ಮನೆಯಲ್ಲಿ ಯಾರೂ ಇಲ್ಲದ ವೇಳೆ ಎಗ್ಸಾಸ್ಟ್ ಫ್ಯಾನ್ ಮುರಿದು ಒಳ ನುಗ್ಗಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಒಟ್ಟು 8 ಮನೆ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಚಿನ್ನಾಭರಣ ಸೇರಿ 7.77 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದ ಅಣ್ಣಾನಗರ 1ನೇ ಅಡ್ಡರಸ್ತೆಯ ನಿವಾಸಿ ಸದ್ದಾಂ (31) ಬಂಧಿತ.
ನ.28ರಂದು ಬಸವರಾಜಪ್ಪ ಅವರು ಪತ್ನಿಯೊಂದಿಗೆ ತಮ್ಮ ತೋಟಕ್ಕೆ ತೆರಳಿದ್ದರು. ಡಿ.2ರಂದು ಮರಳಿ ಬಂದಾಗ ಮನೆ ಬಾಗಿಲು ಹಾಕಿದಂತೆಯೆ ಇತ್ತು. ಬೆಡ್ ರೂಂಗೆ ಹೊದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪರಿಶೀಲಿಸಿದಾಗ ಎಗ್ಸಾಸ್ಟ್ ಫ್ಯಾನ್ ಮುರಿದು ಯಾರೋ ಒಳಗೆ ಪ್ರವೇಶ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸದ್ದಾಂನನ್ನು ಬಂಧಿಸಿದ್ದಾರೆ.
ದೊಡ್ಡಪೇಟೆ ಠಾಣೆ ಪೊಲೀಸರು ಸದ್ದ್ದಾಂನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ 8 ಮನೆಗಳ್ಳತನ ಪ್ರಕರಣ ಬಾಯಿಬಿಟ್ಟಿದ್ದಾನೆ. ಬಂಧಿತನಿಂದ 7.22 ಲಕ್ಷ ರೂ. ಮೌಲ್ಯದ 144.50 ಗ್ರಾಂ ತೂಕದ ಚಿನ್ನಾಭರಣ, 21,700 ರೂ. ಮೌಲ್ಯದ 310 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ಒಂದು ಮೊಬೈಲ್ ಫೋನ್, ಒಂದು ವಾಚ್, 2 ಟಿವಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 7.77 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ದೊಡ್ಡಪೇಟೆ ಪಿಐ ಅಂಜನ್ ಕುಮಾರ್, ಪಿಎಸ್ಐ ವಂಸತ್, ಮಪಿಎಸ್ಐ, ಮಂಜಮ್ಮ,ಪ್ರೊ ಪಿಎಸ್ಐ ಕೃಷ್ಣಕುಮಾರ್ ಮಾನೆ, ಸೈಲ್ ಕೆಂಚಣ್ಣವರ್, ಎಎಸ್ಐ ಚಂದ್ರಶೇಖರ್ ಸಿಬ್ಬಂಧಿಗಳಾದ ಹೆಚ್.ಸಿ ಪಾಲಾಕ್ಷನಾಯ್ಕ್ ಮತ್ತು ಸಿ.ಪಿ.ಸಿ ಗುರುನಾಯ್ಕ್, ಶಶಿಧರ್ ಸಿ, ಚಂದ್ರಾನಾಯ್ಕ್, ಮನೋಹರ್, ನಿಥಿನ್, ರಮೇಶ್ ಒಳಗೊಂಡ ತಂಡ ಪ್ರಕರಣವನ್ನ ಬೇಧಿಸಿದೆ.