ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾವತಿತೂರು ಕೆರೆಯಲ್ಲಿ ಈಜು ಹೊಡೆಯಲು ಹೋಗಿ ನೀರುಪಾಲಾಗಿದ್ದ ಪ್ರಸನ್ನ ಭಟ್ (26) ಮೃತ ದೇಹ ಪತ್ತೆಯಾಗಿದೆ.
ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಭಟ್ ಹೊಸನಗರ ಪಟ್ಟಣದ ಗಣಪತಿ ದೇವಸ್ಥಾನದ ಅರ್ಚಕ ರೇಣುಭಟ್ ರವರ ಪುತ್ರ.
ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದ ಪ್ರಸನ್ನ ಭಟ್ ಕೆರೆಗೆ ಈಜಲು ತೆರಳಿ ನೀರುಪಾಲಾಗಿದ್ದ.ರಾಮೇಶ್ವರಕ್ಕೆ ಹೊರಟಿದ್ದ ಪ್ರಸನ್ನ ಸಮಯವಿದ್ದ ಕಾರಣ ಸಹೋದರನ ಮನೆ ರಾಮನಗರದ ಕನಕಗಿರಿಗೆ ಹೋಗಿದ್ದರು.
ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಈ ಘಟನೆ ನಡೆದಿದೆ.
ಮೃತದೇಹದ ಮರಣೋತ್ತರ ಪರೀಕ್ಷೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.