ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಮೇಲಿನಕೊಪ್ಪದ ಬಳಿಯಲ್ಲಿ ಮಗುವೊಂದು ಇಲಿ ಪಾಷಾಣದ ಪೇಸ್ಟ್ ತಿಂದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಕೂಲಿ ಕಾರ್ಮಿಕ ಚಂದ್ರಪ್ಪ ಮತ್ತು ಗೀತಾ ದಂಪತಿಯ ಎಂಬುವವರ ಪುತ್ರ ಪ್ರೀತಮ್ (5) ಮೃತ ಬಾಲಕ.
ಇಲಿಗೆ ಅಂತಾ ಇಟ್ಟಿದ್ದ ಪಾಷಾಣವನ್ನು ಮಗು ಚಾಕೊಲೆಟ್ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡಿದೆ. ನಿನ್ನೆ ರಾತ್ರಿ ಮಗು ಅಸ್ಥಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಾವನ್ನಪ್ಪಿದೆ.
ಮಗುವನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಗಿಲು ಮುಟ್ಟಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.