ಜಿಲ್ಲಾ ಸುದ್ದಿ:
ಆದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಎನ್.ಡಿ.ಹೆಗಡೆ
ಆದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಎನ್.ಡಿ.ಹೆಗಡೆ ಆನಂದಪುರ ನಿವಾಸಿಯಾಗಿರುವ ಹೊಸನಗರ ತಾಲೂಕಿನ ಚಿಕ್ಕಜೇನಿ ಪ್ರೌಢ ಶಾಲಾ ಶಿಕ್ಷಕ ಎನ್.ಡಿ.ಹೆಗಡೆಗೆ ಅಕ್ಷರ ದೀಪ ಪೌಂಡೇಶನ್ (ರಿ) ಆದರ್ಶ ರತ್ನ ದ್ರೋಣಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಘೋಷಿಸಿದೆ. ಸೆ.29 ರ ಭಾನುವಾರ ಬೆಳಿಗ್ಗೆ ಶಿರಸಿಯಲ್ಲಿ ನಡೆಯುವ ಮಲೆನಾಡ ಅಕ್ಷರೋತ್ಸವ -2024 ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಜಿಲ್ಲಾ ಘಟಕ ಉತ್ತರ ಕನ್ನಡ ಇದರ ಕಚೇರಿ ಪ್ರಕಟಣೆಯಲ್ಲಿ…
ಸರ್ವಧರ್ಮದ ಸಾರವೂ ಮಾನವೀಯತೆಯೇ ಆಗಿದೆ – ನಿಟ್ಟೂರು ಶ್ರೀಗಳು
ಸರ್ವಧರ್ಮದ ಸಾರವೂ ಮಾನವೀಯತೆಯೇ ಆಗಿದೆ – ನಿಟ್ಟೂರು ಶ್ರೀಗಳು ರಿಪ್ಪನ್ಪೇಟೆ;-ಕೂಡಿ ಬಾಳಿದರೆ ಸುಖ ಎಂಬ ಮಂತ್ರವನ್ನು ನಾವು ತಿಳಿಯಬೇಕಾಗಿದೆ.ಮನುಷ್ಯತ್ವ ಮೀರಿದ ಯಾವುದೇ ಧರ್ಮವಿಲ್ಲ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಧರ್ಮಗುರುಗಳ ಹೆಗಲ ಮೇಲಿದೆ.ವಿವಿಧ ಜಾತಿ ಧರ್ಮ ಸಂಸ್ಕೃತಿಯುಳ್ಳ ದೇಶ ನಮ್ಮದಾಗಿದೆ ಎಂದು ಗರ್ತಿಕೆರೆ ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮಿಜಿ ಹೇಳಿದರು. ರಿಪ್ಪನ್ಪೇಟೆಯ ಮಹಮ್ಮದ್ ಜುಮ್ಮಾ ಮಸೀಧಿ ಗವಟೂರು ತಲಿಝೀಝುಲ್ ಇಸ್ಲಾಂ ಮದ್ರಸ ಬದ್ರಿಯಾ ಮಸ್ಜಿದ್.ಮೀಲಾದ್ ಸಮಿತಿ.ಹಾಗೂ ಎಸ್.ವೈ.ಎಸ್.ಎಸ್.ಎಸ್.ಎಫ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ…
ಆತ್ಮ ಶುದ್ಧೀಕರಣಕ್ಕಾಗಿ ಇರುವುದೇ ಧರ್ಮ – ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು
ಆತ್ಮ ಶುದ್ಧೀಕರಣಕ್ಕಾಗಿ ಇರುವುದೇ ಧರ್ಮ – ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು ರಿಪ್ಪನ್ಪೇಟೆ : ನಮ್ಮ ಆತ್ಮ ಶುದ್ದೀಕರಣವಿದ್ದರೆ ಮಾತ್ರ ಅದು ಧರ್ಮವಾಗಿರುತ್ತದೆ, ಆಯಾ ಧರ್ಮದ ಸಾರವನ್ನು ಅರ್ಥ ಮಾಡಿಕೊಂಡು ಆ ಪ್ರಕಾರ ಜೀವನ ನಡೆಸಿದಲ್ಲಿ ಎಲ್ಲರೂ ಸಂತಸದಿಂದ ಬದುಕಿ ಬಾಳಬಹುದು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು ಹೇಳಿದರು. ಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಆಯೋಜಿಸಿದ್ದ ಸೌಹಾರ್ಧ ಸಂಗಮ ಹಾಗೂ ಶಾಸಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನುದೇಶಿಸಿ ಅವರು ಮಾತನಾಡಿ…
