ಈ ಭಾರಿ.. ನಾನೂರಕ್ಕೂ ಮೀರಿ – ನರೇಂದ್ರ ಮೋದಿ | ಶಿವಮೊಗ್ಗದಲ್ಲಿ ಪ್ರಧಾನಿ ಭಾಷಣದಲ್ಲಿ ಏನೆಲ್ಲಾ ಹೇಳಿದ್ರು.. ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಶಿವಮೊಗ್ಗ : ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಬೃಹತ್ ಸಮಾವೇಶದಲ್ಲಿ ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಶಿವಮೊಗ್ಗದ ಜನತೆ ನನ್ನ ನಮಸ್ಕಾರಗಳು, ಮಾತೆ ಸಿಗಂದೂರು ಚೌಡಶ್ವೇರಿ ದೇವಿಗೆ ನನ್ನ ಭಕ್ತಿ ಪೂರ್ವ ನಮಸ್ಕಾರ ಎಂದು ಕನ್ನಡದಲ್ಲಿಯೇ ಹೇಳಿದರು.
ನಂತರ ಮಾತನಾಡಿ ಇವತ್ತು ಇಡೀ ಮೈದಾನ ಉತ್ಸಾಹದಿಂದ ಭರ್ತಿಯಾಗಿದೆ. ಇನ್ನೊಂದು ಕಡೆ ಭಷ್ಟ್ರಾಚಾರ, ತುಷ್ಟಿಕರಣದಲ್ಲಿರುವ ಇಂಡಿಯಾ ಒಕ್ಕೂಟದ ನಿದ್ರೆ ಹಾರಿಹೋಗಿದೆ. ಜನಸಂಘದ ಸಂದರ್ಭದಲ್ಲಿ ನಮ್ಮನ್ನು ಯಾರು ಗುರುತಿಸುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಯಡಿಯೂರಪ್ಪ ಇಲ್ಲಿ ತಮ್ಮ ಯವ್ವನದ ಶ್ರಮವನ್ನು ಇಲ್ಲಿ ಪಕ್ಷಕ್ಕಾಗಿ ಶ್ರಮಿಸುವಂತೆ ಮಾಡಿದ್ದರು. ಶಿವಮೊಗ್ಗ ಅವರ ತಪೋಭೂಮಿ. ಇಲ್ಲಿಯ ಎಲ್ಲಾ 28 ಕ್ಷೇತ್ರಗಳು ಬಿಜೆಪಿಗೆ ನೀಡುವಂತೆ ಪ್ರಾರ್ಥನೆ ಮಾಡುವ ಸಲುವಾಗಿ ನಾನಿಲ್ಲಿಗೆ ಬಂದಿದ್ದೇನೆ. ನಾಲ್ಕು ಜೂನ್‌ನಂದು ನಾನೂರು ಸಂಸದರನ್ನು ಹೊಂದು ಮಷಿನ್‌ನಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ.
ಈ ಬಾರಿ ನಾನೂರಕ್ಕೂ ಮೀರಿ…
ನಾನೂರು ಸೀಟು ಯಾಕಾಗಿ ಎಂದರೇ ವಿಕಸಿತ ಭಾರತ, ವಿಕಸಿತ ಕರ್ನಾಟಕ, ಬಡತನ ನಿರ್ಮೂಲನೆಗಾಗಿ, ಭಯೋತ್ಪಾದನೆ ನಿವಾರಣೆಗಾಗಿ , ಭಷ್ಟ್ರಾಚಾರ ನಿಗ್ರಹಿಸಲು , ರೈತರಿಗೆ ಯುವಕರ ಅಭಿವೃದ್ಧಿಗಾಗಿ ಈ ಭಾರೀ ನಾನೂರಕ್ಕೂ ಮೀರಿ ಎಂದು ನರೇಂದ್ರ ಮೋದಿ ಘೋಷಣೆ ಕೂಗಿದರು. ಅವರೊಂದಿಗೆ ನೆರೆದವರು ಈ ಭಾರೀ ನಾನೂರಕ್ಕೂ ಮೀರಿ ಎಂದು ಘೋಷಿಸಿದರು
