ಪೇಟೆ :  ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರವರ ನೇತೃತ್ವದಲ್ಲಿ ಜುಲೈ 4 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಗವಟೂರು ಗ್ರಾಮದಲ್ಲಿ ಸಮುದಾಯ ಆಸ್ಪತ್ರೆಗೆ ಕಾಯ್ದಿರಿಸಿರುವ ಸ್ಥಳದಿಂದ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ ಹೇಳಿದರು. ಪಟ್ಟಣದಲ್ಲಿ ಇಂದು ಪೂರ್ವಭಾವಿ…

Read More

ಪಂಪ್ ಹೌಸ್ ನಲ್ಲಿ ಪ್ರತ್ಯಕ್ಷವಾದ 13 ಅಡಿ ಉದ್ದದ ಕಿಂಗ್ ಕೋಬ್ರಾ :

ಸುಮಾರು 13 ಅಡಿ ಉದ್ದದ ಅಂದಾಜು 12 ವರ್ಷದ ಕಿಂಗ್ ಕೋಬ್ರಾ ಹಾವು ಪಂಪ್ ಹೌಸ್ ನಲ್ಲಿ ಕಾಣಿಸಿಕೊಂಡಿದ್ದು ಕೆಲಕಾಲ ಆತಂಕ ಉಂಟು ಮಾಡಿತ್ತು. ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಕಿಮ್ಮನೆ ಗಾಲ್ಫ್ ಕ್ಲಬ್ ನಲ್ಲಿ 13 ಅಡಿ‌ ಕಿಂಗ್ ಕೋಬ್ರಾವೊಂದು ಕಾಣಿಸಿಕೊಂಡಿದೆ. ಗಾಲ್ಫ್ ಕ್ಲಬ್ ನ ಪಂಪ್ ಹೌಸ್ ನಲ್ಲಿ ಈ ಕಿಂಗ್ ಕೋಬ್ರಾ ಕಾಣಿಸಿಕೊಂಡಿತ್ತು.ತಕ್ಷಣವೇ ಸ್ನೇಕ್ ಕಿರಣ್ ರವರಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳ ಅನುಮತಿ ಮೇರೆಗೆ ಸ್ನೇಕ್ ಕಿರಣ್ ಸೆರೆ ಹಿಡಿದು ಶೆಟ್ಟಿಹಳ್ಳಿ…

Read More

ಮನುಕುಲದ ವಿರೋಧಿ ಮತಾಂಧರನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು : ಹರತಾಳು ಹಾಲಪ್ಪ

ಸಾಗರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಸಾಗರ ನಗರ ಬಿಜೆಪಿಯಿಂದ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಇಂತಹ ಅಮಾನವೀಯ ಘಟನೆ ಮಾನವ ಕುಲ ಒಪ್ಪುವಂತಹದಲ್ಲ,ಎಲ್ಲೇ ಆಗಲಿ ಇಂತಹ ವಾತವರಣ ನಿರ್ಮಾಣವಾದಲ್ಲಿ ಜಾತಿ,ಮತ,ಪಕ್ಷ ಭೇದ ಮರೆತು ಅಂತಹ ಮತಾಂಧರನ್ನು ಹೆಕ್ಕಿ ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು.ಸಮಾಜದಲ್ಲಿ  ಇಂತಹ ಮನುಕುಲದ ವಿರೋಧಿಗಳನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡುವುದರ ಮೂಲಕ ಅವರ ನೆಲೆಯನ್ನು ಧ್ವಂಸಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹೇಡಿಗಳ…

Read More

ಸಾಗರ ಪೋಲಿಸರ ಭರ್ಜರಿ ಕಾರ್ಯಾಚರಣೆ : ಮೂವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಸಾಗರ ನಗರ ಪೊಲೀಸ್‌ ಠಾಣೆಯ ಪೊಲೀಸರು ಮೂವರು ಅಂತರ್‌ ಜಿಲ್ಲಾ ಬೈಕ್ ಕಳ್ಳತನದ ಆರೋಪಿತರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ,ಭದ್ರಾವತಿ,ಹರಿಹರ ದಾವಣಗೆರೆ ಮತ್ತು ಹಾಸನ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ನಡೆದಿದ್ದ ಒಟ್ಟು 6  ಪ್ರಕರಣಗಳನ್ನು ಭೇದಿಸಿ 8ಲಕ್ಷ 20ಸಾವಿ ರೂಗಳ ಮೌಲ್ಯದ 6ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಎ.ಎಸ್.ಪಿ ರೋಹನ್ ಜಗದೀಶ್ ಮತ್ತು ಇನ್ಸ್ ಪೆಕ್ಟರ್ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ತಿರುಮಲೇಶ್,ಸಾಗರ್ಕರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರತ್ನಾಕರ್,ಸಂತೋಷ್ ನಾಯ್ಕ್…

