ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕ್ ಘಟಕ ಹಾಗೂ ಬ್ರಹ್ಮೇಶ್ವರ ವೀರಭದ್ರೇಶ್ವರ ಸೇವಾ ಸಮಿತಿಯವರು ಜನವರಿ 8 ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮೇಶ್ವರದ ವೀರಶೈವ ಸಭಾಭವನದಲ್ಲಿ ದಣಿವರಿಯದ ಜನನಾಯಕ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಅಖಿಲಾ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಬಿ.ಯುವರಾಜ್ ತಿಳಿಸಿದರು.
ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಸನ್ಮಾನ ಸಮಾರಂಭದ ದಿವ್ಯಸಾನಿಧ್ಯವನ್ನು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸುವರು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಸಮ್ಮುಖ ವಹಿಸುವರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಜಬಗೋಡು ಹಾಲಪ್ಪಗೌಡ್ರು, ಹೊಸನಗರ ತಾಲ್ಲೂಕು ಅ.ಭಾ.ವೀ.ಲಿಂ. ಮಹಾಸಭಾ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ, ಜಯಶೀಲಪ್ಪಗೌಡ ಹರತಾಳು, ಕೆ.ಎಸ್.ಬಸಪ್ಪಗೌಡ, ಕಲ್ಯಾಣಪ್ಪಗೌಡ ಹೆಬೈಲ್, ಚನ್ನಬಸಪ್ಪಗೌಡ ಬ್ರಹ್ಮೇಶ್ವರ, ಜಿ.ಜಿ.ಚಂದ್ರಮೌಳಿಗೌಡರ, ಜಿ.ಎಸ್.ಸುಧೀರ್, ವಸವೆ ಈಶ್ವರಪ್ಪಗೌಡ, ತೀರ್ಥೇಶ್ ಹೆಚ್.ಆರ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಯಶೋಧ ಈಶ್ವರಪ್ಪ ಗವಟೂರು ಭಾಗವಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮೇಶ್ವರ ಚನ್ನಬಸಪ್ಪಗೌಡ, ಕೆ.ಎಂ, ವಸವೆ ಈಶ್ವರಪ್ಪಗೌಡ ಹಾಜರಿದ್ದರು.