ರಿಪ್ಪನ್ ಪೇಟೆ : ಏಪ್ರಿಲ್ 22ರಿಂದ ಆರಂಭವಾಗಿ ಮೇ 18 ರವರೆಗೆ ನಡೆದ ಪಿಯುಸಿ ಪರೀಕ್ಷೆಯ ಫಲಿತಾಂಶ ನಾಳೆ ಬೆಳಗ್ಗೆ 11 ಗಂಟೆಗೆ ಪ್ರಕಟಿಸಲಾಗುವುದು ಎಂದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ಟ್ವೀಟ್ ಮಾಡುವ ಮೂಲಕ ಪ್ರಕಟಿಸಿದ್ದಾರೆ.
ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ 2021- 22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಏಪ್ರಿಲ್ 22ಕ್ಕೆ ಆರಂಭವಾಗಿ ಮೇ18ಕ್ಕೆ ಮುಕ್ತಾಯವಾಗಿದ್ದು ರಾಜ್ಯದ ವಿವಿಧೆಡೆಯಲ್ಲಿ ಮೌಲ್ಯಮಾಪನ ಸುಗಮವಾಗಿ ನಡೆದಿದ್ದು. ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಏನೇ ಬರಲಿ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳು ಯಾವುದಕ್ಕೂ ದೃತಿಗೆಡದೇ ಸವಾಲಾಗಿ ಸ್ವೀಕರಿಸಬೇಕು. ಜೀವನದಲ್ಲಿ ಫಲಿತಾಂಶ ಮುಖ್ಯವಲ್ಲ.ವಿದ್ಯಾರ್ಥಿಗಳು ಮಾನಸಿಕವಾಗಿ ಎದೆಗುಂದಿ ದುಡುಕಿನ ನಿರ್ಧಾರ ತೆಗೆದು ಕೊಳ್ಳಬಾರದು ಎಂಬುವುದು ಪೋಸ್ಟ್ ಮ್ಯಾನ್ ಸುದ್ದಿ ಬಳಗದ ಆಶಯ.
“ಸೋಲು-ಗೆಲುವಿನ ಮೆಟ್ಟಿಲಾಗಲಿ–ಗೆಲುವು ಯಶಸ್ವಿನ ಕಿರೀಟವಾಗಿರಲಿ” ಎನ್ನುತ್ತಾ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗ ಶುಭ ಹಾರೈಸುತ್ತದೆ.
ವೆಬ್ ಸೈಟ್ ಅಲ್ಲಿ ಫಲಿತಾಂಶ ಪ್ರಕಟ
ವೆಬ್ ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬೇಕಾದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ kseeb.kar.nic.in, pue.kar.nic.in ಅಥವಾ karresults.nic.in ವೆಬ್ ಸೈಟ್‌ಗಳಿಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದಾಗಿದೆ.