w
Headlines

ಹೊಸನಗರ ಸಮೀಪ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ : ಚಾಲಕನಿಗೆ ಗಂಭೀರ ಗಾಯ|Accident

ಇನ್ನೊವಾ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ನಡೆದು ಕಾರು ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಹೋಬಳಿ ಮತ್ತಿ ಮನೆ ಸಮೀಪ ಇನ್ನೋವಾ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಇನ್ನೊವಾ ಕಾರಿನ ಚಾಲಕ ಸಿದ್ದರಾಜು ಎಂಬುವರ ಕಾಲಿಗೆ, ಹೊಟ್ಟೆಗೆ ಹಾಗೂ ಕಿವಿಗೆ  ಗಂಭೀರವಾಗಿ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ.  ಕಾರು ಮೈಸೂರಿನಿಂದ ಸಿಗಂದೂರು ಕಡೆಗೆ ತೆರಳುತಿದ್ದು…

Read Full News

ಹಣದಾಸೆಗೆ ಭಿಕ್ಷೆ ಬೇಡುತಿದ್ದ ಅಜ್ಜಿಯನ್ನು ಕೊಲೆ ಮಾಡಿ ಚಿನ್ನ ಕದ್ದೊಯ್ದಿದ್ದ ಆರೋಪಿಯ ಬಂಧನ|Arrested

ದೇವಸ್ಥಾನದ ಮುಂದೆ ಭಿಕ್ಷೆ ಬೇಡುತಿದ್ದ ಅಜ್ಜಿಯನ್ನು ಹಣದಾಸೆಗೆ ಕೊಲೆ ಮಾಡಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 3 ರಂದು‌ ಭದ್ರಾವತಿಯ ಸುಣ್ಣದಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊಲೆ ಮಾಡಿ ಆರೋಪಿ ಬಂಗಾರದ ಓಲೆ ಮತ್ತು ಮೂಗುತಿಯೊಂದಿಗೆ ಪರಾರಿಯಾಗಿದ್ದನು. ಸದರಿ ಜಟಿಲ ಪ್ರಕರಣವನ್ನು ಕೈಗೆತ್ತಿಕೊಂಡ ಪೇಪರ್ ಟೌನ್ ಪೊಲೀಸರು ಕುಂದಾಪುರದ ಕರುಣಾಕರ ದೇವಾಡಿಗ (24) ಎಂಬಾತನನ್ನು ಬಂಧಿಸಿ 14000 ರೂ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ….

Read Full News

ಅಂಗನವಾಡಿ ಕಾರ್ಯಕರ್ತೆರಿಗೆ ಮತ್ತು ಸಹಾಯಕಿಯರಿಗೆ ಮನೆ ಮತ್ತು ಬಿಪಿಎಲ್ ಕಾರ್ಡ್ ಕಡ್ಡಾಯ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು : ಹರತಾಳು ಹಾಲಪ್ಪ|Ripponpet

ರಿಪ್ಪನ್‌ಪೇಟೆ : ಜಗತ್ತನ್ನು ವ್ಯಾಪಿಸಿದ್ದ ಕೊರೋನಾ ಮಹಾಮಾರಿ ರೋಗದ ಸಂದರ್ಭದಲ್ಲಿ ಅಂಗನವಾಡಿ ಆಶಾ ಮತ್ತು ಅರೋಗ್ಯ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಶ್ರಮಿಸಿರುವುದು ಪ್ರಸಂಶನೀಯವಾಗಿದೆ ಅದರೆ ಅವರಿಗೆ ಕನಿಷ್ಟ ವೇತನವಿಲ್ಲದೆ ಪರದಾಡುವ ಸ್ಥಿತಿ ಇದ್ದರೂ ಕರ್ತವ್ಯವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ ಇವರಿಗೆ ಇದೇ 19 ರಿಂದ ಅರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಸರ್ಕಾರದ ಗಮನಸೆಳೆಯುವುದರೊಂದಿಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆಯ ಜ್ಯೋತಿಮಾಂಗಲ್ಯ…

Read Full News

ತೀರ್ಥಹಳ್ಳಿಯಲ್ಲಿ ಸಿನಿಹಬ್ಬ ಕಿರುಚಿತ್ರೋತ್ಸವ ಯಶಸ್ವಿ – ರಿಪ್ಪನ್‌ಪೇಟೆ ಮೂಲದ ಯುವ ನಿರ್ದೇಶಕ ಜಿಲ್ಸನ್ ನಿರ್ದೇಶನದ ಕಿರುಚಿತ್ರ ಪ್ರದರ್ಶನ|Short films

ತೀರ್ಥಹಳ್ಳಿ : ಡಿಸೆಂಬರ್ 15 ರಂದು ತೀರ್ಥಹಳ್ಳಿ “ಸಿನಿ ಹಬ್ಬ” ಕಿರು ಚಿತ್ರೋತ್ಸವ  ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಕುರ್ಕುರೆ ಕ್ರಿಯೇಷನ್ಸ್ ತಂಡ ಆಯೋಜಿಸಿದ್ದು , ಶಿವಮೊಗ್ಗ ಸಿನಿಮಾಸ್ ಅಡ್ಡ ಹಾಗೂ ಸತ್ಯ ಪಿಚ್ಚರ್ಸ್ ಅವರು ಭಾಗಿಯಾಗಿದ್ದರು, ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಮೂಲದ ಯುವ ನಿರ್ದೇಶಕ ಜಿಲ್ಸನ್ ಜೊಸೇಫ್ ನಿರ್ದೇಶನದ ಸಂಭಾಷಣೆ ಇಲ್ಲದ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಿರುಚಿತ್ರ “ಎಕ್ಸಿಬಿಷನಿಸಂ ” ಸೇರಿದಂತೆ 6 ಕಿರು ಚಿತ್ರಗಳ ಪ್ರದರ್ಶನವನ್ನು ಮಾಡಲಾಗಿತ್ತು.   ರಾಮಾ ರಾಮಾ ರೇ…