ಸಮರ್ಥ ಭಾರತ ನಿರ್ಮಾಣ ಬಿಜೆಪಿಯ ಗುರಿ, ಆದರೆ ಕಾಂಗ್ರೆಸ್ ಬಳಿ ವಿಕಾಸದ ಅಜೆಂಡಾ ಇಲ್ಲ. ಹಾಗಾಗಿ ಅದು ಹಲವು ರೀತಿಯ ಆಮೀಷಗಳೊಂದಿಗೆ ಬರುತ್ತಿದೆ. ಅದರಲ್ಲಿ ಮೊದಲನೇದ್ದು ಸುಳ್ಳು ಹೇಳುವುದು, ಪದೇ ಪದೇ ಸುಳ್ಳು ಹೇಳು, ಎಲ್ಲೆಂದರಲ್ಲಿ ಸುಳ್ಳು ಹೇಳು, ಬೆಳಗ್ಗೆಯಿಂದ ಸಂಜೆವರೆಗೂ ಸುಳ್ಳು ಹೇಳು. ಕಾಂಗ್ರೆಸ್‌ನ ಎರಡನೇ ಅಜೆಂಡಾ ಮೊದಲ ಸುಳ್ಳಿಗಾಗಿ ಮತ್ತೊಂದು ಸುಳ್ಳು ಹೇಳುವುದು. ಮೂರನೇ ಅಜೆಂಡಾ ತನ್ನ ಮೇಲಿನ ಆರೋಪವನ್ನು ಇನ್ನೊಬ್ಬರ ಹೆಗಲ ಮೇಲೆ ಹಾಕಿ ಸುಳ್ಳು ಹೇಳುವುದು.
ಪ್ರತಿ ಚುನಾವಣೆಯಲ್ಲಿಯು ಕಾಂಗ್ರೆಸ್ ಇದನ್ನೆ ಮಾಡುತ್ತಾ ಬಂದಿದೆ. ಈಗ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಅದೇ ಕೆಲಸ ಮಾಡುತ್ತಿದೆ. ಕೇಂದ್ರದ ಮೇಲೆ ಆರೋಪ ಮಾಡುವುದು, ಮೋದಿ ವಿರುದ್ಧ ಆರೋಪ ಮಾಡುವುದು ಮಾಡುತ್ತಿದೆ. ಏಕೆಂದರೆ ಮಾನಸಿಕತೆ ಜನರ ಅಭಿವೃದ್ಧಿ ಮಾಡುವುದಲ್ಲ. ಅವರ ಉದ್ದೇಶ ಜನರನ್ನ ಲೂಟಿ ಮಾಡಿ, ತನ್ನ ಜೇಬನ್ನ ಭರ್ತಿ ಮಾಡಿಕೊಳ್ಳುವುದು. ಇದೇ ಕಾರಣಕ್ಕೆ ಕರ್ನಾಟಕಕ್ಕೆ ಅಧಿಕಾರಕ್ಕೆ ಬಂದಾಗೆಲೆಲ್ಲಾ ಅದು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಅವರ ಪಕ್ಷದ ಲೂಟಿ ಎಷ್ಟಾಗಿದೆ ಎಂದರೇ ಸರ್ಕಾರ ನಡೆಸಲು ಹಣವಿಲ್ಲದಂತಾಗಿದೆ.
ಕರ್ನಾಟಕದಲ್ಲಿ ಶ್ಯಾಡೋ ಸಿಎಂ….
ಇಷ್ಟೆ ಅಲ್ಲದೆ ಇಲ್ಲಿ ಸೂಪರ್ ಸಿಎಂ ಇದ್ದಾರೆ, ಫ್ಯೂಚರ್ ಸಿಎಂ ಇದ್ದಾರೆ, ಶ್ಯಾಡೋ ಸಿಎಂ ಇದ್ದಾರೆ ಇಷ್ಟೊಂದು ಸಿಎಂಗಳ ನಡುವೆ ಒಬ್ಬ ದೆಹಲಿ ಕಲೆಕ್ಟರ್ ಕೂಡ ಇದ್ದಾರೆ. ಕಾಂಗ್ರೆಸ್‌ನ ಈ ಕಷ್ಟ ಕರ್ನಾಟಕ ಎದುರಿಸುವಂತಾಗಿದೆ. ಕಾಂಗ್ರೆಸ್ ಕರ್ನಾಟಕಕ್ಕೆ ದೊಡ್ಡ ಆಘಾತವಾಗಿದೆ. ಕಾಂಗ್ರೆಸ್ ವಿರುದ್ಧ ಕರ್ನಾಟಕದಲ್ಲಿ ಜನರ ಆಕ್ರೋಶವನ್ನು ನಾನು ಗಮನಿಸುತ್ತಿದ್ದೇನೆ.ರಾಜ್ಯದ 28 ಸಂಸದ ಸ್ಥಾನದಲ್ಲಿ ಬಿಜೆಪಿ ಸಂಸದರನ್ನ ಆಯ್ಕೆಮಾಡಬೇಕಿದೆ. ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುತ್ತಾರೆ.
