POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಯುವತಿಯ ಖಾಸಗಿ ಫೋಟೋ ವೈರಲ್ ಮಾಡಿದ ಪಾಗಲ್ ಪ್ರೇಮಿ

ಯುವತಿ ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಆಕೆಯೊಂದಿಗೆ ಇದ್ದ ಖಾಸಗಿ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಪ್ರಕರಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ನ್ಯೂಮಂಡ್ಲಿಯ ಯುವತಿಯೊಬ್ಬಳು ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು ಅಲ್ಲೇ ಕೆಲಸ ಮಾಡಿಕೊಂಡಿದ್ದ ಭರತ್ ಎಂಬ ಯುವಕ ಆಕೆಯೊಂದಿಗೆ ಸಲುಗೆಯಿಂದ ಇದ್ದನು ಎನ್ನಲಾಗುತ್ತಿದೆ.

ಸಲುಗೆಯಿಂದ ಇದ್ದ ವೇಳೆ ಯುವತಿಯೊಂದಿಗೆ ತೆಗೆದ ಖಾಸಗಿ ಫೊಟೊಗಳನ್ನ ತನ್ನ‌ ಮೊಬೈಲ್ ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದನು.ಕೆಲ ದಿನಗಳ ನಂತರ ಯುವಕ ಭರತ್‌ ಯುವತಿಗೆ ತನ್ನ ಪ್ರೀತಿಯನ್ನು ಯುವತಿಯ ಮುಂದೆ ಪ್ರಸ್ತಾಪಿಸಿದ್ದಾನೆ.

ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ.ಇದರಿಂದ ಆಕ್ರೋಶಿತನಾದ ಭಗ್ನ ಪ್ರೇಮಿ ಆಕೆಯ ಖಾಸಗಿ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯ ಮೂಲಕ ಹರಿಬಿಟ್ಟಿದ್ದಾನೆ

ಈ ಬಗ್ಗೆ ಯುವತಿಯ ತಂದೆ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.