Read Full News

ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅರ್ ಎ ಚಾಬುಸಾಬ್ ನೇಮಕ|jds

ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ನಿವಾಸಿ ಆರ್. ಎ. ಚಾಬುಸಾಬ್ ಅವರನ್ನು ನೇಮಿಸಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಪಕ್ಷ ಸಂಘಟನೆಗೆ ಅಣಿಯಾಗುವಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆದೇಶ ನೀಡಿದ್ದಾರೆ. ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಜೆಡಿಎಸ್ ಪಕ್ಷದ ಕಟ್ಟಾಳಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಚಾಬುಸಾಬ್ ಅವರು ಎರಡನೇ ಬಾರಿಗೆ ರಾಜ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುತ್ತಿದ್ದಾರೆ. ಮೊದಲಿಗೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದೇ ಇರುವಾಗ ಪಕ್ಷ…

Read Full News

ಹೊಳೆಯಲ್ಲಿ ದನಗಳ ಮೈ ತೊಳೆಸಲು ಹೋದ ಯುವಕ ಕಾಲು ಜಾರಿ ಬಿದ್ದು ಸಾವು|mutuguppe

ದನಗಳ ಮೈ ತೊಳೆಸಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೊರಬ ತಾಲೂಕಿನ ಮುಟುಗುಪ್ಪೆ ಸಮೀಪದ ಬಂದಿಗೆ  ಗ್ರಾಮದ ಹೊಳೆಯಲ್ಲಿ ದನಗಳಿಗೆ ಮೈ ತೊಳೆಸಲು ಹೋಗಿ ಆಕಸ್ಮಿಕವಾಗಿ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಬಂದಿಗೆ ಗ್ರಾಮದ ಪುನೀತ್ ಕುಮಾರ್ (23) ಮೃತ ದುರ್ಧೈವಿ. ಇಂದು ಬೆಳಗ್ಗೆ ದನಗಳಿಗೆ ಮೈ ತೊಳಿಸಲು ತಮ್ಮ ಜಮೀನಿನ ಹತ್ತಿರವಿರುವ ಜಮೀನಿನ ಹೊಳೆಗೆ ಹೋಗಿದ್ದಾರೆ.ಆದರೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ತಕ್ಷಣ ಅಗ್ನಿಶಾಮಕ ದಳದವರು ತಳಕ್ಕೆ…

Read Full News

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ವೇದಿಕೆ : ಹರತಾಳು ಹಾಲಪ್ಪ|Gfgc

ರಿಪ್ಪನ್‌ಪೇಟೆ : ಇಂದಿನ ವಿದ್ಯಾರ್ಥಿಗಳು ಕೀಳರೀಮೆಯನ್ನು ಬಿಟ್ಟು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಹಳ್ಳಿಯ ವಿದ್ಯಾರ್ಥಿಗಳು ಪಟ್ಟಣದ ಮತ್ತು ಶ್ರೀಮಂತರ ಹಾಗೂ ಕಾನ್ವಂಟ್ ಮಕ್ಕಳ ಮುಂದೆ ಕೀಳರೀಮೆಯಿಂದ ನಡೆದುಕೊಳ್ಳದೇ ಕಠಿಣ ಶ್ರಮ ವಹಿಸಿ ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ವ್ಯಕ್ತಿತ್ವದ ವಿದ್ಯಾರ್ಥಿಯಾಗಲು ಸಾಧ್ಯವಾಗುವುದೆಂದ ಅವರು…

Read Full News

H D ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲೆಂದು ವರಸಿದ್ದಿ ವಿನಾಯಕನಲ್ಲಿ ಸಂಕಲ್ಪ ಪೂಜೆ :|jds

ರಿಪ್ಪನ್‌ಪೇಟೆ : ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮೊತ್ತೊಮ್ಮ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಅವರ ಹುಟ್ಟುಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಸಂಕಲ್ಪ ಪೂಜೆ ನೆರವೇರಿಸಿದರು. ಸಂಕಲ್ಪ ಪೂಜೆಯ ನಂತರ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಯೋಜನೆ ಸೇರಿದಂತೆ ಹತ್ತು ಹಲವು ಜನಹಿತ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದರೊಂದಿಗೆ ಜನಾನುರಾಗಿಯಾಗಿದ್ದು…

Read Full News

ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆಯ ವಿದ್ಯಾರ್ಥಿಗಳು ಆಯ್ಕೆ|volleyball