ನಿನ್ನೆ ಮುಂಬೈನಲ್ಲಿ ಒಂದು ಘೋಷಣೆ ಮಾಡಲಾಗಿದೆ. ಹಿಂದೂ ಸಮಾಜದ ಶಕ್ತಿಯನ್ನು ನಿವಾರಣೆ ಮಾಡುವ ಘೋಷಣೆ ಮಾಡಿದ್ದಾರೆ. ಅವರದ್ದು ಹಿಂದೂ ಸಮಾಜದ ಶಕ್ತಿಯನ್ನು ನಿವಾರಣೆ ಮಾಡುವ ಘೋಷಣೆಯಾದರೆ, ನಮ್ಮದು ಹಿಂದೂ ಸಮಾಜದ ಶಕ್ತಿಯನ್ನು ಉಪಾಸನೆ ಮಾಡುವ ಘೋಷಣೆಯಿಂದೆ. ನಾನು ಜನರಸೇವೆ ಮಾಡುವ ನಿರ್ಣಯ ಮಾಡಿದಾಗಿನಿಂದಲೂ ಹಿಂದೂ ಸಮಾಜದ ಶಕ್ತಿ ನನಗೆ ಶಕ್ತಿ ತುಂಬುತ್ತಿದೆ. ನಿನ್ನೆ ಶಿವಾಜಿ ಪಾರ್ಕ್‌ನಲ್ಲಿ ಶಕ್ತಿಯ ನಾಶದ ಘೋಷಣೆಯಾಗುತ್ತಿದ್ದರೇ ಬಾಳ ಠಾಕ್ರೆಯವರ ಆತ್ಮಕ್ಕೆ ಎಷ್ಟು ನೋವಾಗಿರಬಹುದು ಎಂದು ಆತಂಕವಾಯ್ತು. ಕ್ಷತ್ರಪತಿ ಶಿವಾಜಿ ಮಹಾರಾಜ್‌ರವರು ತುಳಜಾಭವಾನಿಯ ಪೂಜೆ ಮಾಡಿ ಹಿಂದೂ ಸಾಮ್ರಾಜ್ಯ ನಿರ್ಮಾಣಕ್ಕೆ ಹೊರಟಿದ್ದರು. ಜೈ ಭವಾನಿ ಜೈ ಶಿವಾಜಿ ಎಂದು ಬೆಳೆಯುವ ನಾಗರಿಕರನ್ನ ಹೊಂದಿರುವ ಆ ಸ್ಥಳದಲ್ಲಿ ಶಕ್ತಿಯನ್ನ ನಿವಾರಣೆ ಮಾಡುವ ಘೋಷಣೆ ಮಾಡಿದ್ರು, ಆ ವೇದಿಕೆಯಲ್ಲಿ ಯಾರಾರು ಇದ್ದರೋ, ನನಗೆ ಬಾಳ ಠಾಕ್ರೆ ಆತ್ಮಕ್ಕೆ ಎಷ್ಟು ನೋವಾಗಿರಬಹುದು ಎನಿಸುತ್ತದೆ.
ನಾರಿಶಕ್ತಿಯೇ ಮಹಾಶಕ್ತಿ….
