ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆಯ ಪಾಠ ಅಗತ್ಯ
ರಿಪ್ಪನ್‌ಪೇಟೆ;-ಬುದ್ದಿವಂತನಲ್ಲ ಎಂದು ಮಕ್ಕಳನ್ನು ತೆಗಳದೆ ಅವರ ಕ್ರೀಯಾಶಕ್ತಿಯನ್ನಾದರಿಸಿ ಪ್ರೋತ್ಸಾಹಿಸಿದಲ್ಲಿ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿರುತ್ತಾರೆ.ವಿದ್ಯಾರ್ಥಿ ವ್ಯಾಸಂಗದಲ್ಲಿ ಹಿಂದೆ ಉಳಿದಿದ್ದಾನೆಂದು ಚಿಂತಿಸದೇ ಅವರಿಗೆ ಹೆಚ್ಚು ಪ್ರೋತ್ಸಾಹಿಸಿದಲ್ಲಿ ಹೆಚ್ಚು ಸಾಧನೆ ಮಾಡುವ ಮೂಲಕ ಮೊದಲ ವ್ಯಕ್ತಿಯಾಗುತ್ತಾನೆ ಎಂದು ಕಬಳೆ ಸಂತ ಫ್ರಾನ್ಸಿಸ್ ಕ್ಸೇಮಿಯರ್ ಧರ್ಮ ಕೇಂದ್ರದ ರೆವೆರಂಟ್ ಫಾದರ್ ರೋಮನ್ ಪಿಂಟೋ ಹೇಳಿದರು.
ರಿಪ್ಪನ್‌ಪೇಟೆಯ ಗುಡ್‌ಶಫರ್ಡ್ ಹಿರಿಯ ಪ್ರಾಥಮಿಕ ಪಾಠಶಾಲೆಯ “ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮನಷ್ಯನ ದುರಾಸೆಯಿಂದಾಗಿ ನಮ್ಮ ಪರಿಸರ ವಿನಾಶದ ಅಂಚಿಗೆ ತಲುಪುವಂತಾಗಿದೆ ಅಭಿವೃಧ್ಧಿಯ ಹೆಸರಿನಲ್ಲಿ ನಮ್ಮ ಪೂರ್ವಜರು ನೆಟ್ಟು ಬೆಳಸಲಾದ ಬೃಹತ್ ಗಾತ್ರದ ಮರಗಳನ್ನು ಕಡಿಯುತ್ತಿದ್ದಾರೆ.ಅದರೆ ಅದರ ಬದಲು ಒಂದು ಗಿಡವನ್ನು ಬೆಳಸುವ ಬಗ್ಗೆ ಚಿಂತಿಸುತ್ತಿಲ್ಲಾ ಇದು ಹೀಗೆ ಮುಂದುವರಿದರೆ ಮುಂದಿನ ಪೀಳಿಗಗೆ ಆಕ್ಸಿಜನ್ ಸಮಸ್ಯೆ ಎದುರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ನಮ್ಮ ಮಕ್ಕಳು ತಮ್ಮ ಶಾಲಾ ಅವರಣದಲ್ಲಿ ತಲಾ ಒಂದೊಂದು ಗಿಡಬೆಳಸಿ ಪರಿಸರದ ರಕ್ಷಣೆ ಮಾಡುವಂತಾಗಬೇಕು ಎಂದರು.
ಗುಡ್‌ಶಫರ್ಡ್ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ರೆವೆರಂಟ್ ಫಾದರ್ ಬಿನೋಯಿ ಮ್ಯಾಥ್ಯೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ವಾರ್ಷೀಕೋತ್ಸವ ಸಮಾರಂಭವನ್ನು ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷಿö್ಮ ಗಂಗಾಧರ್ ಉದ್ಘಾಟಿಸಿದರು.
ಮುಖ್ಯಅತಿಥಿಗಳಾಗಿ ಆರಾಧನ ಸೊಸೈಟಿ ಮದರ್ ಸುಪೀರಿಯರ್ ಸಿಸ್ಟರ್ ಲೀಸಾ ಮರಿಯಾ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಮಹಾಲಕ್ಷಿö್ಮ,ವನಮಾಲ,ಶಿಕ್ಷಣ ಸಂಯೋಜಕ ಕರಿಬಸಪ್ಪ, ದುಗ್ಗಪ್ಪ,ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಮಂಜುನಾಥ, ಸಬಾಸ್ಟಿನ್‌ಮ್ಯಾಥ್ಯೂ,ಮುಖ್ಯ ಶಿಕ್ಷಕಿ ಸಿಸ್ಟರ್ ಜೋಸ್ಫಿನ್,ಎಎಸ್‌ಐ ಹಾಲಪ್ಪ, ಎಸ್.ಡಿ.ಎಂ.ಸಿ.ಆಧ್ಯಕ್ಷ ಹಸನಬ್ಬ, ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಬ್ಲೆಸ್ಸಿನ್, ಜಯಲಕ್ಷಿö್ಮ, ರೇಖಾ,ಷಾಜಿ,ದಯಾನಂದ, ರಾಘವೇಂದ್ರ,ಇನ್ನಿತರರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಿಂದ ಪ್ರಾರ್ಥನೆ. ಸಹಶಿಕ್ಷಕ ರಾಘವೇಂದ್ರ ಸ್ವಾಗತಿಸಿದರು ಮುಖ್ಯ ಶಿಕ್ಷಕಿ ಸಿಸ್ಟರ್ ಜೋಸ್ಫಿನ್ ವಾರ್ಷೀಕ ವರದಿ ವಾಚನ ಮಾಡಿದರು..ಮಂಜುನಾಥ ವಂದಿಸಿದರು.
ನಂತರದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.