Headlines

ರಿಪ್ಪನ್‌ಪೇಟೆ ಜಿಪಂ ಮತ್ತು ಹೊಸನಗರ ಜಿಪಂ ಕ್ಷೇತ್ರ ಮರುವಿಂಗಡಣೆ ಫ಼ುಲ್ ಕನ್ಫ್ಯೂಸ್ – ಪಟ್ಟಿ ಇಲ್ಲಿದೆ ನೋಡಿ|ZP

ರಿಪ್ಪನ್‌ಪೇಟೆ : ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕರಡು ಪ್ರಕಟಿಸಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು 31ಕ್ಕೆ ಸೀಮಿತಗೊಳಿಸಿದೆ. 2021ರಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗಿತ್ತು. ಆಗ 5 ಕ್ಷೇತ್ರಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತು. 

ಸದ್ಯ ರಿಪ್ಪನ್‌ಪೇಟೆ ಹಾಗೂ ಹೊಸನಗರ ಜಿಪಂ ಸೀಮಾ ಗಡಿ ಗೊಂದಲಮಯವಾಗಿದ್ದು ಎತ್ತಣ ಮಾಮರ ಎತ್ತಣದ ಕೋಗಿಲೆ ಎಂಬಂತೆ ರಿಪ್ಪನ್ ಪೇಟೆ ಜಿಪಂ ಕ್ಷೇತ್ರವು ಸಾಗರ ಸಮೀಪದ ಹೆಬ್ಬೈಲು ಗ್ರಾಮಕ್ಕೆ ತಗುಲಿಕೊಂಡಿದ್ದು ಹಾಗೇಯೆ ಹೊಸನಗರ ಜಿಪಂ ಕ್ಷೇತ್ರವು ರಿಪ್ಪನ್‌ಪೇಟೆ ಪಟ್ಟಣದ ಕೂಗಳತೆಯ ಕಾರಗೋಡು ಗ್ರಾಮಕ್ಕೆ ತಗುಲಿಕೊಂಡಿರುವುದು ರಾಜಕೀಯ ಪಂಡಿತರ ಲೆಕ್ಕಚಾರ ತಲೆಕೆಳಗಾಗಿಸಿದೆ.




ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರುಗಳು ಈ ಎರಡು ಜಿಪಂ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಗರಿಗರಿ ಖಾದಿ ಬಟ್ಟೆ ಧರಿಸಿ ಕ್ಷೇತ್ರದಲ್ಲಿ ನಡೆಯುತಿದ್ದ ಕ್ರೀಡಾಕೂಟಗಳು ,ಸಾಂಸ್ಕೃತಿಕ ಕಾರ್ಯಕ್ರಮಗಳು ,ಧಾರ್ಮಿಕ ಕಾರ್ಯಕ್ರಮಗಳನ್ನು ಸ್ವತಃ ತಾವೇ ಆಯೋಜಿಸಿ ಮದುವೆ,ಹುಟ್ಟುಹಬ್ಬ ನಾಮಕರಣದಂತಹ ಕಾರ್ಯಕ್ರಮಗಳಿಗೆ ಭೇಟಿ ನೀಡುವುದರ ಮೂಲಕ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿದ್ದರು.

ಈಗ ಸರ್ಕಾರ ಹೊರಡಿಸಿರುವ ಜಿಪಂ ಸೀಮಾ ಗಡಿ ಚುನಾವಣೆಗೆ ಸ್ಪರ್ಧಿಸುವ ಉತ್ಸುಕತೆಯಲ್ಲಿದ್ದ ಆಕಾಂಕ್ಷಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಒಟ್ಟಾರೆಯಾಗಿ ರಿಪ್ಪನ್‌ಪೇಟೆ ಹಾಗೂ ಹೊಸನಗರ ಜಿಪಂ ಕ್ಷೇತ್ರದ ಸೀಮಾ ಗಡಿ ವಿಂಗಡಣೆಯಲ್ಲಿ ಪ್ರಭಾವಿ ರಾಜಕಾರಣಿಗಳ ಹಸ್ತಕ್ಷೇಪವಿದೆ ಎಂಬುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತಿದ್ದಾರೆ. ಸ್ಪರ್ಧಿಸಬೇಕೆಂಬ ಆಕಾಂಕ್ಷೆಯಲ್ಲಿದ್ದ ಸ್ಪರ್ಧಿಗಳು ನೂತನ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ತಯಾರಿ ನಡೆಸುತಿದ್ದಾರೆ.

ಹೊಸನಗರ ತಾಲೂಕಿನ ಮೂರು ಜಿಪಂ ಕ್ಷೇತ್ರದ ಸೀಮಾ ಇಲ್ಲಿದೆ:


ರಿಪ್ಪನ್​ ಪೇಟೆ ಜಿಪಂ ಕ್ಷೇತ್ರ : 


ಬರುವೆ, ಗವಟೂರು, ಬೆನವಳ್ಳಿ, ಕೆರೆಹಳ್ಳಿ, ಮುಗುಟಿಕೊಪ್ಪ, ಅರಸಾಳು,ಹಾರೋಹಿತ್ತಲು, ಬಸವಾಪುರ, ತಮ್ಮಡಿಕೊಪ್ಪ, ಕೆಂಚನಾಲ, ಮಸರೂರು, ಗುಬ್ಬಿಗ, ಬೆಳ್ಳೂರು, ಕಳಸ, ದೊಬೈಲು, ಮಸ್ಕಾವಿ, ಕುಕ್ಕಳಲೆ, ನೇರಲಮನೆ, ಹಾಲುಗುಡ್ಡೆ, ಬಾಳೂರು, ಬೆಳಂದೂರು, ನವಟೂರು, ಹಿರೇಜೇನಿ, ಚಿಕ್ಕಜೇನಿ, ತಾರಿಗ, ಬಿಳಕಿ, ಹಿರೇಮೃತ, ಮುತ್ತಲ, ಹೊಸಳ್ಳಿ, ಆಲುವಳ್ಳಿ, ಮಾದಾಪುರ, ಪುರಪ್ಪೆಮನೆ, ಹಚ್.ಕಲ್ಲುಕೊಪ್ಪ ದೊಡ್ಡಬಿಳಗೋಡು, ಚಿಕ್ಕಬಿಳಗೋಡು, ಈಚಲಕೊಪ್ಪ, ಹೆಬೈಲು, ನಂದಿ, ಹಲುಸಾಲೆಮಳವಳ್ಳಿ, ಹರಿದ್ರಾವತಿ, ಹೆಚ್.ಹುಣಸವಳ್ಳಿ, ದೇವರ ಹೊನ್ನೇಕೊಪ್ಪ, ಅಮಚಿ ಬಿಲಗೋಡು, ಹೀಲಗೋಡು, ಆಲಗೇರಿಮಂಡಿ, ಬಾಣಿಗ, ಅಮಚಿ(ಬೆ), ಹರತಾಳು, ಕೆ.ಹುಣಸವಳ್ಳಿ, ನಂದಿಗ, ಮೆಣಸೆ, ದೊಂಬೆಕೊಪ್ಪ, ನಂಜವಳ್ಳಿ, ಕಾಳಶೆಟ್ಟಿ, ಶುಂಠಿಕೊಪ್ಪ

ಕಸಬಾ(ಹೊಸನಗರ) ಕ್ಷೇತ್ರ : 


ಎಂ. ಗುಡ್ಡೆಕೊಪ್ಪ, ಕಳೂರು, ಗೇರುಪುರ, ವರಕೋಡು, ಮಾವಿನಕೊಪ್ಪ,ಗಂಗನಕೊಪ್ಪ, ಮುಂಬಾರು, ದೇವರಸಲ್ಲಿಕೆ, ಬೇಹಳ್ಳಿ, ಮುತ್ತೂರು, ಸಾವಂತೂರು, ಹಿರಿಯೋಗಿ, ಮಳೂರು, ಜೇವಿ, ಹಳೇ ತೋಟ, ವೀರಭದ್ರಾಪುರ, ಹೊಳಗೋಡು, ಹೊಸಕೊಪ್ಪ, ಬಸವಾಪುರ, ಕೆ.ಹೊನ್ನಕೊಪ್ಪ, ಪಿ.ಕಲ್ಲುಕೊಪ್ಪ, ಚೂರ್ಡ, ನೀಲಕಂಠನತೋಟ, ಸಿಡಿಯಾಪುರ, ಮಸಗಲ್ಲಿ, ದುಮ್ಮ ಕಾಳಿಕಾಪುರ, ಮುಳುಗುಡ, ಮಜವಾನ, ಹೊಸಕಸರ, ಕಾನುಗೋಡು, ಕಚ್ಚಿಗೆಬೈಲು, ಅರಗೋಡಿ, ಗುಬ್ಬಿಗ, ನೆಲಗಳಲೆ, ತೋಟದಕೊಪ್ಪ, ಗುಡ್‌ಡಿ, ಮೇಲಿನಸಂಪಳ್ಳಿ, ಮಾರುತಿಪುರ, ಪುಣಜೆ (ಬ್ರಹ್ಮಶ್ವರ), ಹುಂಚ, ಹೊನ್ನಬೈಲು, ಆನೆಗದ್ದ, ನಾಗರಹಳ್ಳಿ, ಕಡಸೂರು, ಕೋಡೂರು, ಶಾಖವಳ್ಳಿ, ಕರಿಗೆರಸು, ಕೆ.ಕುನ್ನೂರು, ಯಳಗಲ್ಲು, ಹೆಚ್.ಕುನ್ನೂರು, ಕುಸುಗುಂಡಿ, ಕಾರಕ್ಕಿ, ಮಳಲಿಕೊಪ್ಪ, ತಳಲೆ, ಹಾರಂಬಳ್ಳಿ, ಮಳವಳ್ಳಿ, ಕಣಬಂದೂರು, ಕಾರಗೋಡು, ಕಗಚಿ, ವಡಾಹೊಸಳ್ಳಿ, ಮೂಗುಡಿ, ಕಲ್ಲೂರು, ಜಂಬಳ್ಳಿ, ಕಲ್ಲುಕೊಪ್ಪ, ಕೊಳವಳ್ಳಿ, ಅಮೃತ ಕಮ್ಮಚ್ಚಿ, ಬಿದರಹಳ್ಳಿ, ಹುಳಿಗದ್ದ, ಹಾಲಂದೂರು.