ರಿಪ್ಪನ್‌ಪೇಟೆ : ತಮಿಳುನಾಡಿನಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಡಿಸೆಂಬರ್ 23 ರಿಂದ 27 ರವರೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆಯುವ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುವೆಂಪು ವಿಶ್ವವಿದ್ಯಾಲಯದ ತಂಡಕ್ಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಪ್ರಜ್ವಲ್ ಎನ್ ಎಂ ಮತ್ತು ಮಹಮ್ಮದ್ ಅರ್ಬಾಜ಼್ ಆಯ್ಕೆಯಾಗಿದ್ದಾರೆ. ವಿದ್ಯಾನಗರದ ನಿವಾಸಿಗಳಾದ ಮಹೇಶ್ವರಾಚಾರಿ ಮತ್ತು ಮೀನಾಕ್ಷಿ ದಂಪತಿಗಳ ಪುತ್ರನಾದ…

Read Full News

ಕುಗ್ರಾಮಗಳಲ್ಲಿ ಪತ್ರಕರ್ತರ ವಾಸ್ತವ್ಯ : ಗ್ರಾಮದ ಅಭಿವೃದ್ಧಿ ಕುರಿತು ಸರ್ಕಾರಕ್ಕೆ ಸಮಗ್ರ ವರದಿ|village stay

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇದರ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಅಲ್ಲಿಯ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗೋಪಾಲ್ ಎಸ್.ಯಡಗೆರೆ ಹೇಳಿದರು. ಇಲ್ಲಿನ ಪ್ರೆಸ್‌ ಟ್ರಸ್ಟ್‌ ನಲ್ಲಿ ಗುರುವಾರ (ಡಿ.೧೫) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ನಡೆ ಸಮಾಜದ ಕಡೆ ಘೋಷಣೆಯಡಿ ಸಂಗವು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಅತ್ಯಂತ…

Read Full News

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿ – 18 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು|Accident

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯ ತುಮರಿ ಬಳಿ ಶಾಲಾ ಪ್ರವಾಸಿ ಬಸ್ಸು ಪಲ್ಟಿಯಾಗಿದ್ದೂ, ಕೆಲ ಶಾಲಾ ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ  ಅಂದಾಜು 18 ಜನ ಮಕ್ಕಳು ಹಾಗೂ ಎಂಟು ಜನ ಶಿಕ್ಷಕರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತರಲಾಗಿದೆ.  ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪ್ರೌಢ ಶಾಲಾ ಮಕ್ಕಳು ಪ್ರವಾಸಕ್ಕೆ ಬಂದ ಸಂಧರ್ಭದಲ್ಲಿ ಘಟನೆ…

Read Full News

ಹೆತ್ತ ತಾಯಿಯ ಮನೆಯಲ್ಲಿಯೇ ಕಳ್ಳತನ ಮಾಡಿದ ಮಗ – ಬಂಧನ|Theft

ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಮಗನನ್ನು ಶಿವಮೊಗ್ಗ ಜಿಲ್ಲೆಯ ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಗೋಪಾಳದ ಶ್ರೀರಾಮನಗರದ ಗಿರೀಶ್ ಅಲಿಯಾಸ್ ಸುಣ್ಣ ಬಂಧಿತ ಮನೆ ಕಳ್ಳ. ಆರೋಪಿಯು ತನ್ನ ತಾಯಿ ಮನೆಯಲ್ಲಿಲ್ಲದ ವೇಳೆ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಗಿರೀಶ್​ ತಾಯಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗಿರೀಶ್​​ ಕದ್ದಿರುವ ಅನುಮಾನದಿಂದ ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ. ಈತ ಹಮಾಲಿ ಕೆಲಸ ಮಾಡುತ್ತಿದ್ದು,…

Read Full News

ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಡೀರ್ ರಾಜೀನಾಮೆ|Resign

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ಅಧ್ಯಕ್ಷೆ ಸ್ಥಾನಕ್ಕೆ ದಿಡೀರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರಿಂದ ಅಧ್ಯಕ್ಷರಾಗಿ ಆಯ್ಕೆಯಾದ ಲೀಲಾವತಿ ದೊಡ್ಡಯ್ಯ ಕಳೆದ 20 ತಿಂಗಳ ಕಾಲ ಬಾಳೂರು ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಗೆ ಬಂದ ಮಾಹಿತಿ ಪ್ರಕಾರ ಗ್ರಾಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ತಮ್ಮ ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಲೀಲಾವತಿ ದೊಡ್ಡಯ್ಯ ಸಾಗರದ…

Read Full News

ರಾಷ್ಟ್ರ ಮಟ್ಟದಲ್ಲಿ‌ ಮಲೆನಾಡಿನ ಮರ್ಯಾದೆ ಕಳೆದ ಸಾಗರ ತಾಲೂಕಿನ ಸರ್ಕಾರಿ ಶಾಲೆಯ ಸೀರೆ ಶೌಚಾಲಯ|viral video