ದೇಶದ ಪ್ರತಿ ಮಹಿಳೆಯಲ್ಲಿಯು ನಾರಿಶಕ್ತಿ. ಮಹಿಳೆಯರ ಶಕ್ತಿಯು ಮೋದಿಯವರ ಸೈಲೆಂಟ್ ವಾಟರ್ ಎಂದು ಕರೆಯುತ್ತಾರೆ. ಆದರೆ ನನಗೆ ನಾರಿಶಕ್ತಿ ಮಹಾಶಕ್ತಿಯಾಗಿದೆ. ಅದು ನನ್ನನ್ನು ಕಾಪಾಡುವ ದೊಡ್ಡಶಕ್ತಿಯಾಗಿದೆ ಎಂದು ಭಾರತ ಮಾತೆಯನ್ನು ಪೂಜೆ ಮಾಡುತ್ತೇವೆ ಎಂದು ಮಂತ್ರವೊಂದನ್ನ ಹೇಳಿದ್ದರು. ಅಲ್ಲದೆ ನಾರಿಶಕ್ತಿಯನ್ನ ಬೆಳೆಸುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಮಂತ್ರಕಣ, ಶಕ್ತಿಕಣ, ತಾಯಿಕಣ, ದೇವಿ ಕಣ ಎಂದು ಕುವೆಂಪು ಹೇಳಿದ್ದರು. ಕರ್ನಾಟಕವನ್ನು ತಾಯಿಯ ರೀತಿಯಲ್ಲಿ ಕವೆಂಪುರವರು ಕಂಡಿದ್ದರು. ಆದರೆ ಕಾಂಗ್ರೆಸ್ ಈ ಶಕ್ತಿಯನ್ನು ನಿವಾರಣೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‌ಗೆ ಭಾರತದ ನಾರಿಶಕ್ತಿಯ ಸಶಸ್ತೀಕರಣ ಇಷ್ಟವಾಗಿಲ್ಲ. ಶಕ್ತಿಯ ವಿರುದ್ಧದ ಹೋರಾಟ ಎಂದರೇ ದೇಶದ ನಾರಿಯರ ವಿರುದ್ಧದ, ಭಾರತ ಮಾತೆಯ ವಿರುದ್ಧದ ಕುತಂತ್ರದ ಹೋರಾಟವಾಗಿದೆ. ಭಾರತ ನಾರಿಶಕ್ತಿಯನ್ನು ವಿರೋಧಿಸುವ ಕಾಂಗ್ರೆಸ್‌ಗೆ ಈ ದೇಶದ ಮಹಿಳೆಯರು, ಯುವತಿಯರು ನೀಡಲಿದ್ದಾರೆ. ಶಕ್ತಿಯ ವಿರುದ್ಧದ ಹೋರಾಟದ ಪರಿಣಾಮ ಏನಾಗುತ್ತದೆ ಎಂದು ಜೂನ್ ನಾಲ್ಕರಂದು ನೀಡಲಿದ್ದಾರೆ.
ಕಾಂಗ್ರೆಸ್ ಒಡೆದು ಆಳುವ ಪಕ್ಷ….
ಅಧಿಕಾರಕ್ಕಾಗಿ ಕೆಲವರು ಎಲ್ಲಾ ಹದ್ದು ಮೀರುತ್ತದೆ. ಬ್ರೀಟಿಷರು ಹೋದರೂ ಕಾಂಗ್ರೆಸ್‌ನಲ್ಲಿ ಆ ಮನಸ್ಥಿತಿ ಹೋಗಲಿಲ್ಲ. ಒಡೆದು ಆಳು ನೀತಿಯನ್ನ ಕಾಂಗ್ರೆಸ್ ಇಂದಿಗೂ ಅನುಸರಿಸುತ್ತಿದೆ. ದೇಶ, ಸಮುದಾಯ, ಜಾತಿಯಲ್ಲಿ ಒಡೆದ ಕಾಂಗ್ರೆಸ್‌ಗೆ ಇಷ್ಟಾದರೂ ಸಂತೃಪ್ತಿ ಸಿಕ್ಕಿಲ್ಲ. ಇದಕ್ಕಾಗಿ ದೇಶವನ್ನು ಮತ್ತೆ ಒಡೆಯುವ ಕುತಂತ್ರ ಮಾಡುತ್ತಿದೆ. ಕರ್ನಾಟಕದ ಕಾಂಗ್ರೆಸ್‌ನ ಸಂಸದರೊಬ್ಬರು ದೇಶವನ್ನು ಮತ್ತೆ ಒಡೆಯುವ ಮಾತನಾಡಿದ್ದಾರೆ. ಅವರನ್ನ ಪಕ್ಷದಿಂದ ಹೊರಕ್ಕೆ ಹಾಕುವ ಬದಲು ಅವರನ್ನ ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕರ್ನಾಟಕದ ರಾಜನೀತಿ, ಕರ್ನಾಟಕದ ಭೂಮಿ ಇದಕ್ಕೆ ಅವಕಾಶ ನೀಡುವುದಿಲ್ಲ. ಕರ್ನಾಟಕದ ಧರಣಿಯನ್ನು ಅವಮಾನ ಮಾಡುವ ಕಾಂಗ್ರೆಸ್‌ನ್ನ ಜೂನ್ ನಾಲ್ಕರನ್ನ ಹುಡುಕಿ ಹುಡುಕಿ ಸ್ವಚ್ಚ ಮಾಡಬೇಕಿದೆ. 24 ಏಪ್ರಿಲ್, ಏಳನೇ ತಾರೀಖು ಮೇ ನಿಮ್ಮ ವೋಟಿನ ಮೂಲಕ ಕಾಂಗ್ರೆಸ್ ವಿಭಜನಾಕಾರಿ ಮನಸ್ಥಿತಿಯನ್ನು ಸ್ವಚ್ಚ ಮಾಡಬೇಕಿದೆ.