Read More

ಪ್ರಿಯತಮೆ ಕೈಕೊಟ್ಟಳೆಂದು ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ :

ಪ್ರೀತಿಸಿದ ಹುಡುಗಿ ಮೋಸ ಮಾಡಿದಳೆಂದು ನೊಂದ ಯುವಕ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ದಿಲೀಪ್ ಎಂಬಾತ ಮೃತ ಯುವಕನಾಗಿದ್ದಾನೆ. ಕೆಲವು ವರ್ಷಗಳಿಂದ ದಿಲೀಪ್ ಮತ್ತು ಕುಟುಂಬಸ್ಥರು ಬೆಂಗಳೂರಿನಲ್ಲಿ ವಾಸವಿದ್ದುಕೊಂಡು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಯುವಕನಿಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದ ಯುವತಿಯೋರ್ವಳ ಪರಿಚಯವಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಮನೆಯವರ…

Read More

ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿನಿ ಕೆ ಎಂ ಮಾನಸ ರವರಿಗೆ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮಾನಸಳಿಗೆ ಭಾಷಣ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರೆತಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹೊಸನಗರದಲ್ಲಿ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರುದ್ಧ ಜಾಗೃತಿ ಮಾಸಾಚರಣೆ ಅಂಗವಾಗಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಹೊಸನಗರ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ  ರಿಪ್ಪನ್ ಪೇಟೆಯ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮಾನಸ.ಕೆ.ಎಂ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. …

Read More

ಯುವ ಕಾಂಗ್ರೆಸ್ ವತಿಯಿಂದ ರಾಜಭವನ ಮುತ್ತಿಗೆ ಯತ್ನ : ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ -ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ಬಂಧನ

ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ರಾಜಭವನ್ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊಸನಗರ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಹಾಗೂ ಜಿಲ್ಲಾ ಯುವ  ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ರವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು.  ಬೆಂಗಳೂರು ಕೆಪಿಸಿಸಿ ಕಛೇರಿಯಿಂದ ರಾಜಭವನಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಲಪಾಡ್ ರವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ರಾಜಭವನ ಮುತ್ತಿಗೆ ಹಾಕುವ ಸಂದರ್ಭದಲ್ಲಿ  ಯುವ ಕಾಂಗ್ರೆಸ್ ನ ಹಲವಾರು ನಾಯಕರನ್ನು…

Read More

ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಯುವತಿಯ ಖಾಸಗಿ ಫೋಟೋ ವೈರಲ್ ಮಾಡಿದ ಪಾಗಲ್ ಪ್ರೇಮಿ

ಯುವತಿ ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಆಕೆಯೊಂದಿಗೆ ಇದ್ದ ಖಾಸಗಿ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಪ್ರಕರಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಮೊಗ್ಗ ನ್ಯೂಮಂಡ್ಲಿಯ ಯುವತಿಯೊಬ್ಬಳು ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು ಅಲ್ಲೇ ಕೆಲಸ ಮಾಡಿಕೊಂಡಿದ್ದ ಭರತ್ ಎಂಬ ಯುವಕ ಆಕೆಯೊಂದಿಗೆ ಸಲುಗೆಯಿಂದ ಇದ್ದನು ಎನ್ನಲಾಗುತ್ತಿದೆ. ಸಲುಗೆಯಿಂದ ಇದ್ದ ವೇಳೆ ಯುವತಿಯೊಂದಿಗೆ ತೆಗೆದ ಖಾಸಗಿ ಫೊಟೊಗಳನ್ನ ತನ್ನ‌ ಮೊಬೈಲ್ ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದನು.ಕೆಲ ದಿನಗಳ ನಂತರ ಯುವಕ ಭರತ್‌ ಯುವತಿಗೆ ತನ್ನ ಪ್ರೀತಿಯನ್ನು ಯುವತಿಯ…

Read More