ಕೊಲ್ಲೂರು ಘಾಟಿಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಬಿದ್ದ ಘಟನೆ ವರದಿಯಾಗಿದೆ.
ಮಾರುತಿ (KA 01 MS 1399) ಕಾರೊಂದು ನಿನ್ನೆ ಘಾಟಿಯಲ್ಲಿ ಸುಮಾರು 200 ಅಡಿ ಆಳಕ್ಕೆ ಬಿದ್ದಿದೆ.ಕಾರಿನಲ್ಲಿ ಡ್ರೈವರ್ ಒಬ್ಬನೇ ಪ್ರಯಾಣಿಸುತಿದ್ದ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತಗಳು ನಡೆದಿಲ್ಲ.ಸೀಟ್ ಬೆಲ್ಟ್ ಧರಿಸಿದ್ದರಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದ್ದು ಕಾರು ಸಂಪೂರ್ಣ ನಜುಗುಜ್ಜಾಗಿದೆ.
ಈ ಘಾಟ್ ಪ್ರದೇಶದಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ಪಾಚಿ ಕಟ್ಟುತ್ತಿದ್ದು ಜಾರುತ್ತಿದೆ. ಇದರಿಂದಾಗಿ ವಾಹನ ಸವಾರರು ಜಾಗೃತೆಯಿಂದ ಈ ರಸ್ತೆಯಲ್ಲಿ ಚಾಲಕರು ವಾಹನ ಚಲಾಯಿಸಬೇಕಾಗಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