Headlines

RIPPONPETE |ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿರ್ಲಕ್ಷ್ಯ – ಕನ್ನಡಪರ ಹೋರಾಟಗಾರರ ಆಕ್ರೋಶ

ರಿಪ್ಪನ್‌ಪೇಟೆ : ನಾಡಿನಾದ್ಯಂತ ದೀಪಾವಳಿ ಹಬ್ಬದ ನಡುವೆಯೂ ಸಡಗರ ಹಾಗೂ ಸಂಭ್ರದಿಂದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತಿದ್ದು ಅದಕ್ಕೆ ತದ್ವಿರುದ್ಧ ಎಂಬುವಂತೆ ಪ್ರಾಂಶುಪಾಲರ ನಿರ್ಲಕ್ಷ್ಯದಿಂದ 800 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೇ ನಿರ್ಲಕ್ಷ್ಯ ತೋರಿರುವ ಘಟನೆ ನಡೆದಿದೆ.

ಹೌದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತಿದ್ದಾರೆ.ಈ ಕಾಲೇಜು ಕಲೆ, ಸಾಹಿತ್ಯ,ವಿಜ್ಞಾನ ಮತ್ತು ಕ್ರೀಡೆಯಲ್ಲಿ ತನ್ನದೇ ಆದ ಛಾಫು ಮೂಡಿಸುವ ಮೂಲಕ ಕುವೆಂಪು ವಿಶ್ವವಿದ್ಯಾಲಯ ಮಟ್ಟದಲ್ಲಿ ತನ್ನದೇ ಆದಂತಹ ಕೀರ್ತಿಯನ್ನು ಗಳಿಸಿ ಸ್ಥಳೀಯ ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರವಾಗಿತ್ತು.ಪ್ರತಿ ವರ್ಷ ಈ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತಿತ್ತು.

ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಪಟ್ಟಣದ ಶಾಲಾ ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ ಆದರೆ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೂ,ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯವರಿಗೂ ಯಾವುದೇ ಮಾಹಿತಿಯನ್ನು ನೀಡದೇ ಕಾಟಾಚಾರಕ್ಕೆ ಎಂಬುವಂತೆ ಬೆರಳೆಕೆಯಷ್ಟು ಉಪನ್ಯಾಸಕರು ರಾಜ್ಯೋತ್ಸವ ಆಚರಿಸಿ ಕೈತೊಳೆದುಕೊಂಡಿದ್ದು ಈ ಕಾಲೇಜು ಕರ್ನಾಟಕದಲ್ಲಿ ಇದೆಯೋ ಅಥವಾ ತಮಿಳುನಾಡಿನಲ್ಲಿದೆಯೋ ಎಂಬುವುದು ಕನ್ನಡಪರ ಹೋರಾಟಗಾರರ ಆರೋಪವಾಗಿದೆ.

ಈ ಕಾಲೇಜಿನಲ್ಲಿ ಖಾಯಂ ಹಾಗೂ ಅತಿಥಿ ಉಪನ್ಯಾಸಕರು ಸೇರಿದಂತೆ ಮೂವತ್ತಕ್ಕೂ ಅಧಿಕ ಉಪನ್ಯಾಸಕರಿದ್ದರು ಸಹ ರಾಜ್ಯೋತ್ಸವ ಆಚರಣೆಗೆ ಶೇಕಡಾ80% ರಷ್ಟು ಉಪನ್ಯಾಸಕರು ಗೈರು ಹಾಜರಾಗಿ ಕನ್ನಡ ಭಾಷೆಯ ಅಸ್ಮಿತೆಗೆ ಧಕ್ಕೆ ತಂದಿದ್ದಾರೆ.

69ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅದ್ದೂರಿಯಾಗಿ ಆಚರಿಸುವಂತೆ ರಾಜ್ಯ ಸರ್ಕಾರದ ಖಡಕ್ ಆದೇಶವಿದ್ದರೂ ಸಹ ಕಾಲೇಜಿನ ಪ್ರಾಂಶುಪಾಲರ ನಿರ್ಲಕ್ಷ್ಯದಿಂದಲೋ , ಕಾಲೇಜು ಅಭಿವೃದ್ಧಿ ಸಮಿತಿಯ ಪಾಲ್ಗೊಳ್ಳುವಿಕೆ ಕೊರತೆಯಿಂದಲೋ ಕಾಟಾಚಾರಕ್ಕೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಕನ್ನಡ ಪರ ಹೋರಾಟಗಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಕನ್ನಡ ಉಪನ್ಯಾಸಕರಾದ ಡಾ. ವಿರುಪಾಕ್ಷಪ್ಪ ರವರ ಬಳಿ ಮಾಹಿತಿ ಕೇಳಿದಾಗ ನವೆಂಬರ್ ತಿಂಗಳಿನಲ್ಲಿ ಯಾವಾಗ ಬೇಕಾದರೂ ಕಾರ್ಯಕ್ರಮವನ್ನು ನಡೆಸಬಹುದು ಎಂದು ಹೇಳುವ ಮೂಲಕ ಸರ್ಕಾರದ ಖಡಕ್ ಆದೇಶಕ್ಕೆ ನಿರ್ಲಕ್ಷ್ಯ ತೋರಿದ್ದಾರೆ.

ಒಟ್ಟಾರೆಯಾಗಿ ಕನ್ನಡ ಭಾಷೆಯು ತನ್ನ ವೈವಿಧ್ಯತೆಗಳ ಮೂಲಕ ಜಗತ್ತಿನಲ್ಲಿಯೇ ವೈಶಿಷ್ಟ್ಯತೆ ಹೊಂದಿದ್ದು, ಈ ಆಸ್ಮಿತೆ ಸದಾ ಉಳಿದು-ಬೆಳೆಯುವಂತೆ ಪ್ರಯತ್ನಶೀಲರಾಗಬೇಕಾದ ಉಪನ್ಯಾಸಕರುಗಳು ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

Leave a Reply

Your email address will not be published. Required fields are marked *