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬರುವೆ ಗ್ರಾಮದ ಸಮೀಪ ಇರುವ ಏಳಿಗೆ ಗ್ರಾಮದಲ್ಲಿನ ಶಾಲೆಯೊಂದರ ಸೀರೆ ಶೌಚಾಲಯದ ವಿಡಿಯೋವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.  ಇಂತಹದ್ದೊಂದು ಅವ್ಯವಸ್ಥೆಯು ಇನ್ನೂ ಇದೇ ಎಂದು ರಾಷ್ಟ್ರೀಯವಾಹಿನಿಗಳು ಸೀರೆ ಶೌಚಾಲಯದ ಸರ್ಕಾರಿ ಶಾಲೆಯ ಸ್ಥಿತಿಯನ್ನು ಬಿಚ್ಚಿಡುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದು, ಮಾಜಿ ಸಿಎಂ ಬಿಎಸ್​ ವೈ ತವರು, ಘಟಾನುಘಟಿ ರಾಜಕಾರಣಗಳ ಶಕ್ತಿಕೇಂದ್ರ  ಹಾಗೂ ವಿಮಾನ ನಿಲ್ಧಾಣವನ್ನು ಹೊಂದಿ ಅಭಿವೃದ್ಧಿ ಕಾಣುತ್ತಿರುವ ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಗೆ ಶೌಚಾಲಯ ಕಟ್ಟಿಸಿಕೊಡುವಂತಹ…

Read Full News

ಪತಿಗೆ ಕತ್ತಿಯಿಂದ ಬೆದರಿಸಿ ಪತ್ನಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ – ಭಗ್ನ ಪ್ರೇಮಿಯಿಂದಲೇ ಅಪಹರಣ|Kidnap

ವಿವಾಹಿತೆಯೊಬ್ಬಳು ಕಿಡ್‌ನ್ಯಾಪ್‌ ಆಗಿರುವ ಪ್ರಕರಣವನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಚುರುಕಾದ ಕಾರ್ಯಾಚರಣೆಯಿಂದ ಭೇದಿಸಿದ್ದು, ಪ್ರಿಯಕರನಿಂದಲೇ ಮಹಿಳೆಯ ಅಪಹರಣವಾಗಿರುವುದು ಪತ್ತೆಯಾಗಿದೆ. ಡಿ.4ರಂದು ಎನ್‌ಟಿಬಿ ಲೇಔಟ್‌ನಲ್ಲಿದ್ದ ಮನೆಯಿಂದ ಮಹಿಳೆಯ ಅಪಹರಣವಾಗಿತ್ತು. ಮಹಿಳೆಯ ಗಂಡನಿಗೆ ಮಚ್ಚು ತೋರಿಸಿ ಅಪಹರಣ ಮಾಡಲಾಗಿದ್ದಲ್ಲದೆ, ಆಕೆಯ ಗಂಡನ ಕಾರಲ್ಲೇ ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಪ್ರಕರಣದಲ್ಲಿ ಆಕೆಯ ಪ್ರಿಯಕರ ಸುರೇಶ್ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಅಬ್ದುಲ್ ಅಬ್ರಾರ್, ಮಹೇಶ್, ಮಂಜುನಾಥ್ ಇತರ ಮೂವರು ಆರೋಪಿಗಳು. ಬಾಲ್ಯದ ಸ್ನೇಹಿತ ಸುರೇಶ್‌ ಜತೆಗೆ ಈಕೆಗೆ ಮೊದಲಿನಿಂದಲೂ ಪ್ರೇಮವಿದ್ದು, ಆದರೂ…

Read Full News

ರಿಪ್ಪನ್‌ಪೇಟೆ : ತೀರ್ಥಹಳ್ಳಿ ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ – ಗಾಯಾಳು ಮೆಗ್ಗಾನ್ ಗೆ ದಾಖಲು|crime

ರಿಪ್ಪನ್‌ಪೇಟೆ : ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತೀರ್ಥಹಳ್ಳಿ ರಸ್ತೆಯ ಖಾಸಗಿ ಬಾರ್ & ರೆಸ್ಟೋರೆಂಟ್ ಮುಂಭಾಗದಲ್ಲಿ ನಡೆದಿದೆ. ಪಟ್ಟಣದ ಗಾಂಧಿನಗರದ ನಿವಾಸಿ ಮಂಜುನಾಥ್ (27) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ. ತೀರ್ಥಹಳ್ಳಿ ರಸ್ತೆಯ ಖಾಸಗಿ ಬಾರ್ ವೊಂದರ ಮುಂಂಭಾಗದಲ್ಲಿ ಕ್ಷುಲ್ಲಕ ಕಾರಣಕ್ಕೆ ತೀರ್ಥಹಳ್ಳಿ ರಸ್ತೆ ನಿವಾಸಿ ಪ್ರವೀಣ್ ಎಂಬಾತ ಮಂಜುನಾಥ್ ಮೇಲೆ ಏಕಾಏಕಿ ಬಿಯರ್ ಬಾಟಲಿಯಲ್ಲಿ ತಲೆಗೆ ಹಲ್ಲೆ ನಡೆಸಿದ್ದಾನೆ. ಗಾಯಾಳು ಮಂಜುನಾಥ್ ನನ್ನು ಸ್ಥಳೀಯರು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ…

Read Full News

ಸಾಗರ ಸಮೀಪದ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಂಡ ಕಾಡು ಕೋಣಗಳು – ಭಯ ಭೀತರಾದ ಸ್ಥಳೀಯರು|wild corner

