POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಮನುಕುಲದ ವಿರೋಧಿ ಮತಾಂಧರನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು : ಹರತಾಳು ಹಾಲಪ್ಪ

ಸಾಗರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯ ಕೊಲೆ ಪ್ರಕರಣ ಖಂಡಿಸಿ ಸಾಗರ ನಗರ ಬಿಜೆಪಿಯಿಂದ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಇಂತಹ ಅಮಾನವೀಯ ಘಟನೆ ಮಾನವ ಕುಲ ಒಪ್ಪುವಂತಹದಲ್ಲ,ಎಲ್ಲೇ ಆಗಲಿ ಇಂತಹ ವಾತವರಣ ನಿರ್ಮಾಣವಾದಲ್ಲಿ ಜಾತಿ,ಮತ,ಪಕ್ಷ ಭೇದ ಮರೆತು ಅಂತಹ ಮತಾಂಧರನ್ನು ಹೆಕ್ಕಿ ಹೆಕ್ಕಿ ತೆಗೆದು ಶಿಕ್ಷೆ ನೀಡಬೇಕು.ಸಮಾಜದಲ್ಲಿ  ಇಂತಹ ಮನುಕುಲದ ವಿರೋಧಿಗಳನ್ನು ಹೆಕ್ಕಿ ತೆಗೆದು ಶಿಕ್ಷೆ ನೀಡುವುದರ ಮೂಲಕ ಅವರ ನೆಲೆಯನ್ನು ಧ್ವಂಸಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹೇಡಿಗಳ ತರಹ ಅಂಗಡಿಗೆ ನುಗ್ಗಿ ಉದಯಪುರದ ಟೈಲರ್ ಕನ್ನಯ್ಯ ರವರನ್ನು ಕೊಲೆ ಮಾಡಿದ್ದಾರೆ.ಇಂತಹವರಿಗೆ ಗುಂಡಿನ ಮೂಲಕವೇ ಉತ್ತರ ನೀಡಬೇಕು ಎಂದರು.


ಸಾಗರ ನಗರ ಬಿಜೆಪಿ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಮಾತನಾಡಿ  ಕೆಲದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಜಿಹಾದಿ ಮತಾಂದತೆ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ವ್ಯಾಪಕವಾಗಿ ದಾಳಿ ಮಾಡಲಾಗುತ್ತಿದೆ. ಟಿ ವಿ ಚರ್ಚೆಯೊಂದರ ವೇಳೆ ಹಿಂದೂ ದೇವರ ನಿಂದನೆಗೆ ಪ್ರತಿಯಾಗಿ ಹೇಳಿಕೆ ನೀಡಿದ ಬಿ.ಜೆ.ಪಿ ನಾಯಕಿ ನೂಪರ್ ಶರ್ಮ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಮಾತ್ರಕ್ಕೆ ಮಹಮದ್ ರೀಯಾಜ್, ಮಹಮದ್ ಬೇರಿ ಎಂಬ ಇಸ್ಲಾಮಿಕ್ ಜಿಹಾದಿಗಳು ಸ್ಥಳೀಯ ಟೈಲರ್ 40 ವರ್ಷದ ಕನ್ನಯ್ಯ ಲಾಲ್ ಎಂಬುವವರನ್ನು ಹಾಡು ಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಅಮಾನುಷ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಇದರಿಂದ ಇಡೀ ಭಾರತೀಯ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಇದು ಅತ್ಯಂತ ಹೇಯ ಹಾಗೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಭಾಷಾಸಾಬ್ ಮಾತನಾಡಿ ಯಾವುದೇ ಧರ್ಮವೂ ಯಾರನ್ನು ಕೊಲ್ಲಲು ಹೇಳಿಕೊಟ್ಟಿಲ್ಲ,ಇಂತಹ ಮತಾಂಧರಿಗೆ “ಕಣ್ಣಿಗೆ ಕಣ್ಣು ಮುಯ್ಯಿಗೆ ಮುಯ್ಯಿ”
ಎಂಬ ಕಾನೂನು ತಂದು ಕೂಡಲೇ ಅವರನ್ನು ಗುಂಡಿಕ್ಕಿ ಕೊಲ್ಲಬೇಕು.ಜೀವಹಾನಿ ಮಾಡಲು ಯಾವುದೇ ಧರ್ಮಗ್ರಂಥ ಹೇಳಿ‌ಕೊಟ್ಟಿಲ್ಲ ಎಲ್ಲಾ ಧರ್ಮಗಳು ಸರ್ವೇಜನ ಸುಖಿನೋ ಭವತುಃ ಎಂಬುವದನ್ನೆ ಹೇಳಿಕೊಟ್ಟಿರುವುದು.ಇಂತಹ ಮತಾಂಧ ಕಿಡಿಗೇಡಿಗೇಡಿಗಳಿಂದ ಎಲ್ಲಾರಿಗೂ‌ ಕೆಟ್ಟ ಹೆಸರು ಕೂಡಲೇ ಸರ್ಕಾರ ನೂತನ ಕಾನೂನು ಜಾರಿ ಮಾಡುವ ಮೂಲಕ ಅವರನ್ನು ತತ್ತಕ್ಷಣ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಮಧುರ ಶಿವಾನಂದ್ ,ವಿ.ಮಹೇಶ್,ಅರವಿಂದ್ ರಾಯ್ಕರ್.ತುಕಾರಾಂ.ಅರುಣ್ ಕುಗ್ವೆ.ವಿನೋದ್ ರಾಜ್.ಕೆ.ಆರ್.ಎಸ್.ಎಂ, ಶಂಕರ್ ಆಳ್ವೆಕೊಡಿ.ಚೇತನ್ ರಾಜ್ ಕಣ್ಣೂರು.ಸತೀಶ್ ಮೋಗವೀರ.ತುಕಾರಾಂ. ಶ್ರೀನಿವಾಸ್ ಮೇಸ್ತ್ರಿ.ಮೈತ್ರಿ ಪಾಟೀಲ್.ಸಂತೋಷ್ ಶೆಟ್.ರಾಜೇಂದ್ರ ಪೈ.ಪುರುಷೋತ್ತಮ್.ಸವಿತಾ ವಾಸು. ಪರಶುರಾಮ್.ರಾಧಿಕ ಪೈ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.