WhatsApp Channel Join Now
Telegram Channel Join Now
ಭಾನುವಾರ ರಾಮನಗರದಲ್ಲಿ ಆಕಸ್ಮಿಕ ನೀರಿಗೆ ಬಿದ್ದು ನಿಧನರಾಗಿದ್ದ ಪ್ರಸನ್ನ ಆರ್ ಭತ್ ರವರ ಮನೆಗೆ ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ.ವೈ ರಾಘವೇಂದ್ರರವರು ಭೇಟಿ ನೀಡಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.




ಪ್ರಸನ್ನ ಆರ್ ಭಟ್‌ರವರು ತುಂಬಾ ಸ್ವಾಭಿಮಾನಿ. ನನ್ನ ಜೊತೆಗೆ 3 ವರ್ಷಗಳಿಂದ ಛಾಯ ಗ್ರಾಹಕನಾಗಿದ್ದುಕೊಂಡು ನನಗೆ ಅರ್ಧದಷ್ಟು ಕೆಲಸವನ್ನು ಕಡಿಮೆ ಮಾಡುತಿದ್ದ ಅವರ ಅಗಲಿಕೆಯಿಂದ ತುಂಬಾ ದುಃಖವಾಗಿದೆ. ನಮ್ಮ ಕುಟುಂಬಕ್ಕೆ ಮನೆ ಮಗನಾಗಿ ಎಲ್ಲರೊಂದಿಗೂ ತಮ್ಮ ಸಂತೋಷದಿಂದ ಕೆಲಸ ನಿರ್ವಹಿಸುತ್ತಿದ್ದವರು ಏಕಾಏಕಿ ಈ ರೀತಿ ದುರ್ಮರಣ ಹೊಂದಿದ್ದಾರೆ ಎಂದರೆ ನಂಬಲು ಅಸಾಧ್ಯವಾಯಿತು. ನೀವು ಯಾವ ರೀತಿ ಮನೆ ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದಿರೊ ಅದೇ ಅನುಭಾವ ನಮಗೆ ಆಗಿದೆ ಎಂದರು.


 ನಮ್ಮ ಜೊತೆಗೆ ಇಷ್ಟು ವರ್ಷ ಕೆಲಸ ಮಾಡಿದರೂ ಎಂದಿಗೂ ತಮ್ಮ ಕುಟುಂಬವದರ ಬಗ್ಗೆ ಹೇಳಿಲ್ಲ ಹಾಗೂ ಒಂದು ಕೆಲಸವನ್ನು ಮಾಡಿಸಿಕೊಂಡಿಲ್ಲ. ಈತ ಇಷ್ಟು ಜನ ಸಂಪಾದನೆ ಮಾಡಿದ್ದಾರೆ ಎಂದರೇ ನಂಬಲು ಅಸಾಧ್ಯವಾಗಿದೆ. ಇಂಥಹ ಯುವಕನಿಗೆ ಇಂಥಹ ಸಾವು ಸರಿಯಲ್ಲ. ಯಾರೇ ಆಗಲಿ ಬೆಂಕಿ, ನೀರು ಗಾಳಿಯೊಂದಿಗೆ ಹುಡುಗಾಟ ಮಾಡಲು ಹೋಗಬಾರದು ಇವುಗಳ ಮುಂದೇ ನಾವೆಲ್ಲರೂ ನಶ್ವರ. ನಿಮಗೆ ಸಾಂತ್ವನ ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ನಿಮ್ಮ ದುಃಖ ಸಾಂತ್ವನದಿಂದ ಕಡಿಮೆಯಾಗದು. ಆದರೂ ಆ ದೇವರು ನಿಮಗೆ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಬಹುದು ಎಂದು ಹೇಳಿದರು.




ಸುಮಾರು 26ರ ವಯಸ್ಸಿನಲ್ಲಿಯೇ ಬಿಜೆಪಿ ಭಜರಂಗದಳ, ಆರ್.ಎಸ್.ಎಸ್ ಹಿಂದೂ ಪರ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು ಇಷ್ಟು ಜನರನ್ನು ಸಂಪಾದನೆ ಮಾಡಿರುವ ಪ್ರಸನ್ನ ಭಟ್‌ರವರ ಹೆಸರಿನಲ್ಲಿ ಹೊಸನಗರದಲ್ಲಿ ಯೂತ್ ಐಕಾನ್ ಸ್ಮರಣಿಕೆ ಬಿಡುಗಡೆ ಮಾಡುವ ಬಗ್ಗೆ ಚಿಂತಿಸುತ್ತಿದು ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರಸನ್ನ ಭಟ್ ಕುಟುಂಬದ ದೊಡ್ಡಪ್ಪ ಕೃಷ್ಣಮೂರ್ತಿ ಭಟ್, ಚಿಕ್ಕಪ್ಪ ವೇಣುಗೋಪಾಲ್ ಹಾಗೂ ಸಂಪೂರ್ಣ ಕುಟುಂಬ ವರ್ಗ, ಅಂಬೇಡ್ಕರ್ ನಿಗಮದ ನಿರ್ದೆಶಕ ಎನ್.ಆರ್. ದೇವಾನಂದ್, ಬಿಜೆಪಿ ಹಿರಿಯರಾದ ಉಮೇಶ್ ಕಂಚುಗಾರ್, ಎ.ವಿ.ಮಲ್ಲಿಕಾರ್ಜುನ, ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಶ್ರೀಪತಿರಾವ್, ಎನ್ ಶ್ರೀಧರ ಉಡುಪ, ಯುವರಾಜ್, ಮಂಡಾನಿ ಮೋಹನ್, ಸುರೇಶ್ ಸ್ವಾಮಿರಾವ್, ಪ್ರಹ್ಲಾದ, ಸುಧೀಂದ್ರ ಪಂಡಿತ್, ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪ್ರಸನ್ನ ಭಟ್‌ರವರ ಅಭಿಮಾನಿಗಳು, ಸ್ನೇಹಿತರು ಇನ್ನೂ ಮುಂತಾದವರು ಇದ್ದರು.



Leave a Reply

Your email address will not be published. Required fields are marked *