ಜನನಿಬಿಡ ಸ್ಥಳಗಳಲ್ಲಿ ಗುಂಪು ಗುಂಪಾಗಿ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಭಯಭೀತರಾದ ಘಟನೆ ಶಿವಮೊಗ್ಗ ಜಿಲ್ಲೆಯ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಲುಕೊಪ್ಪದ ಗ್ರಾಮದ ಭಾಗದಲ್ಲಿ ಹಿಂಡು‌ಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಅಧಿಕ ಭಯ ಹುಟ್ಟಿಸಿವೆ. ಏಕಾಏಕಿ 16 ಕಾಡುಕೋಣಗಳು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ಆತಂಕವನ್ನು ದುಪ್ಪಟ್ಟುಗೊಳಿಸಿವೆ.  ಕಾಡುಕೋಣಗಳು ಚಿರತೆ ಹುಲಿಯಷ್ಟು ಅಪಾಯಕಾರಿಯಾಗದೆ ಇದ್ದರೂ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿರುವ ಉದಾಹರಣೆಗಳಿದೆ. ಕಾಡುಕೋಣಗಳು ಗುಂಪು ಗುಂಪಾಗಿ ರಾಜರೋಷವಾಗಿ ಸುತ್ತಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯಭೀತರಾಗಿ ಅರಣ್ಯ ಇಲಾಖೆಯ ಗಮನಕ್ಕೆ…

Read Full News

ಅಕಾಲಿಕ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು : ಚಂದನ್ ಗೌಡ|jaya Karnataka

ರಿಪ್ಪನ್‌ಪೇಟೆ : ತಮಿಳುನಾಡಿನಲ್ಲಿ ಉಂಟಾಗಿರುವ ಚಂಡಮಾರುತದಿಂದ ಮಲೆನಾಡಿನ ರೈತ ಬದುಕು ಮೂರಾಬಟ್ಟೆಯಾಗಿದ್ದು ಈ ಗಂಭೀರ ಸಮಸ್ಯೆಯನ್ನು ಮಲೆನಾಡಿನ ಸಚಿವರು ಹಾಗೂ ಶಾಸಕರುಗಳು ಸರ್ಕಾರದ ಮುಂದಿಟ್ಟು ಮನದಟ್ಟು ಮಾಡಿ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕ್‌ ಅಧ್ಯಕ್ಷ ಚಂದನ್ ಗೌಡ ಹೇಳಿದ್ದಾರೆ. ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು  ತಮಿಳುನಾಡಿನಲ್ಲಿ ಎದ್ದಿರುವ ಮಂಡೋಸ್ ಚಂಡಮಾರುತ  ಕರುನಾಡಿಗೂ ಅಪಾಯ ಉಂಟು ಮಾಡುತ್ತಿದೆ ಅಕಾಲಿಕ ಮಳೆಯ ಕಾರಣ ದಕ್ಷಿಣ ಒಳನಾಡು ಮತ್ತು ಬಹುಮುಖ್ಯವಾಗಿ ಮಲೆನಾಡು…

Read Full News

ರಿಪ್ಪನ್ ಪೇಟೆ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ – ಸರ್ಕಾರಿ ಶಾಲೆ ಶಿಕ್ಷಕ ಸೇರಿ ಇಬ್ಬರ ಬಂಧನ

ರಿಪ್ಪನ್‌ಪೇಟೆ : ಇತ್ತೀಚಿಗೆ ರಿಪ್ಪನ್ ಪೇಟೆ ಸುತ್ತಮುತ್ತಲಿನ ಮೂರು ದೇವಸ್ಥಾನಗಳಲ್ಲಿ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಲಿಂಗದೇವರಕೊಪ್ಪ ಸರ್ಕಾರಿ ಶಾಲೆಯ ಶಿಕ್ಷಕ ವಸಂತ್ ಕುಮಾರ್ ಹಾಗೂ ಗುಡ್ಡದೇವರನಳ್ಳಿ ಗ್ರಾಮದ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೋಕಿ ಜೀವನ ನಡೆಸಲು ಕಳೆದ ಮೂರು ವರ್ಷಗಳಿಂದ ಕಳ್ಳತನ ನಡೆಸುತಿದ್ದ ಇವರು ಒಮ್ಮೆಯು ಸಿಕ್ಕಿಬಿದ್ದಿರಲಿಲ್ಲ. ಆರೋಪಿತರು ಕಳೆದ 3-4 ವರ್ಷಗಳಿಂದ ಈ ರೀತಿಯ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು…

Read Full News

ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಟೊಯೋಟಾ ಫಾರ್ಚ್ಯೂನರ್ ಕಾರು ಪಲ್ಟಿ|Accident

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಸೂಡುರೂ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೊಯೋಟಾ ಫಾರ್ಚುನರ್ ಕಾರು ಪಲ್ಟಿಯಾದ ಘಟನೆ ನಡೆದಿದೆ. ಸೂಡೂರು ಗೇಟ್ ಬಳಿ ಚಾಲಕನು ಅತಿ ವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕುಂದಾಪುರ ಮೂಲದವರಾದ ಉದಯ್ ಕುಮಾರ್ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತಿದ್ದು ಮದುವೆ ಕಾರ್ಯಕ್ರಮದ ನಿಮಿತ್ತ ಕುಂದಾಪುರಕ್ಕೆ ಬಂದು ವಾಪಾಸ್ ತೆರಳುವಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಒಬ್ಬರಿಗೆ ಗಂಭೀರ ಗಾಯವಾಗಿದೆ.ಗಾಯಾಳುಗಳನ್ನು ಶಿವಮೊಗ್ಗದ…