ರಾಜ್ಯ ಸರ್ಕಾರದಿಂದ ಮಲೆನಾಡಿಗರಿಗೆ ಗುಡ್ ನ್ಯೂಸ್ : ಡಾ. ಕಸ್ತೂರಿ ರಂಗನ್ ವರದಿ ತಿರಸ್ಕಾರ
ರಾಜ್ಯ ಸರ್ಕಾರದಿಂದ ಮಲೆನಾಡಿಗರಿಗೆ ಗುಡ್ ನ್ಯೂಸ್ : ಡಾ. ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಲೆನಾಡಿಗರ ಬಹುಕಾಲದ ಬೇಡಿಕೆಯನ್ನು ಪುರಸ್ಕರಿಸಲಾಗಿದ್ದು, ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ. ಪಶ್ಚಿಮ ಘಟ್ಟ ವಲಯವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಿದಲ್ಲಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಒಕ್ಕಲೇಳಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ರಾಜ್ಯದ ಪಶ್ಚಿಮಘಟ್ಟದ 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ…
ಸೆಪ್ಟೆಂಬರ್ 29 ರಂದು ಬೆಂಗಳೂರಿನಲ್ಲಿ ಶ್ರೀ ನಾರಾಯಣಗುರು ಮಹಿಳಾ ಸಮಾವೇಶ – ಲೇಖನ ನಾಯ್ಕ್
ಸೆಪ್ಟೆಂಬರ್ 29 ರಂದು ಬೆಂಗಳೂರಿನಲ್ಲಿ ಶ್ರೀ ನಾರಾಯಣಗುರು ಮಹಿಳಾ ಸಮಾವೇಶ – ಲೇಖನ ನಾಯ್ಕ್ ಶಿವಮೊಗ್ಗ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘದ ವತಿಯಿಂದ ಶ್ರೀನಾರಾಯಣ ಗುರು ಜಯಂತ್ಯೋತ್ಸವ ಅಂಗವಾಗಿ ಪರಿವರ್ತನಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಶ್ರೀನಾರಾಯಣ ಗುರು ಮಹಿಳಾ ಸಮಾವೇಶವನ್ನು ಸೆ.29ರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೇಖನ ನಾಯ್ಕ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ…
ಸುರಿಯುವ ಮಳೆಯಲ್ಲಿ ಬಂಡೆಕಲ್ಲಿನ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ
ಸುರಿಯುವ ಮಳೆಯಲ್ಲಿ ಬಂಡೆಕಲ್ಲಿನ ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ರಿಪ್ಪನ್ಪೇಟೆ : ಸಮೀಪದ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಬಂಡೆಕಲ್ಲಿನ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ಜರುಗಿತು. ಇಂದು ಮುಂಜಾನೆಯಿಂದಲೇ ಭಾರಿ ಮಳೆಯ ಮಧ್ಯ ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿವಿಧಡೆಗಳಿಂದ ಭಕ್ತರು ಜಮಾವಣೆಗೊಂಡು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಮಳೆಯಲ್ಲಿಯೇ ನಿಂತುಕೊಂಡದ್ದು ವಿಶೇಷವಾಗಿತು. ಬೇಡಿ ಬಂದ ಭಕ್ತರ ಆಶೋತ್ತರಗಳನ್ನು ಈಡೇರಿಸುವ ತಾಯಿ ಜೇನುಕಲ್ಲಮ್ಮ ತಾಯಿಗೆ ಮದುವೆಯಾಗದವರು ಸಂತಾನ…
ಇಸ್ಪೀಟು ಅಡ್ಡೆ ಪೊಲೀಸರ ದಾಳಿ – ನಗದು ಸಹಿತ ಹನ್ನೊಂದು ಮಂದಿ ವಶಕ್ಕೆ.!
