w
Headlines
Home » ಸಾಲಬಾಧೆ ಬೇಸತ್ತು ನದಿಗೆ ಹಾರಿ ಯುವ ರೈತ ಸಾವಿಗೆ ಶರಣು!

ಸಾಲಬಾಧೆ ಬೇಸತ್ತು ನದಿಗೆ ಹಾರಿ ಯುವ ರೈತ ಸಾವಿಗೆ ಶರಣು!

JPEG 20250313 161624 4862163842133539947.jpg

ಸಾಲಬಾಧೆ ಬೇಸತ್ತು ನದಿಗೆ ಹಾರಿ ಯುವ ರೈತ ಸಾವಿಗೆ ಶರಣು!

ತೀರ್ಥಹಳ್ಳಿ : ಸಾಲಬಾಧೆಯಿಂದ ಯುವ ರೈತನೋರ್ವ ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಮರ ಬಳಿ ನಡೆದಿದೆ.

ಕೈಮರ ಸಮೀಪದ ಹಾಗಲಮನೆ ವಾಸಿ ಯುವ ರೈತ ಕೌಶಿಕ್ 30 ವರ್ಷ ಆತ್ಮಹತ್ಯಗೆ ಶರಣಾದ ದುರ್ದೈವಿ. ಅವಿವಾಹಿತನಾಗಿದ್ದ ಕೌಶಿಕ್ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ.

ಮಾಗರವಲ್ಲಿ ಸೊಸೈಟಿ, ಧರ್ಮಸ್ಥಳ ಸಂಘ,  ಮೈಕ್ರೋ ಫೈನಾನ್ಸ್ ಸೇರಿದಂತೆ ಹಲವು ಕಡೆ ಬಡ್ಡಿಗೆ ಸಾಲ ಪಡೆದಿದ್ದ ಈ ಯುವಕ ಸಾಲದ ಕಿರುಕುಳಕ್ಕೆ ಬೇಸತ್ತು ಹಾಗೂ ಈ ಬಾರಿ ಅಡಿಕೆಗೆ ಬಂದಿರುವ ಎಲೆ ಚುಕ್ಕಿ ರೋಗದಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.