Read Full News

ಹೊಸನಗರ ತಾಲೂಕಿನ ಮೆಸ್ಕಾಂ ಇಲಾಖೆಗೆ ಇನ್ನೆಷ್ಟು ಬಲಿ ಬೇಕು…!???? ಅಪಾಯದ ಮುನ್ಸೂಚನೆ ನೀಡಿದರು ಸಹ ಸಾವಿನ ಜಾತ್ರೆ ಮಾಡಲು ಹೊರಟ ಕೆಲ ಜಡ್ಡುಗಟ್ಟ ಅಧಿಕಾರಿಗಳು|Mescom

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದ ನಿವಾಸಿ ರೈತ ಶೇಷಗಿರಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ ಆದರೆ ಈ ದುರ್ಮರಣಕ್ಕೆ ನೇರವಾಗಿ ಮೆಸ್ಕಾಂ ಇಲಾಖೆಯ ಬಿಳಿಯಾನೆಯಂತಹ ಜಡ್ಡು ಹಿಡಿದ ಅಧಿಕಾರಿಗಳು ಹಾಗೂ ಕೆಲ ಸೋಮಾರಿ ಸಿಬ್ಬಂದಿಗಳೇ ನೇರ ಹೊಣೆ. ಇಂದು ಬೆಳಿಗ್ಗೆ ಶೇಷಗಿರಿ ಮೂರು ಬಾರಿ ಕರೆ ಮಾಡಿ ನೀಡಿದ್ದ ದೂರನ್ನು ಮನ್ನಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಲ್ಲಿ ಒಬ್ಬ ಅಮಾಯಕ ರೈತನ ಜೀವ ಉಳಿಸಬಹುದಿತ್ತಲ್ಲವೇ,ವಿದ್ಯುತ್ ತಂತಿ ನೆಲದ ಮೇಲೆ ಬಿದ್ದರೂ fuse ಯಾಕೆ ಕೆಲಸ ನಿರ್ವಹಿಸಿಲ್ಲ..???? ಅದು…

Read Full News

ಅಧಿಕಾರಕ್ಕಿಂತ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯೇ ನನ್ನ ಮೊದಲ ಆದ್ಯತೆ – ಆರ್ ಎನ್ ಮಂಜುನಾಥ್ ಗೌಡ|RMM

ತೀರ್ಥಹಳ್ಳಿ : ಸಹಕಾರಿ ಕ್ಷೇತ್ರದಲ್ಲಿ ಮಂಜುನಾಥ್ ಗೌಡರ ಇನ್ನಿಂಗ್ಸ್ ಮುಗಿತು ಮಂಜುನಾಥ್ ಗೌಡರನ್ನು ಮುಗಿಸಿ ಬಿಟ್ವಿ ಅಂತ ಬಹಳ ಜನ ಎಂದು ಕೊಳ್ಳುತ್ತಾರೆ ಕನಸು ಕಾಣುತ್ತಾರೆ. ನಾವು ಕನಸು ಕಂಡರೆ ನನಸು ಆಗುವಂತಹ ಕನಸು ಕಾಣಬೇಕು.  ಡಿಸಿಸಿ ಅಥವಾ ಯಾವುದೇ ಸೊಸೈಟಿಯಲ್ಲಿ ಭಾಗಿಯಾಗಬೇಕಾದರೆ ಶಿವಮೊಗ್ಗದ ಟಿಎಪಿಸಿಎಂಎಸ್ ಅಲ್ಲಿ ಗೆದ್ದರೆ ಮಾತ್ರ. ಆದ್ದರಿಂದ ಅಲ್ಲಿ ಸೋಲಿಸಬೇಕೆಂದು ನಮ್ಮ ವಿರೋಧ ಪಕ್ಷದವರ ಆಸೆಗೆ ಅಲ್ಲಿನ ಜನರು ಸುಳ್ಳು ಮಾಡಿ ನನನ್ನು ಗೆಲ್ಲಿಸಿದರು. ಅಲ್ಲಿನ ಗೆಲುವಿನ ಮೂಲಕ  ಅಲ್ಲಿಂದ ನನ್ನ ಎರಡನೇ…

Read Full News

ಆಸ್ತಿಯಲ್ಲಿ ಪಾಲು ಕೊಡದೇ ಎರಡನೇ ಮದುವೆಯಾದ ಅಪ್ಪ – ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಮಕ್ಕಳು|Murder mystery

ಆಸ್ತಿಯಲ್ಲಿ ಪಾಲು ಕೊಡದೆ, ಎರಡನೇ ಮದುವೆಯಾಗಿ ಮಗು ಮಾಡಿಕೊಂಡ ಅಪ್ಪನನ್ನು ಮೂವರು ಮಕ್ಕಳೇ ಸುಪಾರಿ ಕೊಟ್ಟು ಕೊಲ್ಲಿಸಿದ ಘಟನೆ ಶಿಕಾರಿಪುರದಲ್ಲಿ ನಡೆದಿದೆ.  ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ. ನ. 29ರಂದು ಕೆಎಸ್‌ಆರ್‌ಪಿಯ ನಿವೃತ್ತ ಎಸ್‌ಐ ನಾಗೇಂದ್ರಪ್ಪ ಎಂಬವರ ಶವ ಚರಂಡಿಯಲ್ಲಿ ಸಿಕ್ಕಿತ್ತು. ಇವರು ಶಿರಾಳಕೊಪ್ಪದ ಬೋವಿ ಗ್ರಾಮದವರು. ಆಸ್ತಿ ವಿಚಾರದಲ್ಲಿ ಕೊಲೆ ಶಂಕಿಸಿದ್ದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬವರಿಂದ…

