Headlines

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಅಮೀರ್ ಹಂಜಾ ನೇಮಕ :

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ರಿಪ್ಪನ್‌ಪೇಟೆಯ ಅಮೀರ್ ಹಂಜಾ ರವರನ್ನು ನೇಮಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಆದೇಶಿಸಿದ್ದಾರೆ.


ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರು ಅಮೀರ್ ಹಂಜಾ ರವರಿಗೆ ಆದೇಶ ಪ್ರತಿಯನ್ನು ವಿತರಿಸಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ರವರ ಒಡನಾಡಿಯಾಗಿದ್ದ ರಿಪ್ಪನ್‌ಪೇಟೆಯ ಅಮೀರ್ ಹಂಜಾ ಪ್ರಸ್ತುತ ಮಧು ಬಂಗಾರಪ್ಪ ರ ಬೆಂಬಲಿಗ ಮುಖಂಡರಲ್ಲಿ ಮುಂಚೂಣಿಯಲ್ಲಿದ್ದಾರೆ.ಈ ಹಿಂದೆ ಜಿಲ್ಲಾ ವಕ್ಪ್ ಬೋರ್ಡ್ ಉಪಾಧ್ಯಕ್ಷರಾಗಿದ್ದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಹಲವಾರು ಸ್ಥಾನಮಾನಗಳನ್ನು ಪಡೆದು ಸಂಘಟನೆಯಲ್ಲಿ‌ ಮುಂಚೂಣಿಯಲ್ಲಿದ್ದಾರೆ.

ನಂತರ ಮಾತನಾಡಿದ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸುವಲ್ಲಿ ಸಹಕರಿಸಿದ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷರಾದ ಮಧು ಬಂಗಾರಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್,ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಡಾ.ಆರ್ ಎಂ ಮಂಜುನಾಥ್ ಗೌಡ,ಜಿಪಂ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಅಮೀರ್ ಹಂಜಾ ರವರಿಗೆ ಜಿಪಂ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ , ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್,ಸಹಕಾರಿ ಮುಖಂಡರಾದ ಎಂ ಎಂ ಪರಮೇಶ್, ಮುಖಂಡರಾದ ಮಳವಳ್ಳಿ ಮಂಜುನಾಥ್ ಸೇರಿದಂತೆ ಅನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *