ಭೀಕರ ಅಪಘಾತ : ಚಾಲಕನ ಕಾಲು ಮುರಿತ
ಶಿವಮೊಗ್ಗ : ಬೇಡರ ಹೊಸಳ್ಳಿಯ ಕೆರೆಯ ಬಳಿ ಓಮ್ನಿ ಮತ್ತು ಐ 20 ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು, ಅಪಘಾತದಲ್ಲಿ ಓಮ್ನಿ ಚಾಲಕನ ಕಾಲು ಮುರಿದಿದೆ. ಜೊತೆಯಲ್ಲಿದ್ದ ಮಹಿಳೆಗೂ ಗಾಯಗಳಾಗಿವೆ. ಬೇಡರ ಹೊಸಳ್ಳಿ ಕೆರೆಯ ಏರಿಯ ಮೇಲೆ ಶಿವಮೊಗ್ಗ ಕಡೆಯಿಂದ ಹೊನ್ನಾಳಿ ಕಡೆಗೆ ಹೋಗುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಹೊನ್ನಾಳಿ ಕಡೆಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಐ20 ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ಓಮ್ನಿ ಕಾರು ನುಜ್ಜುಗುಜ್ಜಾಗಿದೆ. ಓಮ್ನಿ ಕಾರಿನ ಚಾಲಕ ಮತ್ತು ಮಹಿಳೆಗೆ ತೀವ್ರವಾದ ರಕ್ತಗಾಯಗಳಾಗಿದೆ….