w
Headlines
Home » ‘ವರ್ಕ್ ಫ್ರಂ ಹೋಮ್’ ಆಫರ್ ನಂಬಿ ಮೋಸ ಹೋದ ಇಂಜಿನಿಯರ್ — ಒಂಬತ್ತು ದಿನಗಳಲ್ಲಿ 11 ಲಕ್ಷ ವಂಚನೆ!

‘ವರ್ಕ್ ಫ್ರಂ ಹೋಮ್’ ಆಫರ್ ನಂಬಿ ಮೋಸ ಹೋದ ಇಂಜಿನಿಯರ್ — ಒಂಬತ್ತು ದಿನಗಳಲ್ಲಿ 11 ಲಕ್ಷ ವಂಚನೆ!

1001770430

‘ವರ್ಕ್ ಫ್ರಂ ಹೋಮ್’ ಆಫರ್ ನಂಬಿ ಮೋಸ ಹೋದ ಇಂಜಿನಿಯರ್ — ಒಂಬತ್ತು ದಿನಗಳಲ್ಲಿ 11 ಲಕ್ಷ ವಂಚನೆ!

ಶಿವಮೊಗ್ಗ: ನಗರದ  ಕುವೆಂಪು ನಗರದಲ್ಲಿ ವಾಸಿಸುವ ಮಹಿಳಾ ಎಂಜಿನಿಯರ್‌ರೊಬ್ಬರಿಗೆ ಸೈಬರ್ ವಂಚಕರು ಒಂಬತ್ತು ದಿನದಲ್ಲ್ಲಿ ೧೧ ಲಕ್ಷಕ್ಕೂ ಅಧಿಕ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ.  ಈ  ಹಿನ್ನೆಲೆ ಮಹಿಳೆ  ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ನವೆಂಬರ್ ೨, ೨೦೨೫ ರಂದು ಮಹಿಳೆ ಮೊಬೈಲ್ ನೋಡುತ್ತಿದ್ದಾಗ, ವಂಚಕರು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ. ವಂಚಕರು ತಮ್ಮನ್ನು ‘ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ‘ವರ್ಕ್ ಫ್ರಂ ಹೋಮ್’ ಉದ್ಯೋಗದ ಆಫರ್ ನೀಡಿದ್ದರು.

ತಾವು ನೀಡುವ ವಿವಿಧ ಆನ್‌ಲೈನ್ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಮಹಿಳೆಯನ್ನು ನಂಬಿಸಿದ್ದರು. ಇದನ್ನು ನಂಬಿದ ಮಹಿಳೆ  ೦೨-೧೧-೨೦೨೫ ರಿಂದ ೧೧-೧೧-೨೦೨೫ ರ ನಡುವಿನ ಕೇವಲ ಒಂಬತ್ತು ದಿನಗಳ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ೧೧,೪೬,೨೭೩ ಮೊತ್ತದ ಹಣವನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.

ನಿಗದಿತ ಹಣ ವರ್ಗಾವಣೆ ಮಾಡಿದ ನಂತರ, ಮಹಿಳೆ ಲಾಭಾಂಶ ಮತ್ತು ತಮ್ಮ ಹಣವನ್ನು ವಾಪಸ್ ಕೇಳಿದಾಗ, ವಂಚಕರು ಮತ್ತೆ ಬೇರೆ ಬ್ಯಾಂಕ್ ಖಾತೆಗೆ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವಂತೆ ಕೇಳಿದ್ದರು. ಇದರಿಂದ ಸಂತ್ರಸ್ತರಿಗೆ ಅನುಮಾನ ಬಂದಿದ್ದು, ಸ್ನೇಹಿತರ ಬಳಿ ವಿಚಾರಿಸಿದಾಗ ತಾವು ಸೈಬರ್ ವಂಚನೆಗೆ ಬಲಿಯಾಗಿರುವುದು ತಿಳಿದುಬಂದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.