ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಅಬ್ಬಿಫಾಲ್ಸ್ ನಲ್ಲಿ ಈಜಲು ಹೋದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ಶಬರಿ ಹೋಟೆಲ್ ಮಾಲೀಕರ ಮಗ ರಿಷಬ್ (20) ಮೃತಪಟ್ಟ ಯುವಕನೆಂದು ತಿಳಿದುಬಂದಿದೆ.
ಸಹ್ಯಾದ್ರಿ ಪಾಲಿಟೇಕ್ನಿಕ್ ನಲ್ಲಿ ಓದುತ್ತಿದ್ದ ರಿಷಬ್ ಇಂದು ಪರೀಕ್ಷೆ ಮುಗಿಸಿಕೊಂಡು ತನ್ನ ಇಬ್ಬರು ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್ ಗೆ ಈಜಲು ತೆರಳಿದ್ದಾರೆ.
ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಮೃತದೇಹವನ್ನು ಶೋಧ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹ ಶೋಧ ಕಾರ್ಯಾಚರಣೆಯ ವೀಡಿಯೋ ಇಲ್ಲಿದೆ