ಕಾಂಗ್ರೆಸ್ ಬಡವರ ಅಧಿಕಾರವನ್ನು ಕಿತ್ತುಕೊಳ್ಳುತ್ತಲೇ ಇದೆ. ಕಾಂಗ್ರೆಸ್ ಇದುವರೆಗೂ ಸಣ್ಣಪುಟ್ಟ ಆಮೀಷಗಳಿಗೆ ತಡಕಾಡುವಂತೆ ಮಾಡುತ್ತಿದೆ. ಆದರೆ ನಾವು ನಮ್ಮ ಅಧಿಕಾರದ ಹತ್ತು ವರ್ಷದಲ್ಲಿ ಬಡವರನ್ನು ಅವರ ಕಷ್ಟದ ಹಾದಿಯಿಂದ ಹೊರಬರುವ ದಾರಿಯನ್ನು ಹುಡುಕಿ ತೋರಿಸಿದ್ದೇವೆ. ಕರ್ನಾಟಕದ ಉದಾಹರಣೆಯನ್ನೆ ತೆಗೆದುಕೊಳ್ಳುವುದಾದರೆ, ಆಯುಶ್ಮಾನ ಯೋಜನೆ ಮೂಲಕ 55 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಐದು ಲಕ್ಷಕ್ಕೂ ಹೆಚ್ಚು ಕಾರ್ಡ್ ಧಾರರು ಶಿವಮೊಗ್ಗದಲ್ಲಿದ್ದಾರೆ. 40 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಫ್ರೀ ಗ್ಯಾಸ್ ನೀಡಲಾಗಿದೆ. ಲಕ್ಷಕ್ಕೂ ಹೆಚ್ಚು ಮಂದಿಗೆ ಪಿಎಂ ಮಕಾನ್ ಯೋಜನೆ ಮೂಲಕ ನೀಡಲಾಗಿದೆ. ಈ ರೀತಿಯಲ್ಲಿ ಒಬಿಸಿ,ಎಸ್‌ಸಿ, ಎಸ್‌ಟಿ ಯಂತಹ ತಳಮಟ್ಟದ ಸಮುದಾಯವನ್ನು ಸಶಕ್ತಿಕರಣವನ್ನು ಮಾಡಿದೆ ನಿಮ್ಮ ಕೇಂದ್ರ ಸರ್ಕಾರ.
ಕಳೆದ ಸಲ ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟನೆಗೆ ಬಂದಿದ್ದೆ. ಆಗ ಹಕ್ಕಿಪಿಕ್ಕಿ ಸಮುದಾಯದೊಂದಿಗೆ ಚರ್ಚೆ ಮಾಡಿದ್ದೆ. ಅವರನ್ನ ಸುಡಾನ್ ಸಮಸ್ಯೆಯಿಂದ ಹೊರಕ್ಕೆ ಕರತರುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವು. ಇದನ್ನು ಸಾಮಾಜಿಕ ನ್ಯಾಯದ ಅಭಿವೃದ್ದಿಗಾಗಿ ಹೇಳುತ್ತಿದ್ದೇನೆ ಎಂದ ಮೋದಿ ನಿಮ್ಮ ಮತ ಸಾಮಾಜಿಕ ಅಭಿವೃದ್ಧಿಗೆ ಸಲ್ಲುತ್ತದೆ.
