WhatsApp Channel Join Now
Telegram Channel Join Now
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸುಗಮ ವಾಹನಗಳ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸನಗರ ಸಿಪಿಐ ಗಿರೀಶ್ ಬಿ ಸಿ ಹಾಗೂ ಪಿಎಸ್ ಐ ಶಿವಾನಂದ ಕೆ ನೇತ್ರತ್ವದಲ್ಲಿ ನೂತನ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. 

ಪಟ್ಟಣದಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಚಾರ ಸುವ್ಯವಸ್ತೆ ಕೈಗೊಳ್ಳಲು ಸಾರ್ವಜನಿಕರ ಹಿತ ದಷ್ಠಿಯಿಂದ ವಾಹನ ನಿಲುಗಡೆಗಾಗಿ ಪೊಲೀಸ್ ಇಲಾಖೆ ನೂತನ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ.




ಪಟ್ಟಣದ ನಾಲ್ಕು ರಸ್ತೆಯ ಎರಡೂ ಬದಿಗಳಲ್ಲಿ ದಿನ ಬಿಟ್ಟು ದಿನ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದ್ದು,ಒಂದು ದಿನ ರಸ್ತೆ ಎಡ ಬದಿಯಲ್ಲಿ ಇನ್ನೊಂದು ದಿನ ಬಲ ಬದಿಯಲ್ಲಿ ಪಾರ್ಕಿಂಗ್ ಮಾಡಬೇಕು.ಇನ್ಮುಂದೆ ಪಾರ್ಕಿಂಗ್ ವ್ಯವಸ್ಥೆ ಪಾಲಿಸದಿದ್ದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ವಾಹನ ಮಾಲೀಕರು ದಂಡ ಪಾವತಿಸಿ ತಮ್ಮ ವಾಹನವನ್ನು ಬಿಡಿಸಿಕೊಂಡು ಹೋಗಬೇಕಾಗುತ್ತದೆ.

ಈ ಮೊದಲು ಪಟ್ಟಣದ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡಲಾಗುತ್ತಿತ್ತು. ಈಗ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಿರುವುದರಿಂದ ಜನರಿಗೆ ಮತ್ತು ರಸ್ತೆಯಲ್ಲಿ ಓಡಾಡುವ ಇತರೆ ವಾಹನಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.




ಪಟ್ಟಣದಲ್ಲಿ ನಾಲ್ಕು ರಸ್ತೆಗಳಲ್ಲಿ ನೂತನ ಪಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಒಂದು ದಿನ ರಸ್ತೆ ಎಡ ಬದಿಯಲ್ಲಿ ಇನ್ನೊಂದು ದಿನ ಬಲ ಬದಿಯಲ್ಲಿ ಪಾರ್ಕಿಂಗ್ ಮಾಡಬೇಕು.ತಪ್ಪಿದ್ದರೆ ದಂಡ ಬೀಳುವುದು ಖಚಿತ ಹೀಗಾಗಿ ವಾಹನ ಮಾಲೀಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.

ಪಟ್ಟಣದ ನಾಲ್ಕು ರಸ್ತೆಗಳಲ್ಲಿನ ಅಂಗಡಿಗಳ ಮಾಲೀಕರು ಪೊಲೀಸ್ ಇಲಾಖೆಯ ಜೊತೆ ಕೈಜೋಡಿಸಿ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ವಾಹನ ಚಾಲಕರಿಗೆ ಮನವರಿಕೆ ಮಾಡಿಕೊಟ್ಟಲ್ಲಿ ಆದಷ್ಟು ಬೇಗ ನೂತನ ಪಾರ್ಕಿಂಗ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬಹುದಾಗಿದೆ.



Leave a Reply

Your email address will not be published. Required fields are marked *