ರಾಜಾಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಾಗರದ ಸಿವಿಲ್ ಇಂಜಿನಿಯರ್ ಶವ ಪತ್ತೆ :
ರಾಜಾಕಾಲುವೆಯಲ್ಲಿ ಕೊಚ್ಚಿಹೋದ ಸಾಗರ ಸಮೀಪದ ಅದರಂತೆ ಗ್ರಾಮದ ಯುವಕ ಮಿಥಿನ್(26) ಶವ ಪತ್ತೆಯಾಗಿದೆ. ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಯುವಕನ ಶವ ರಾಜಾಕಾಲುವೆಗೆ ಬಿದ್ದ ಸ್ಥಳದಿಂದ 1.5 ಕಿಮೀ ದೂರದಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸ್ವಗ್ರಾಮವಾದ ಸಾಗರದ ಅದರಂತೆ ಗ್ರಾಮಕ್ಕೆ ಕರೆತರಲಾಗುತ್ತಿದೆ. ರಾಜಾಕಾಲುವೆಯಲ್ಲಿ ಸಾಗರದ ಯುವಕ ಮಿಥಿನ್ ಕೊಚ್ಚಿಹೋದ ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಪ್ರತ್ಯಕ್ಷದರ್ಶಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದು…