ಸುಮಾರು 13 ಅಡಿ ಉದ್ದದ ಅಂದಾಜು 12 ವರ್ಷದ ಕಿಂಗ್ ಕೋಬ್ರಾ ಹಾವು ಪಂಪ್ ಹೌಸ್ ನಲ್ಲಿ ಕಾಣಿಸಿಕೊಂಡಿದ್ದು ಕೆಲಕಾಲ ಆತಂಕ ಉಂಟು ಮಾಡಿತ್ತು.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಕಿಮ್ಮನೆ ಗಾಲ್ಫ್ ಕ್ಲಬ್ ನಲ್ಲಿ 13 ಅಡಿ ಕಿಂಗ್ ಕೋಬ್ರಾವೊಂದು ಕಾಣಿಸಿಕೊಂಡಿದೆ.
ಗಾಲ್ಫ್ ಕ್ಲಬ್ ನ ಪಂಪ್ ಹೌಸ್ ನಲ್ಲಿ ಈ ಕಿಂಗ್ ಕೋಬ್ರಾ ಕಾಣಿಸಿಕೊಂಡಿತ್ತು.ತಕ್ಷಣವೇ ಸ್ನೇಕ್ ಕಿರಣ್ ರವರಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳ ಅನುಮತಿ ಮೇರೆಗೆ ಸ್ನೇಕ್ ಕಿರಣ್ ಸೆರೆ ಹಿಡಿದು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಿಡಲಾಗಿದೆ.
ಕಿಮ್ಮನೆ ಗಾಲ್ಫ್ ನ ಸುತ್ತಮುತ್ತ ಅರಣ್ಯ ಪ್ರದೇಶವಿರುವುದರಿಂದ ಈ ಕಿಂಗ್ ಕೋಬ್ರಾ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.