ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದ ಮಹಮ್ಮದ್ ಆದಿಲ್ ರವರಿಗೆ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ವಿಭಾಗದಲ್ಲಿ ಚಿನ್ನದ ಪದಕ ಪ್ರಶಸ್ತಿ ಲಭಿಸಿದ್ದು ಗುರುವಾರ ಶಂಕರಘಟ್ಟದ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಪ್ರಶಸ್ತಿ ನೀಡಲಾಯಿತು.
ಎರಡು ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಪ್ರಶಸ್ತಿ ಸಮಾರಂಭ ಕೋವಿಡ್ 19 ಪ್ರಯುಕ್ತ ಮುಂದೂಡಲಾಗಿದ್ದು 32 ನೇ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಮಹಮ್ಮದ್ ಆದಿಲ್ ರವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು.
ಮಹಮ್ಮದ್ ಆದಿಲ್ ಗರ್ತಿಕೆರೆಯ ಅಬ್ದುಲ್ ಅಜೀಜ್ ಹಾಗೂ ನಾಜಿಯಾ ಬೇಗಂ ದಂಪತಿಗಳ ಪುತ್ರನಾಗಿದ್ದು ಇವರು ಪ್ರಾಥಮಿಕ ಮತ್ತು ಪ್ರೌಡ ಶಾಲಾ ವ್ಯಾಸಂಗವನ್ನು ಗರ್ತಿಕೆರೆ ಮತ್ತು ಹುಂಚಾದಲ್ಲಿ ಮುಗಿಸಿದ್ದು,ಪಿಯುಸಿ ಶಿಕ್ಷಣವನ್ನು ರಿಪ್ಪನ್‌ಪೇಟೆ ಮೇರಿಮಾತ ಕಾಲೇಜಿನಲ್ಲಿ ಪಡೆದಿದ್ದು ಪದವಿ ಶಿಕ್ಷಣವನ್ನು ಕೋಣಂದೂರಿನ ಶರಾವತಿ ಕಾಲೇಜಿನಲ್ಲಿ ಪಡೆದಿದ್ದಾರೆ.
ಪ್ರಸ್ತುತ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಎಂಕಾಂ ಪದವಿ ಪಡೆಯುತ್ತಿದ್ದಾರೆ.
ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿದ ಮಹಮ್ಮದ್ ಆದಿಲ್ ಯುಪಿಎಸ್ ಸಿ ಪರೀಕ್ಷೆಗೆ ತಯಾರಾಗುತ್ತಿದ್ದು ಆ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತಿದ್ದೇನೆ ಎಂದರು.
ಕುವೆಂಪು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮಹಮ್ಮದ್ ಆದಿಲ್ ರವರಿಗೆ ಜಿಲ್ಲಾ ವಕ್ಪ್ ಬೋರ್ಡ್ ಮಾಜಿ ಉಪಾಧ್ಯಕ್ಷರಾದ ಅಮೀರ್ ಹಂಜಾ ಮತ್ತು ಮೇರಿ ಮಾತಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಸೆಬಾಸ್ಟಿಯನ್ ಮ್ಯಾಥ್ಯೂಸ್ ಹಾಗೂ ಪೋಸ್ಟ್ ಮ್ಯಾನ್ ಸುದ್ದಿ ಬಳಗದಿಂದ ಅಭಿನಂದಿಸಿದ್ದಾರೆ.