ಇಸ್ಪೀಟು ಅಡ್ಡೆ ಪೊಲೀಸರ ದಾಳಿ – ನಗದು ಸಹಿತ ಹನ್ನೊಂದು ಮಂದಿ ವಶಕ್ಕೆ.! ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿಯ ಹಳೆಬಾಣೆಗ ಗ್ರಾಮದಲ್ಲಿ ಇಸ್ಪೀಡ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ನಗದು ಹಾಗೂ ಹನ್ನೊಂದು ಮಂದಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಹಳೆ ಬಾಣಿಗ ರಸ್ತೆಯ ಪೊದೆಯೊಂದರ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ದೊರೆತ ಹೊಸನಗರ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ…
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ ಸಂಗಮ ರಿಪ್ಪನ್ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು. ಪಟ್ಟಣದಲ್ಲಿ ಈದ್…
RIPPONPETE | ಬಟ್ಟೆಮಲ್ಲಪ್ಪದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಪತ್ತೆ
RIPPONPETE | ಬಟ್ಟೆಮಲ್ಲಪ್ಪದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಪತ್ತೆ ರಿಪ್ಪನ್ಪೇಟೆ : ಬಟ್ಟೆಮಲ್ಲಪ್ಪ ಗ್ರಾಮದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಶಿವಮೊಗ್ಗದಲ್ಲಿ ರಿಪ್ಪನ್ಪೇಟೆ ಪೊಲೀಸರು ಪತ್ತೆ ಹಚ್ಚಿ, ಪಟ್ಟಣಕ್ಕೆ ವಾಪಾಸು ಕರೆತಂದಿದ್ದು, ಮರಳಿ ಪೋಷಕರಿಗೆ ಒಪ್ಪಿಸಿದ್ದಾರೆ. ಬಟ್ಟೆಮಲ್ಲಪ್ಪ ಗ್ರಾಮದ ನಿವಾಸಿಗಳಾದ ಸಾತ್ವಿಕ್ (13) ನಿರಂಜನ್ (13)ಎಂಬ ಇಬ್ಬರು ಬಾಲಕರು ಬಟ್ಟೆಮಲ್ಲಪ್ಪದಿಂದ ಶಾಲೆಗೆ ತೆರಳುತ್ತೇವೆ ಎಂದು ಗುರುವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಶಾಲಾ ಸಮವಸ್ತ್ರ ದೊಂದಿಗೆ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಬಗ್ಗೆ ಪೋಷಕಕರಿಗೆ ತಿಳಿಯುತಿದ್ದಂತೆ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ…
ಪತ್ನಿಯನ್ನು ಮನೆಗೆ ಕಳಿಸಿಕೊಡಲು ಒಪ್ಪದ ಮಾವನ ಅಡಿಕೆ ತೋಟವನ್ನು ಧ್ವಂಸಗೊಳಿಸಿದ ಅಳಿಯ
ಪತ್ನಿಯನ್ನು ಮನೆಗೆ ಕಳಿಸಿಕೊಡಲು ಒಪ್ಪದ ಮಾವನ ಅಡಿಕೆ ತೋಟವನ್ನು ಧ್ವಂಸಗೊಳಿಸಿದ ಅಳಿಯ ತನ್ನ ಪತ್ನಿಯನ್ನ ಮನೆಗೆ ವಾಪಸ್ ಕಳಿಸಿಲ್ಲ ಎಂಬ ಸಿಟ್ಟಿಗೆ ಮಾವ ಬೆಳಸಿದ್ದ ಅಡಿಕೆ ತೋಟದಲ್ಲಿ ಅಡಿಕೆ ಸಸಿಗಳನ್ನ ಅಳಿಯನೊಬ್ಬ ಕಡಿದು ಹಾಕಿದ ಘಟನೆ ಬಗ್ಗೆ ವರದಿಯಾಗಿದೆ. ಹಾನಗಲ್ ತಾಲ್ಲೂಕಿನ ಬಸಾಪುರದಲ್ಲಿ ಮಾವನ ಜಮೀನಿನಲ್ಲಿ ಬೆಳೆದಿದ್ದ 106 ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ್ದರ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರುದಾರರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವ್ಯಕ್ತಿಯೊಬ್ಬರಿಗೆ ತಮ್ಮ ಮಗಳನ್ನ ಕೊಟ್ಟಿದ್ದರು. ವಿವಿಧ ವಿಚಾರಗಳಿಗೆ…