Read Full News

ವಿದ್ಯುತ್ ಸ್ಪರ್ಶದಿಂದ ಪತ್ನಿಯನ್ನು ರಕ್ಷಿಸಲು ಹೋದ ಪತಿ ಸಾವು – ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ರೈತನೊಬ್ಬನ ದುರ್ಮರಣ|Electric shock

ರಿಪ್ಪನ್‌ಪೇಟೆ : ವಿದ್ಯುತ್ ತಂತಿ ತುಳಿದು ರೈತನೋರ್ವ ಸಾವನ್ನಪ್ಪಿರುವ ಘಟನೆ ಇಲ್ಲಿನ ಸಮೀಪದ ನಂಜವಳ್ಳಿ ಗ್ರಾಮದಲ್ಲಿ  ನಡೆದಿದೆ. ಹರತಾಳು ಗ್ರಾಪಂ ವ್ಯಾಪ್ತಿಯ ಹರತಾಳು ಗ್ರಾಮದ ರೈತ ಶೇಷಗಿರಿ(45) ಮೃತ ದುರ್ದೈವಿಯಾಗಿದ್ದಾರೆ. ಇಂದು ಬೆಳಗ್ಗೆ ಮನೆಯ ಬಳಿ ಶೇಷಗಿರಿ ರವರ ಪತ್ನಿ ಹೂ ಕೀಳಲು ಹೋದಾಗ ಅವರಿಗೆ ವಿದ್ಯುತ್ ಸ್ಪರ್ಶಿಸಿ ಕೂಗಿದ್ದಾರೆ ಕೂಡಲೇ ಅವರನ್ನು ರಕ್ಷಿಸಲು ಹೋದ ಶೇಷಗಿರಿ ರವರು ಪಾದರಕ್ಷೆ ಧರಿಸದೆ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ಮೂಲತಃ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ಒಡ್ಡಿನಬೈಲು ನಿವಾಸಿಯಾದ ಇವರು…

Read Full News

ಪೋಟೋ ಕ್ಲಿಕ್‌ ಮಾಡುವಾಗ ಹೃದಯಾಘಾತದಿಂದ ಫೋಟೋಗ್ರಾಫರ್ ಸಾವು|photographer

ಸಾಗರ ನಗರದ ವೃತ್ತಿನಿರತ ಫೋಟೊಗ್ರಾಫರ್ ಒಬ್ಬರು ಕಾರ್ಯಕ್ರಮವೊಂದರಲ್ಲಿ ಫೋಟೊ ತೆಗೆಯುತ್ತಿರುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೈಲಿನ ಸೋಮೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಈ ಘಟನೆ ನಡೆದಿದ್ದು ಇಲ್ಲಿನ ರಾಮನಗರದ ನಿವಾಸಿ ಚಂದ್ರು (42) ಮೃತ ದುರ್ದೈವಿ. ಕಾರ್ಯಕ್ರಮದಲ್ಲಿ ಫೋಟೊ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದಿದ್ದರು. ನಗರದ ಶಿಲ್ಪ ಸ್ಟುಡಿಯೋ ಮಾಲೀಕರಾಗಿದ್ದ…

Read Full News

ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು|Athletic

ರಿಪ್ಪನ್‌ಪೇಟೆ : ಅಥ್ಲೆಟಿಕ್ಸ್ 17 ವರ್ಷದೊಳಗಿನ ವಿಭಾಗದಲ್ಲಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳಾದ ನಿತೀಶ್ ಟಿ ,ನಿತಿನ್ ಟಿ ,ಆಯುಷ್ ಎಸ್ ಆರ್ ಮತ್ತು ಅರ್ಜುನ್ 4*100 ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ  ಕ್ರೀಡಾಕೂಟದಲ್ಲಿ…

Read Full News

ತಾಳಗುಪ್ಪ – ಮೈಸೂರು ರೈಲು ಹತ್ತುವಾಗ ಜಾರಿ ಕೆಳಗೆ ಬಿದ್ದ ಪ್ರಯಾಣಿಕ : ಕರ್ತವ್ಯ ಪ್ರಜ್ಞೆ ಮೆರೆದ ರೈಲ್ವೆ ಸಿಬ್ಬಂದಿಗಳು -ಸಿಸಿಟಿವಿ ವೀಡಿಯೋ ವೈರಲ್|Train

