POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರದ ಯುವಕ ಪ್ರಸನ್ನ ರಾಮನಗರದಲ್ಲಿ ನೀರುಪಾಲು – ತೀವ್ರ ಶೋಧ ಕಾರ್ಯಾಚರಣೆ|prasanna

ಹೊಸನಗರ ಮೂಲದ ಯುವಕನೊಬ್ಬ ರಾಮನಗರ ಜಿಲ್ಲೆಯ ಕನಕಗಿರಿ ಬಳಿಯ ಕೆರೆಯಲ್ಲಿ ನೀರುಪಾಲಾಗಿರುವ ಘಟನೆ ನಡೆದಿದೆ.




ಹೊಸನಗರ ಟೌನ್ ನಿವಾಸಿ ಪ್ರಸನ್ನ ಭಟ್ ನೀರುಪಾಲಾಗಿರುವ ವ್ಯಕ್ತಿಯಾಗಿದ್ದಾರೆ.


ಇಂದು ರಾಮಗನಗರದ ಜಿಲ್ಲೆಯ ಕನಕಗಿರಿಯ ಕೆರೆಗೆ ಸಹೋದರ ಕೌಶಿಕ್ ಜೊತೆ ಈಜಲು ತೆರಳಿದ್ದರು.ಈ ಸಂಧರ್ಭದಲ್ಲಿ ಈ ಅವಘಡ ನಡೆದಿದೆ.

ಅಗ್ನಿಶಾಮಕ ದಳದಿಂದ ತೀವ್ರ ಶೋಧಕಾರ್ಯ ಮುಂದುವರೆದಿದೆ. ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ ವೈ ರಾಘವೇಂದ್ರ ರವರ ನೆಚ್ಚಿನ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಸಂಸದರು ಸಂಸತ್ ಇರುವ ಕಾರಣ ಕ್ಷೇತ್ರದಲ್ಲಿ ಇಲ್ಲದೇ ಇರುವುದರಿಂದ ಪ್ರವಾಸ ಕೈಗೊಂಡಿದ್ದರು.




ರಾಮೇಶ್ವರಕ್ಕೆ ಹೊರಟಿದ್ದ ಪ್ರಸನ್ನ ಸಮಯವಿದ್ದ ಕಾರಣ ಸಹೋದರನ ಮನೆ ರಾಮನಗರದ ಕನಕಗಿರಿಗೆ ಹೋಗಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.