ಎನ್ ಡಿಎ ಪಕ್ಷ ಮನೆಮನಗಳಿಗೂ ತಲುಪಿದೆ….
ಇವತ್ತು ಭಾರತದ ಗುರುತು, ಫೈವ್ ಜಿ, ಮೆಟ್ರೋ, ಅಂಡರ್ ವಾಟರ್, ಯುಪಿಐ ಟೆಕ್ನಾಲಿಜಿ, ಗ್ರೀನ್ ಕಾರಿಡಾರ್, ಎಕ್ಸ್‌ಪ್ರೆಸ್ ವೇ ನಿಂದ ನೋಡಲಾಗುತ್ತದೆ. ಕರ್ನಾಟಕದ ಗುರುತನ್ನು ಇದೇ ರೀತಿಯಲ್ಲಿ ನಡೆಸಲಾಗುತ್ತಿದೆ. ತುಮಕೂರು ಎಕ್ಸ್‌ಪ್ರೆಸ್ ವೇನಿಂದಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಸಮಯ ಎರಡು ಗಂಟೆ ಕಡಿಮೆಯಾಗಿದೆ. ಕೋಟೆಗಂಗೂರುನಲ್ಲಿ ರೈಲ್ ಡಿಪೋ ಮಾಡಲಾಗುತ್ತಿದೆ. ಇಲ್ಲಿ ರೈಲ್ವೆ ಯೋಜನೆಗೆ ವಿಶೇಷವಾಗಿ ಕಾಯಕಲ್ಪ ನೀಡಲಾಗುತ್ತಿದೆ. ಇನ್ನೂ ಮುಂದಿನ ಐದು ವರ್ಷದಲ್ಲಿ ದೇಶ ದುನಿಯಾದ ಮೂರನೇ ಅರ್ಥ ವ್ಯವಸ್ಥೆಯಾಗಿದೆ. ಗರೀಬ್ ಕಲ್ಯಾಣ ಇನ್ನಷ್ಟು ಮಂದಿಗೆ ಸಿಗಲಿದೆ. ಎಲ್ಲರ ಮನೆಮನೆಗೂ ಎನ್‌ಡಿಎ ಸರ್ಕಾರ ತೆರಳಿದೆ. ಯುವಕರಿಗೆ ಹೊಸ ಮಾರ್ಗ ತೆರೆದುಕೊಳ್ಳಲಿದೆ. ಇದು ನಿಮ್ಮ ಮತಗಳಿಂದ ಗ್ಯಾರಂಟಿ ಆಗಲಿದೆ.
ಉಡುಪಿ-ಚಿಕ್ಕಮಗಳೂರು ಕೋಟಾ ಶ್ರೀನಿವಾಸ್, ದಕ್ಷಿಣ ಕನ್ನಡ ಕ್ಯಾ. ಬ್ರಿಜೆಶ್ ಚೌಟ, ಬೆಂಗಳೂರು ಗ್ರಾಮಾಂತರ ಡಾ.ಮಂಜುನಾಥ್‌ರಿಗೆ, ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ, ದಾವಣಗೆರೆ ಗಾಯತ್ರಿ ಸಿದ್ದೇಶ್ವರರವರನ್ನು ಭಾರೀ ಬಹುಮತದಿಂದ ಗೆಲ್ಲಿಸಬೇಕು. ನನಗೆ ವಿಶ್ವಾಸವಿದೆ ನಾಲ್ಕು ಜೂನ್ ಕರ್ನಾಟಕದಲ್ಲಿ ವಿಶ್ವಾಸದ ಕಮಲ ಅರಳಿದೆ. ನಾನಂತೂ ನಿಮಗೆ ಗ್ಯಾರಂಟಿ ನೀಡಿದ್ದೇನೆ. ಈಗ ನೀವು ಗ್ಯಾರಂಟಿ ನೀಡಬೇಕಿದೆ. ಪ್ರತಿ ಭೂತ್‌ನಲ್ಲಿ ಕಮಲ ಅರಳಿಸುವ ಗ್ಯಾರಂಟಿ ನೀಡಬೇಕಿದೆ ಎಂದರು.