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಮೈಸೂರು ತಾಳಗುಪ್ಪ ರೈಲು ಹತ್ತುವಾಗ ಪ್ರಯಾಣಿಕನೋರ್ವ ಸ್ಲಿಪ್ ಆಗಿ ಕೆಳಗೆ ಬಿದ್ದ ಘಟನೆ ನಡೆದಿದ್ದು ಈ ಘಟನೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಯಾಣಿಕರು ಕೆಳಗೆ ಬೀಳುವುದನ್ನ ಗಮನಿಸಿದ ರೈಲ್ವೆ ಆರ್ ಪಿ ಎಫ್ ನ ಸಿಬ್ಬಂದಿ ಮಂಜುನಾಥ್ ಮತ್ತು ಅಣ್ಣಪ್ಪ ಅವರನ್ನ ರಕ್ಷಿಸಿದ್ದಾರೆ. ನಂತರ ಸಾರ್ವಜನಿಕರು ಸಹ ಸಿಬ್ವಂದಿಗಳ ಜೊತೆ ಕೈಜೋಡಿಸಿದ್ದಾರೆ. ಈ ವಿಡಿಯೋವನ್ನ ಟ್ವೀಟರ್ ನಲ್ಲಿ ಆರ್ ಪಿ ಎಫ್ ಮೈಸೂರು ವಿಭಾಗದ ರೈಲ್ವೆಯವರು ಪೋಸ್ಟ್ ಮಾಡಿದ್ದಾರೆ. ನಿನ್ನೆ…

Read Full News

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ – ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವು,ಓರ್ವ ಗಂಬೀರ|Accident

ಲಾರಿ ಮತ್ತು ಬೊಲೇನೋ ಕಾರಿನ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಬೊಲೆನೋ ವಾಹನದಲ್ಲಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಮೂವರು ದಾವಣಗೆರೆಯ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.   ಶಿವಮೊಗ್ಗದ ಸವಳಂಗ ರಸ್ತೆಯ ಕಲ್ಲಾಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗದಿಂದ ದಾವಣಗೆರೆ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಶಿವಮೊಗ್ಗ ಕಡೆಗೆ ಬರುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಸಾವು ಕಂಡವರನ್ನ ಕಾರ್ತಿಕ್, ಮೋಹನ್ ಮತ್ತು ವಿವೇಕ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ಬೊಲೆನೋ ವಾಹನವನ್ನು ಚಲಾಯಿಸುತ್ತಿದ್ದನು ಎಂದು…

Read Full News

ಯೋಗ ಪ್ರಶಸ್ತಿ ಪಡೆದ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು|GFGCC

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶಿವಮೊಗ್ಗ ದಲ್ಲಿ ನಡೆದ ಕುವೆಂಪು ವಿಶ್ವವಿದ್ಯಾನಿಲಯ ಮಟ್ಟದ ಯೋಗ ಪಂದ್ಯಾವಳಿಯಲ್ಲಿ  ಭಾಗವಹಿಸಿ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳು ತೃತೀಯ ಚಾಂಪಿಯನ್ ಪಟ್ಟ ಪಡೆದು ಕೊಂಡಿದ್ದಾರೆ . ಕಾಲೇಜಿನ ವಿದ್ಯಾರ್ಥಿಗಳಾದ ಕಾರ್ತಿಕ್. ಎನ್. ಜಿ, ಉಜ್ವಲ್. ಎಂ, ಮುಸ್ತಾಫ ಎಂ, ನಂದನ್ ಕುಮಾರ್, ಅಭಿಷೇಕ್, ಮೇಘ. ಎನ್ ಕೆ, ಸನು ಜೆ, ಶೈಲಜಾ. ಜೆ. ಎಂ, ಸಂಧ್ಯಾ. ಹೆಚ್. ಎ, ಜಯಶ್ರೀ. ಹೆಚ್. ಎಸ್, ರವರಿದ್ದ…

Read Full News

ಸೇವಾ ಕಾರ್ಯ ಜನಮಾನಸದಲ್ಲಿ ಉಳಿಯುವಂತಾಗಲು ಸದಾ ಶ್ರಮಿಸಬೇಕು : ಡಾ ಜಿ ಡಿ ನಾರಾಯಣಪ್ಪ|Ripponpet

ರಿಪ್ಪನ್‌ಪೇಟೆ : ಮನುಷ್ಯನ ಹುಟ್ಟು- ಆಕಸ್ಮಿಕ ಸಾವು ನಿಶ್ಚಿತ ಈ ಮಧ್ಯದಲ್ಲಿನ ಬದುಕು ಜನಮಾನಸದಲ್ಲಿ ಉಳಿಯವಂತಾಗಲು ಸದಾ ಶ್ರಮಿಸುವಂತಾಗಬೇಕು ಅಂತಹ ಕಾರ್ಯದಲ್ಲಿ ಜಿ.ಆರ್.ಕೆ.ಮೂರ್ತಿ ಜನಸೇವಾ ಕಾರ್ಯ ಪ್ರಶಂಸನೀಯವೆಂದು ವೈದ್ಯರತ್ನ, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ಹೇಳಿದರು. ಪಟ್ಟಣದ ಜಿ.ಆರ್.ಕೆ.ಮೂರ್ತಿ ಸೇವಾ ಟ್ರಸ್ಟ್ ಗೆಳೆಯರ ಬಳಗ ಇವರ ಸಹಯೋಗದಲ್ಲಿ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಅಯೋಜಿಸಲಾದ ಅಭಿನಂದನಾ ಮಹೋತ್ಸವ ಮತ್ತು ನಗೆಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಸ್ವಾರ್ಥ ಮನೋಭಾವನೆಯಿಂದಾಗಿ ನಮ್ಮ ತನವನ್ನು ಮರೆಯುವಂತಾಗಿದೆ. ಸಂಬಂಧಗಳಿಂದಲೂ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.