ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ – ರಿಪ್ಪನ್ ಪೇಟೆ ಪಿಯು ಕಾಲೇಜಿಗೆ ಪ್ರಥಮ ಸ್ಥಾನ
ರಿಪ್ಪನ್ ಪೇಟೆ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್ ವಾಲಿಬಾಲ್ ತಂಡ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರೋಲಿಂಗ್ ಕಪ್ ಪಡೆದಿರುತ್ತಾರೆ.
ಶಿವಮೊಗ್ಗದ ಪ್ರಖ್ಯಾತ ಯುನೈಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ.) ಸಂಸ್ಥೆಯು ಖ್ಯಾತ ರಾಷ್ಟ್ರೀಯ ವಾಲಿಬಾಲ್ ಆಟಗಾರ ದಿ. “ಸರ್ದಾರ್ ಜಾಫರ್” ಅವರ ಸ್ಮರಣಾರ್ಥ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ “ಪದವಿ ಪೂರ್ವ ಕಾಲೇಜು”ಗಳ “ಹೊನಲು-ಬೆಳಕಿನ” “ವಾಲಿಬಾಲ್ ಫೈನಲ್ ಪಂದ್ಯದಲ್ಲಿ ರಿಪ್ಪನ್ ಪೇಟೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಡಿ.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ರಿಪ್ಪನ್ ಪೇಟೆ ಕಾಲೇಜಿನ ವಿದ್ಯಾರ್ಥಿಗಳು ಜಯಶಾಲಿಗಳಾದರು.
ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳಾದ ಚಂದನ್ ಕೆ ರಾವ್ , ನೂತನ್ ಹೆಚ್ ಸಿ ,ಆದರ್ಶ್ ಎಸ್ , ಸುಶೀಲ್ ಎಸ್ ಪವಾರ್ , ರೋಹನ್ ಹೆಚ್ ಎಲ್ , ಶ್ರೇಯಸ್ ಎಸ್ ,ಶ್ರೇಯಸ್ ರಾಜ್ ಅಧ್ಬುತ ಪ್ರದರ್ಶನ ನೀಡಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕಾಲೇಜಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕ ಹಾಗೂ ಎಂ ಎಸ್ ಐ ಎಲ್ ಅಧ್ಯಕ್ಷ ಹರತಾಳು ಹಾಲಪ್ಪ. ಸದಸ್ಯ ರಾದ ನೆವಟೂರು ದೇವೇಂದ್ರಪ್ಪ ಗೌಡ, ಸುರೇಶ್ ಸಿಂಗ್,ಶಿವಾನಂದಪ್ಪ ಕಾಲೇಜಿನ ಪ್ರಾಚಾರ್ಯ ಎ.ಮಂಜುನಾಥ್, ಕ್ರೀಡಾ ಸಂಚಾಲಕ ಹಾಗೂ ಉಪನ್ಯಾಸಕ ಸುಬ್ರಹ್ಮಣ್ಯ. ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
ಮುಂದಿನ ದಿನಗಳಲ್ಲಿ ಯುವ ಪ್ರತಿಭೆಗಳು ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಸಾಧನೆ ತೋರಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಸಂಸ್ಥೆಯ ಆಶಯ….