Headlines

ಸಾಗರ ಪೋಲಿಸರ ಭರ್ಜರಿ ಕಾರ್ಯಾಚರಣೆ : ಮೂವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಸಾಗರ ನಗರ ಪೊಲೀಸ್‌ ಠಾಣೆಯ ಪೊಲೀಸರು ಮೂವರು ಅಂತರ್‌ ಜಿಲ್ಲಾ ಬೈಕ್ ಕಳ್ಳತನದ ಆರೋಪಿತರನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ,ಭದ್ರಾವತಿ,ಹರಿಹರ ದಾವಣಗೆರೆ ಮತ್ತು ಹಾಸನ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ನಡೆದಿದ್ದ ಒಟ್ಟು 6  ಪ್ರಕರಣಗಳನ್ನು ಭೇದಿಸಿ 8ಲಕ್ಷ 20ಸಾವಿ ರೂಗಳ ಮೌಲ್ಯದ 6ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಗರ ಎ.ಎಸ್.ಪಿ ರೋಹನ್ ಜಗದೀಶ್ ಮತ್ತು ಇನ್ಸ್ ಪೆಕ್ಟರ್ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ತಿರುಮಲೇಶ್,ಸಾಗರ್ಕರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರತ್ನಾಕರ್,ಸಂತೋಷ್ ನಾಯ್ಕ್ , ಶ್ರೀಧರ್,ಯೋಗೀಶ್, ಲೋಕೇಶ್,ಮೈಲಾರಿ,ಭರತ್ ಕುಮಾರ್,ವಿಶ್ವನಾಥ್, ಮಂಜುನಾಥ್ ಅವರ ತಂಡ ಆರೋಪಿತರಾದ ಶಿವಮೊಗ್ಗದ ಸಮೀರ್,ಮಹಮ್ಮದ್ ಖಾದ್ರಿ,ಜುನೈದ್ ಖಾನ್ ಅವರನ್ನು ಬಂಧಿಸುವಲ್ಲಿ   ಶ್ರಮಿಸಿದ್ದಾರೆ.

ಬೈಕ್ ಕಳ್ಳರನ್ನು ಬಂಧಿಸಿದ ತಂಡಕ್ಕೆ ಜಿಲ್ಲಾ ಪೋಲಿಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *