ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಭಾನುವಾರ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಸಂಸದ ಬಿ.ವೈ ರಾಘವೇಂದ್ರರವರ ಫೋಟೋಗ್ರಾಫರ್ ಪ್ರಸನ್ನ ಭಟ್ (26) ಪಾರ್ಥಿವ ಶರೀರ ಇಂದು ಸಂಜೆ 5 ಗಂಟೆಗೆ ಹೊಸನಗರ ಪಟ್ಟಣದಲ್ಲಿರುವ ಮೃತನ ಸ್ವಗೃಹ ತಲುಪಲಿದ್ದು ಇದಕ್ಕೂ ಮೊದಲು ಅಂತಿಮ ದರ್ಶನಕ್ಕೆ ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ದಯಾನಂದ ಸಾಗರ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ನಡೆದು ಈಗ ಶಿವಮೊಗ್ಗಕ್ಕೆ ಆ್ಯಂಬುಲೆನ್ಸ್ ಮೂಲಕ ಪ್ರಸನ್ನರ ಮೃತದೇಹ ಬರುತ್ತಿದ್ದು ಸುಮಾರು 4-15 ರಿಂದ 4-30 ರ ಸಮಯಕ್ಕೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಗೆ ಮೃತದೇಹ ತಲುಪಲಿದೆ. ಅಲ್ಲಿ 15 ನಿಮಿಷ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಲಾಗುತ್ತಿದೆ.
ನಂತರ ಹೊಸನಗರಕ್ಕೆ ತೆರಳಲಿದ್ದು, ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಬಳಿಯಿಂದ ಪಟ್ಟಣದಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಪ್ರಸನ್ನ ರವರ ಸ್ವಗೃಹದವರೆಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಕೊಂಡೊಯ್ದು ಅಂತ್ಯಕ್ರಿಯೆ ನಡೆಯಲಿದೆ.