ನಗರ ಕ್ಷೇತ್ರ  : 


ಸಾಲಗೇರಿ, ಎಲ್.ಗುಡ್ಡೆಕೊಪ್ಪ, ಮಣಸಟ್ಟೆ, ಮಳಲಿ, ಟೆಂಕಬೈಲು, ಸುತ್ತಾ, ಹೆಚ್.ಹೊನ್ನೇಕೊಪ್ಪ, ಗೊರಗೋಡು, ಮೇಲಿನಬೆಸಿಗೆ, ವಸವ, ಸೊನಲೆ, ನಿವಣೆ, ಆದುವಳ್ಳಿ, ಬಿಳ್ಕೊಡಿ, ಬೋರಿಕೊಪ್ಪ, ವಾರಂಬಳ್ಳಿ, ಕೊಳಗಿ, ಈರಗೋಡು, ತಿಣಿವ, ತೊಗರೆ, ನಲ್ಲುಂಡೆ, ಕಲ್ಲುಡಿ ಅಬ್ಬಿಗಲ್ಲು, ಬಸವನಬ್ಯಾಣ, ಮೂಡುಗೊಪ್ಪ(ನಗರ), ಬೈಸೆ, ಕೊಡಸೆ, ಹಿಲ್ಕುಂಜಿ, ಕರಿಮನೆ, ಮಳಲಿ, ಕಿಳಂದೂರು-ಜಂಗಲ್, ಕೀಳಂದೂರು, ಕಾಡಿಗೇರಿ, ಕುಕ್ಕೊಡು ಅಗಸರಮನೆ, ಹನಿಯ, ಕಾರ್ಗಡಿ, ಬಾಳೆಕೊಪ್ಪ, ಕುಂಬತ್ತಿ, ರಾಮಚಂದ್ರಾಪುರ, ಅಂಡಗದೂರು, ರಾವೆ, ಕಬಳೆ, ಬೇಳೂರು, ಖೈರಗುಂದ, ನಿಡಗೋಡು, ಸುಳಗೋಡು, ಹುಮ್ಮಡಗಲ್ಲು, ಗಿಣಿಕಲ್, ಉಳಿಗ, ಗುಬ್ಬಿಗ, ವೀರತೊಟ್ಟಿಲು, ಕರಿಗಲ್, ಯಡೂರು, ಕವರಿ, ಕೊಳವಾಡಿ, ಕಟ್ಟೆಕೊಪ್ಪ, ಬೇಗದಾಳಿ, ಕೊರ್ನಕೋಟೆ, ನಾಗೋಡಿ, ಕೋಟೆಶಿರೂರು, ಹೆಬ್ಬಿಗೆಹೊಸನಾಡು, ಹಾರೋಎತ್ತಿಗೆ, ಜಾಲ, ಬೈದೂರು, ಕೆಸರೆ, ಕಲ್ನೋಡಿ(ಬೇ), ಬಡೇನಗರ(ಬೇ), ಹಗಟೂರು(ಬೇ), ಕಳಸೆ(ಬೆ), ಕುಡುವರಿ(ಬೆ), ಅಂಡಗೋಳಿ(ಬೆ), ಅಡಗಳಲೆ (ಬೆ), ಹೊಸಕೋಟೆ(ಬೇ), ಮಂಜಗಳಲೆ, ಅಡಗೋಡಿ, ಮಾಗೋಡು, ಹೊಸೂರು, ಮತ್ತಿಕೈ ಕಟ್ಟಿನಹೊಳೆ, ಅರಮನೆಕೊಪ್ಪ, ಬ್ರಾಹ್ಮಣತರುವೆ, ಬ್ರಾಹ್ಮಣವಾಡ, ಹೆಬ್ಬುರುಳಿ,

ನಿರ್ಣಯ ಆಯೋಗ ಪ್ರಕಟ ಮಾಡಿರುವ ಕ್ಷೇತ್ರಗಳು ಮತ್ತು ಸದಸ್ಯರ ಸಂಖ್ಯೆ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜ.16ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 
https://rdpr.karnataka.gov.in/rdc/public/ ವೆಬ್ ಸೈಟಿನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಲ್ಲದೆ ಖುದ್ದಾಗಿ ಅಂಚೆ ಮೂಲಕವು ಆಕ್ಷೇಪಣೆ ಅವಕಾಶ ಕಲ್ಪಿಸಲಾಗಿದೆ.



Leave a Reply

Your email address will not be published. Required fields are marked *